Categories
ಶಿಕ್ಷಣ

ಶಿಕ್ಷಕ ನೇಮಕಾತಿ ನಿಯಮದಲ್ಲಿ ಬದಲು!

-ಪ್ರೌಢಶಾಲೆ ಶಿಕ್ಷಕರಾಗಲು ಪಿಜಿ ಕಡ್ಡಾಯ
-ಬಿಎಡ್, ಸಿಇಟಿ, ಪದವಿ ಅಂಕಗಳೂ ಪರಿಗಣನೆ

ಬೆಂಗಳೂರು: ಪ್ರೌಢಶಾಲಾ ಶಿಕ್ಷಕರ ನೇಮಕಾತಿ ವಿದ್ಯಾರ್ಹತೆಯನ್ನು ಪದವಿಯಿಂದ ಸ್ನಾತಕೋತ್ತರ ಪದವಿಗೆ ಪರಿಷ್ಕರಿಸಲು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಮಾಡಲು ಕ್ರಮಕೈಗೊಳ್ಳಲಾಗಿದೆ. ಸಮಗ್ರ ಅಧ್ಯಯನ ನಡೆಸಿ ಕರಡು ರಚನೆಗೆ ನಾಲ್ಕು ವಿಭಾಗವಾರು ತಂಡಗಳನ್ನು ನೇಮಕ ಮಾಡಲಾಗಿದೆ.

ಪದವಿ, ಸ್ನಾತಕೋತ್ತರ ಪದವಿ ಹಾಗೂ ಬಿಎಡ್ ನಲ್ಲಿ ಕಡ್ಡಾಯವಾಗಿ ತಲಾ ಶೇಕಡ 50 ರಷ್ಟು ಅಂಕ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು. ಸಿಇಟಿಯಲ್ಲಿ ಪಡೆದ ಶೇಕಡ 60 ರಷ್ಟು ಅಂಕ, ಪದವಿಯ ಶೇಕಡ 20 ರಷ್ಟು, ಹಾಗೂ ತಲಾ ಶೇಕಡ 10 ರಷ್ಟು ಸ್ನಾತಕೋತ್ತರ ಪದವಿ ಮತ್ತು ಬಿಎಡ್ ನಲ್ಲಿ ಪಡೆದ ಅಂಕಗಳನ್ನು ಪರಿಗಣಿಸಲಾಗುವುದು ಎಂದು ಹೇಳಲಾಗಿದೆ.

ಆರರಿಂದ ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಪದವೀಧರ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಆದೇಶಿಸಲಾಗಿದೆ. ಪ್ರಸ್ತುತ ಪ್ರೌಢಶಾಲೆ ಶಿಕ್ಷಕರಾಗಲು ಬಿಎಡ್ ಜೊತೆಗೆ ಯಾವುದಾದರೂ ಪದವಿ ಕಡ್ಡಾಯವಾಗಿದೆ. ಇನ್ನು ಮುಂದೆ, ಸ್ನಾತಕೋತ್ತರ ಪದವಿ ಕಡ್ಡಾಯವಾಗಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.