Categories
ಕರಾವಳಿ

ಕರಾವಳಿಯಲ್ಲೂ ಹುಡುಗಿಯರ ಫೋಟೋ ಬಳ್ಸಿ ಬ್ಲಾಕ್ ಮೇಲ್!

ಕರಾವಳಿ ಟಾಪ್ ನ್ಯೂಸ್

ಕರಾವಳಿಯಲ್ಲೂ ಹುಡುಗಿಯರ ಫೋಟೋ ಬಳ್ಸಿ ಬ್ಲಾಕ್ ಮೇಲ್!

• ಬೈಂದೂರು: ಫೇಸ್ ಬುಕ್ ನಲ್ಲಿ ಕೋಮು ಪ್ರಚೋದಿಸುವ ಸಂದೇಶ; ವ್ಯಕ್ತಿಯ ವಿರುದ್ಧ ದೂರು

• ಬಂಟ್ವಾಳ: ಪಡಿತರ ಅಕ್ಕಿ ಅಕ್ರಮ ದಾಸ್ತಾನುಕರಾವಳಿಯಲ್ಲೂ ಹುಡುಗಿಯರ ಫೋಟೋ ಬಳ್ಸಿ ಬ್ಲಾಕ್ ಮೇಲ್!

• ಇಬ್ಬರು ಅರೆಸ್ಟ್: ವಿಡಿಯೋ ಕಾಲ್ ಮಾಡಿ ವಂಚನೆ

NAMMUR EXPRESS NEWS
ಉಡುಪಿ: ಆನ್‌ಲೈನ್‌ನಲ್ಲಿ ವೀಡಿಯೋ ಕರೆ ಮಾಡಿ ವಂಚನೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ್ರಾಪ್ತ ವಯಸ್ಕ ಸೇರಿದಂತೆ ಆರೋಪಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದು, ಕೃತ್ಯಕ್ಕೆ ಬಳಸಿದ ಸೊತ್ತುಗಳು, ಲಕ್ಷಾಂತರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ರಾಜಸ್ಥಾನದ ಮೂಲದ ಜೈದ್ ಮೊಹಮ್ಮದ್ ಅಲಿಯಾಸ್ ಜೈದ್ ಖಾನ್ (19) ಮತ್ತು ಒಬ್ಬ ಅಪ್ರಾಪ್ತ ಬಾಲಕ ಎಂದು ಗುರುತಿಸಲಾಗಿದೆ.
ಪೊಲೀಸರು ಆರೋಪಿಗಳಿಂದ 5 ಮೊಬೈಲ್ ಫೋನ್ ಮತ್ತು 2 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಇತರ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕ‌ರ್ ತಿಳಿಸಿದ್ದಾರೆ.
ದೂರುದಾರರೊಬ್ಬರಿಗೆ ಫೇಸ್ ಬುಕ್‌ನಲ್ಲಿ ಯುವತಿಯ ಪರಿಚಯವಾಗಿ ದೂರುದಾರರಿಗೆ ವೀಡಿಯೋ ಕರೆ ಮಾಡಿದ್ದು, ವೀಡಿಯೋ ಕರೆ ಸ್ವೀಕರಿಸಿದ ಕೆಲವೇ ನಿಮಿಷಗಳಲ್ಲಿ ಅವರ ಮುಖ ಇರುವ ಮಾರ್ಪಿಂಗ್ ಮಾಡಿದ ನಗ್ನ ವೀಡಿಯೋವನ್ನು ದೂರುದಾರರಿಗೆ ವಾಟ್ಸಾಪ್‌ಗೆ ಕಳುಹಿಸಿದ್ದರು. ಅಪರಿಚಿತ ವ್ಯಕ್ತಿಗೆ ಹಣ ನೀಡದಿದ್ದರೆ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ವೈರಲ್ ಮಾಡುವುದಾಗಿ ಬೆದರಿಸಿ ಹಂತ-ಹಂತವಾಗಿ ಒಟ್ಟು 4,44,999 ರೂ. ವರ್ಗಾಯಿಸಿಕೊಂಡಿದ್ದರು. ಈ ಬಗ್ಗೆ ಸೆನ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಸೆನ್ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ಹಾಗೂ ಪಿ.ಎಸ್.ಐ. ಹರೀಶ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ತನಿಖೆ ಕೈಗೆತ್ತಿಕೊಂಡಿತ್ತು. ಆರೋಪಿಯನ್ನು ಗೋವಾದ ಮಡಗಾಂವ್ ರೈಲು ನಿಲ್ದಾಣದ ಬಳಿ ಬಂಧಿಸಲಾಗಿದೆ.

