ಆರೋಗ್ಯ ಎಕ್ಸ್ ಪ್ರೆಸ್
ಗಾಯದಿಂದ ಸುರಿಯುವ ರಕ್ತ ನಿಲ್ಲಿಸಲು ಇಲ್ಲಿದೆ ಟಿಪ್ಸ್!
NAMMUR EXPRESS NEWS
ನೀವು ಮನೆಯಲ್ಲಿ ರಕ್ತಸ್ರಾವವನ್ನು ನಿಲ್ಲಿಸಲು ಕೆಲವು ವಿಧಾನಗಳಿವೆ. ಇದರಿಂದ ನಿಮಗೆ ಯಾವುದೇ ಹಣ ಖರ್ಚಾಗುವುದಿಲ್ಲ ಮತ್ತು ಗಾಯ ಕೂಡ ಬೇಗನೆ ಗುಣವಾಗುತ್ತದೆ. ಗಾಯದಿಂದ ಸುರಿಯುತ್ತಿರುವ ರಕ್ತವನ್ನು ನಿಲ್ಲಿಸಲು ಇಲ್ಲಿದೆ ಟಿಪ್ಸ್ ಯಾವುದೇ ಕೆಲಸ ಮಾಡುವಾಗ ನಮಗರಿವಿಲ್ಲದೆಯೇ ಗಾಯಗಳಾಗುವುದು, ಕಟ್‌ಗಳಾಗುವುದು ಸಾಮಾನ್ಯ. ಸಣ್ಣ ಪುಟ್ಟ ಸ್ಕ್ರಾಚ್ ಅಥವಾ ಕಟ್ ಆಗಿದ್ದರೆ, ಔಷಧಿಯನ್ನು ಹಚ್ಚಿದ ನಂತರ ಅದು ವಾಸಿಯಾಗುತ್ತದೆ. ಆದರೆ ಕೆಲವೊಮ್ಮೆ ನಿರಂತರ ರಕ್ತಸ್ರಾವವಾಗುತ್ತದೆ. ರಕ್ತಸ್ರಾವ ಎಷ್ಟರಮಟ್ಟಿಗಿದೆಯೆಂದರೆ ಹಲವಾರು ಪ್ರಯತ್ನಗಳ ನಂತರವೂ ನಿಲ್ಲುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ವೈದ್ಯರ ಬಳಿಗೆ ಹೋಗಿ ಬ್ಯಾಂಡೇಜ್ ಹಾಕಬೇಕಾಗುತ್ತದೆ.
ಅನೇಕ ಮಕ್ಕಳು ವೈದ್ಯರ ಬಳಿಗೆ ಹೋಗಲು ಹೆದರುತ್ತಾರೆ. ಕೆಲವೊಮ್ಮೆ ಆಸ್ಪತ್ರೆ ಬಹಳ ದೂರದಲ್ಲಿರುತ್ತದೆ. ಆಂತಹ ಸಂದರ್ಭದಲ್ಲಿ ತಕ್ಷಣಕ್ಕೆ ರಕ್ತ ಸುರಿಯುವುದನ್ನು ನಿಲ್ಲಿಸಲು ಈ ಕೆಲವು ಟಿಪ್ಸ್ ಸಹಕಾರಿಯಾಗಬಲ್ಲದು.
– ಕೈಗಳಿಂದ ಒತ್ತಡವನ್ನು ಹೆಚ್ಚಿಸಿ!
ಕತ್ತರಿಸಿರುವ ಪ್ರದೇಶದಿಂದ ಸಾಕಷ್ಟು ರಕ್ತಸ್ರಾವವಾಗಿದ್ದರೆ, ಅದನ್ನು ಸುಲಭವಾಗಿ ನಿಯಂತ್ರಿಸಬಹುದು. ರಾಷ್ಟ್ರೀಯ ಆರೋಗ್ಯ ಸಂಸ್ಥೆಯಲ್ಲಿ ಪ್ರಕಟವಾದ ಅಧ್ಯಯನವು ರಕ್ತಸ್ರಾವವನ್ನು ನಿಲ್ಲಿಸಲು ಈ ಕೆಲವೊಂದು ಮನೆಮದ್ದನ್ನು ಸೂಚಿಸಿದೆ.
ರಕ್ತಸ್ರಾವದ ಪ್ರದೇಶದ ಮೇಲೆ ಸ್ವಚ್ಛವಾದ ಬಟ್ಟೆಯನ್ನು ಇರಿಸಿ ಮತ್ತು ಎರಡೂ ಕೈಗಳಿಂದ ಒತ್ತಿರಿ. ರಕ್ತಸ್ರಾವ ನಿಲ್ಲುವವರೆಗೆ ಒತ್ತಡವನ್ನು ಕಾಪಾಡಿಕೊಳ್ಳಿ.
ಸುಮಾರು 5 ನಿಮಿಷಗಳ ನಂತರ ನೀವು ಅದನ್ನು ತೆಗೆದುಹಾಕಿದರೆ, ರಕ್ತಸ್ರಾವವು ನಿಲ್ಲುತ್ತದೆ.
– ಟೀ ಬ್ಯಾಗ್‌ಗಳ ಬಳಕೆ ಸಹಾಯಕ!
ಬಳಸಿದ ಟೀ ಬ್ಯಾಗ್‌ಗಳು ರಕ್ತಸ್ರಾವವನ್ನು ನಿಲ್ಲಿಸಲು ಉತ್ತಮ ಮನೆಮದ್ದಾಗಿದೆ. ವಿಶೇಷವಾಗಿ ವಸಡುಗಳಲ್ಲಿ ರಕ್ತಸ್ರಾವವಾಗುವುದಕ್ಕೆ ಇದು ರಾಮಬಾಣವಾಗಿದೆ. ಇದಕ್ಕಾಗಿ, ಗ್ರೀನ್ ಟೀ ಸಾರವನ್ನು ವೈದ್ಯರ ಬ್ಯಾಂಡೇಜ್‌ನಲ್ಲಿ ಕಟ್ಟಿಕೊಳ್ಳಿ. ಸ್ವಲ್ಪ ಸಮಯದವರೆಗೆ ರಕ್ತಸ್ರಾವದ ಸ್ಥಳದಲ್ಲಿ ಇರಿಸಿ. ರಕ್ತಸ್ರಾವ ನಿಲ್ಲುತ್ತದೆ ಮತ್ತು ನೋವು ಕಡಿಮೆಯಾಗುತ್ತದೆ.
