Categories
ಮಾಹಿತಿ ಸುದ್ದಿ

ಮಾರ್ಚ್ 20 ಇಂದು ವಿಶ್ವ ಗುಬ್ಬಚ್ಚಿ ದಿನ

ಮಾರ್ಚ್ 20 ಇಂದು ವಿಶ್ವ ಗುಬ್ಬಚ್ಚಿ ದಿನ
– ಕ್ಷೀಣಿಸುತ್ತಿರುವ ಪಕ್ಷಿ ಪ್ರಭೇದದಲ್ಲಿ ಗುಬ್ಬಿಯು ಒಂದು
– ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಗುಬ್ಬಿ ಈಗ ವಿನಾಶ

NAMMUR EXPRESS NEWS
ಮಾ.20ರಂದು ವಿಶ್ವದ ವಿವಿಧೆಡೆ ‘ವಿಶ್ವ ಗುಬ್ಬಚ್ಚಿ ದಿನ’ ಆಚರಿಸಲಾಗುತ್ತದೆ. ಕ್ಷೀಣಿಸುತ್ತಿರುವ ಪಕ್ಷಿ ಪ್ರಭೇದದ ಗುಬ್ಬಿಗಳನ್ನು ರಕ್ಷಿಸುವ ಉದ್ದೇಶದಿಂದಲೇ ಮಾ.20 ರಂದು ವಿಶ್ವ ಗುಬ್ಬಚ್ಚಿ ದಿನ ಆಚರಿಸಲಾಗುತ್ತದೆ. ಗುಬ್ಬಿಗಳ ಪ್ರಭೇದ ಸಂರಕ್ಷಣೆ ಉದೇಶದಿಂದಲೇ ವಿಶ್ವಸಂಸ್ಥೆಯು 2010 ಮಾ .20 ರಂದು ಗುಬ್ಬಚ್ಚಿ ದಿನ’ ಎಂದು ಘೋಷಿಸಿತು. ಗ್ರಾಮೀಣ ಭಾಗದಲ್ಲಿ ಜನವಸತಿ ಪ್ರದೇಶಗಳಲ್ಲಿ ಮನೆಗಳ ಒಳಗೇ ಕಾಣಬರುತ್ತಿದ್ದ ಗುಬ್ಬಿಗಳು ಈಗ ವಿನಾಶದ ಅಂಚಿನಲ್ಲಿರುವ ಪಕ್ಷಿ ಪ್ರಭೇದವಾಗಿವೆ. ಹೆಂಚಿನ ಮನೆಗಳ ಜಗುಲಿ, ಮಾಳಿಗೆ, ತೊಲೆ, ಸೂರುಗಳ ಸಂದುಗಳಲ್ಲಿ, ಗೋಡೆಗೆ ನೇತುಹಾಕಿದ ಫೋಟೊ ಚೌಕಟ್ಟಿಗೆ ಹಿಂಬದಿ, ಗಾಳಿಗಾಗಿ ಗೋಡೆಗಳಲ್ಲಿ ಬಿಟ್ಟಿರುತ್ತಿದ್ದ ರಂಧ್ರಗಳಲ್ಲಿ ಗುಬ್ಬಚ್ಚಿಗಳು ಗೂಡು ಕಟ್ಟಿ ವಾಸಿಸುತ್ತಿದ್ದವು. ಸಂತಾನಾಭಿವೃದ್ಧಿ ಮಾಡುತ್ತಿದ್ದವು. ಆದರೆ, ಈಗಿನ ಕಾಲದಲ್ಲಿ ಹಳ್ಳಿಗಳಲ್ಲಿಯೂ ಟಾರಸಿ ಮನೆಗಳ ನಿರ್ಮಾಣವಾಗುತ್ತಿದೆ. ಹೆಂಚಿನ ಮನೆಗಳ ಸಂಖ್ಯೆ ಕಡಿಮೆ ಆಗುತ್ತಿದೆ. ಗುಬ್ಬಚ್ಚಿಗಳನ್ನು ಟಾರಸಿ ಮನೆಗಳು ದೂರವಿಟ್ಟಿವೆ. ಮರಗಳ ಸಂಖ್ಯೆಯೂ ಕಡಿಮೆಯಾಗಿವೆ. ಗುಬ್ಬಿಗಳ ಸಂಖ್ಯೆ ಯೂ ಶೇ.60ರಷ್ಟು ಇಲ್ಲವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.