• ಬೈಂದೂರು: ಜಗದೀಶ್ ಉಡುಪ ಎನ್ನುವವನ ವಿರುದ್ಧ, ಕೋಮುಸೌಹಾರ್ದಕ್ಕೆ ಧಕ್ಕೆಯನ್ನುಂಟುಮಾಡುವ ಸಂದೇಶವನ್ನು ತನ್ನ ಫೇಸ್ ಬುಕ್ ಖಾತೆಯಲ್ಲಿ ಹಾಕಿರುವ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. ಸಾಮಾಜಿಕ ಜಾಲತಾಣಗಳ ನಿರ್ವಹಣಾ ಸಿಬ್ಬಂದಿಯಾಗಿರುವ ಸಂತೋಷ್ ಕುಲಾಲ್ ಅವರು ಆಗಸ್ಟ್ 22ರ ಸಂಜೆ ಸಾಮಾಜಿಕ ಜಾಲತಾಣಗಳನ್ನು ಪರಿಶೀಲಿಸುತ್ತಿದ್ದ ಸಂದರ್ಭದಲ್ಲಿ ಜಗದೀಶ್ ಉಡುಪ ಎನ್ನುವ ಹೆಸರಿನ ಫೇಸ್ ಬುಕ್ ಖಾತೆಯಲ್ಲಿ, ದಸರಾ ಉದ್ಘಾಟನೆಗೆ ಸಂಬಂಧಿಸಿದಂತೆ ಅವಹೇಳನಕಾರಿ ಸಂದೇಶವನ್ನು ಹಾಕುವ ದುಷ್ಕೃತ್ಯವನ್ನು ಎಸಗಿದ್ದಾರೆ. ಇದರ ಆಧಾರದ ಮೇಲೆ ದುಷ್ಕರ್ಮಿಯ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

• ಬಂಟ್ವಾಳ: ಪಡಿತರ ಅಕ್ಕಿ ಅಕ್ರಮ ದಾಸ್ತಾನು

ಬಂಟ್ವಾಳ: ಕಲ್ಲಡ್ಕ ಸಮೀಪದ ಪಟ್ಟೆಕೋಡಿಯಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿರುವ ಖಚಿತವಾದ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ, ಆಹಾರ ಇಲಾಖೆಯ ಅಧಿಕಾರಿಗಳು ಮತ್ತು ನಗರದ ಪೊಲೀಸರು ಶನಿವಾರದಂದು ಆಹಾರ ನಿರೀಕ್ಷಕರಾದ ಪ್ರಶಾಂತ್ ಶೆಟ್ಟಿ ಅವರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ 80 ಸಾವಿರ ರೂಪಾಯಿ ಮೌಲ್ಯದ 25 ಕ್ವಿಂಟಾಲ್ ಅಕ್ಕಿಯನ್ನು, ತೂಕ ಮಾಪನ ಯಂತ್ರವನ್ನು, ಗೋಣಿಚೀಲ ಮತ್ತು ಅಕ್ಕಿ ಸಾಗಾಟಕ್ಕಾಗಿ ಬಳಸಲಾದ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.‌ ಉಮ್ಮರಬ್ಬ ಎಂಬ ವ್ಯಕ್ತಿಯು ತನ್ನ ಗೋದಾಮಿನಲ್ಲಿ ಪಡಿತರ ವಿತರಣೆಗೆ ಮೀಸಲಾಗಿದ್ದ 21.4 ಕ್ವಿಂಟಾಲ್ ಬೆಳ್ತಿಗೆ ಮತ್ತು 4.67 ಕ್ವಿಂಟಾಲ್ ಕುಚಲಕ್ಕಿಯನ್ನು ದಾಸ್ತಾನು ಇರಿಸಿದ್ದು ಕಂಡುಬಂದಿದೆ. ಆರೋಪಿಗಳಾದ ಉಮ್ಮರಬ್ಬ ಮತ್ತು ರಫೀಕ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಇವರಿಗೆ ಪಡಿತರ ಅಕ್ಕಿ ಹೇಗೆ ಲಭಿಸಿತು ಎನ್ನುವುದು ತನಿಖೆಯಿಂದ ಇನ್ನಷ್ಟೇ ತಿಳಿಯಬೇಕಿದೆ.

• ಉಡುಪಿ: ಸಾಲಬಾಧೆಯಿಂದ ವ್ಯಕ್ತಿ ಆತ್ಮಹತ್ಯೆ

ಉಡುಪಿ: ಮಟ್ಟಾರು ಮಾಣಿಬೆಟ್ಟು ನಿವಾಸಿಯಾದ ಸಂತೋಷ್ ಎನ್ನುವವರು, ಸಾಲಬಾಧೆಯಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಟೆಂಪೋ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ಸಂತೋಷ್ ಅವರು, ಕಳೆದ ಕೆಲವು ದಿನಗಳ ಹಿಂದೆ ತಮ್ಮ ಮನೆಗೆ ಆಗಮಿಸಿದ್ದರು. ವಾಹನಕ್ಕೆ ಸಂಬಂಧಿಸಿದಂತೆ ಸಾಲ ಮಾಡಿರುವ ಅವರನ್ನು ಆಗಸ್ಟ್ 21ರಂದು ಫೈನಾನ್ಸ್ ನವರು ಮನೆಗೆ ಬಂದು ವಿಚಾರಣೆ ನಡೆಸಿ ಹೋಗಿದ್ದಾರೆ.‌ ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಕೊರಗರ ಪಾದೆ ಬಳಿಯ ಆಲದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಂತೋಷ್ ಅವರ ಸಹೋದರರಾದ ಪ್ರಸಾದ್ ಶೇರಿಗಾರ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.