Categories
ಕರಾವಳಿ ಸಿನಿಮಾ

ಡೆವಿಲ್‌ಗೆ ನಾಯಕಿಯಾಗಿ ಕರಾವಳಿ ಬೆಡಗಿ ರಚನಾ ರೈ!

ಡೆವಿಲ್‌ಗೆ ನಾಯಕಿಯಾಗಿ ಕರಾವಳಿ ಬೆಡಗಿ ರಚನಾ ರೈ!
– ದರ್ಶನ್ ಹೀರೋ…ಫಸ್ಟ್‌ ಪೋಸ್ಟರ್‌ ರಿಲೀಸ್‌:
– ಕರಾವಳಿ ಬೆಡಗಿಯರ ಸಾಲಿಗೆ ಹೊಸ ಸೇರ್ಪಡೆ

NAMMUR EXPRESS NEWS
ಮಂಗಳೂರು: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಡೆವಿಲ್‌ ದಿ ಹೀರೋ ಸಿನಿಮಾ ಅನೌನ್ಸ್‌ ಆದ ದಿನದಿಂದ ಅಭಿಮಾನಿಗಳ ವಲಯದಲ್ಲಿ ಕುತೂಹಲ ಮೂಡಿಸಿದೆ.ಕಾಟೇರ ಸಿನಿಮಾ ಯಶಸ್ವಿನ ಬಳಿಕ ಪ್ರಕಾಶ್‌ ವೀರ್‌ ಆಕ್ಷನ್‌ ಕಟ್‌ ಹೇಳುತ್ತಿರುವ ಡೆವಿಲ್‌ ಸಿನಿಮಾದಲ್ಲಿ ದರ್ಶನ್‌ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಡೆವಿಲ್‌ ಚಿತ್ರದ ಫಸ್ಟ್‌ ಗ್ಲಿಂಫ್ಸ್‌ ರಿಲೀಸ್‌ ಮಾಡಲಾಗಿದ್ದು, ದರ್ಶನ್‌ ಅವರ ಹೊಸ ಲುಕ್‌ ಕೂಡ ಗಮನಸೆಳೆಯುತ್ತಿದೆ. ಈ ಬಹುನಿರೀಕ್ಷೆಯ ಈ ಚಿತ್ರಕ್ಕೆ ನಾಯಕಿಯನ್ನು ಪರಿಚಯಿಸಲಾಗಿದೆ. ವಿಶೇಷವೆಂದರೆ ಡೆವಿಲ್‌ ಚಿತ್ರಕ್ಕೆ ನಾಯಕಿಯಾಗಿ ಕರಾವಳಿಯ ಬೆಡಗಿ ಆಯ್ಕೆಯಾಗಿದ್ದಾರೆ. ಶುದ್ಧ ಕೌಶಲ್ಯಕ್ಕಾಗಿ ಗುರುತಿಸಲಾಗಿದೆ ರಚನಾ ರೈ ಎಂದು ಬರೆದು ನಟಿಯ ಫೋಟೊವನ್ನು ಶೇರ್‌ ಮಾಡಲಾಗಿದೆ.

ರಚನಾ ಅವರು ಈಗಾಗಲೇ ತುಳುವಿನ ಸರ್ಕಸ್‌ ಹಾಗೂ ಕನ್ನಡದ ವಾಮನ ಸಿನಿಮಾದಲ್ಲಿ ನಟಿಸಿದ್ದಾರೆ. ರಚನಾ ಅವರು ಡೆವಿಲ್‌ ಸಿನಿಮಾದ ನಾಯಕಿಯಾಗಲಿದ್ದಾರೆ ಎಂದು ಈ ಹಿಂದೆಯೇ ಸುದ್ದಿ ಹಬ್ಬಿತ್ತು. ಇದೀಗ ರಚನಾ ಅವರ ಹೆಸರನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಅಂದಹಾಗೇ ಡೆವಿಲ್‌ ಚಿತ್ರದ ಮೊದಲ ಹಂತದ ಶೂಟಿಂಗ್‌ ಕೂಡ ಈಗಾಗಲೇ ಪೂರ್ಣಗೊಂಡಿದೆ. ಶೀಘ್ರದಲ್ಲೇ ಎರಡನೇ ಹಂತದ ಚಿತ್ರೀಕರಣ ಆರಂಭವಾಗುವ ಸಾಧ್ಯತೆಯಿದೆ. ಮಾಸ್‌ ಸಿನಿಮಾವೆಂದು ಹೇಳಲಾಗುತ್ತಿರುವ ಈ ಸಿನಿಮಾ ಇದೇ ವರ್ಷದ ಅಕ್ಟೋಬರ್‌ ತಿಂಗಳಿನಲ್ಲಿ ರಿಲೀಸ್‌ ಆಗುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.