ಇಂದು ಶ್ರೀ ಕೊಡಮಣಿತ್ತಾಯ ಹಾಗೂ ಕಲ್ಲುರ್ಟಿ ದೈವದ ವರ್ಷಾವಧಿ ನೇಮೋತ್ಸವ!
– ಹಾಂತ್ಲಾಜೆಗುತ್ತು ಎಂಬ ಸ್ಥಳದಿಂದ ಭಂಡಾರ ಹೊರಡುವ ಕಾರ್ಯಕ್ರಮ!
– ಸಾರ್ವಜನಿಕ ಅನ್ನಸಂತರ್ಪಣೆ ಆಯೋಜನೆ: ಸರ್ವರಿಗೂ ಸ್ವಾಗತ
NAMMUR EXPRESS NEWS
ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಪಾಂಡವರ ಗುಡ್ಡೆ ಎಂಬಲ್ಲಿ ಏ 12ನೇ ಶನಿವಾರ ಅಂದರೆ ಇಂದು ರಾತ್ರಿ ಶ್ರೀ ಕೊಡಮಣಿತ್ತಾಯ ಹಾಗೂ ಕಲ್ಲುರ್ಟಿ ದೈವದ ವರ್ಷಾವಧಿ ನೇಮೋತ್ಸವವು ಅದ್ದೂರಿಯಾಗಿ ನಡೆಯಲಿದೆ.
ಬೆಳಿಗ್ಗೆ 10:45ಕ್ಕೆ ಸರಿಯಾಗಿ ಕೋಳಿ ಕುಂಟ ನಡೆಯಲಿದ್ದು, ಸಂಜೆ 5:00 ಕ್ಕೆ ಹಾಂತ್ಲಾಜೆಗುತ್ತು ಎಂಬ ಸ್ಥಳದಿಂದ ಭಂಡಾರ ಹೊರಡುವ ಕಾರ್ಯಕ್ರಮವು ಜರುಗಲಿದೆ.
ರಾತ್ರಿ 8:00 ಕ್ಕೆ ಸರಿಯಾಗಿ ಸಾರ್ವಜನಿಕ ಅನ್ನಸಂತರ್ಪಣೆ ಹಾಗೂ ರಾತ್ರಿ 9:00 ಕ್ಕೆ ಶ್ರೀ ಕೊಡಮಣಿತ್ತಾಯ ದೈವದ ನೇಮೋತ್ಸವವು ಆಯೋಜಿಸಲಾಗಿದೆ.
ಈ ಕಾರ್ಯಕ್ರಮಕ್ಕೆ ಧನಂಜಯ ಪಾಂಡವರಗುಡ್ಡೆ, ಸತೀಶ್ ಪೂಜಾರಿ ಕೊಯಿಲ, ದೇವರಾಜ್ ಪಾಂಡವರಗುಡ್ಡೆ, ಸೂರಜ್ ಪಾಂಡವರಗುಡ್ಡೆ, ಸತೀಶ್ ಸಾಲ್ಯಾನ್ ಪಾಂಡವರಗುಡ್ಡೆ ಬ್ರಾಮರಿ ಸ್ಟುಡಿಯೋ, ಜಯರಾಮ ಪಾಂಡವರಗುಡ್ಡೆ, ಬಿ.ವಿ ಸಾಗರ್ ಪಾಂಡವರಗುಡ್ಡೆ, ಪ್ರಭಾಕರ ಪಾಂಡವರಗುಡ್ಡೆ, ವಿಜಯ ಪಾಂಡವರಗುಡ್ಡೆ, ಗಿರಿಯಪ್ಪ ಪೂಜಾರಿ ಪಾಂಡವರಗುಡ್ಡೆ, ನಾಗೇಶ್ ಶೆಟ್ಟಿ ಪಾಂಡವರಗುಡ್ಡೆ, ಗಣೇಶ್ ಶೆಟ್ಟಿಗಾರ್, ಬ್ರಿಜೇಶ್ ಅರಳ, ಶ್ರೀಧರ ಪಾಂಡವರಗುಡ್ಡೆ ಹಾಗೂ ಗ್ರಾಮಸ್ಥರು ಈ ಮೂಲಕ ಸರ್ವರಿಗೂ ಆದರದ ಸ್ವಾಗತ ಬಯಸಿದ್ದಾರೆ.
