Categories
Uncategorized ಕರಾವಳಿ

ಮಂಗಳೂರು: ತ್ರಿಬಲ್ ರೈಡಿಂಗ್, ಇಬ್ಬರು ವಿದ್ಯಾರ್ಥಿಗಳು ಮೃತ್ಯು!

ಕರಾವಳಿ ಟಾಪ್ ನ್ಯೂಸ್

ಮಂಗಳೂರು: ತ್ರಿಬಲ್ ರೈಡಿಂಗ್, ಇಬ್ಬರು ವಿದ್ಯಾರ್ಥಿಗಳು ಮೃತ್ಯು!

– ಮೂಡಬಿದಿರೆ: ಕರಿಮಣ ಸರ ಕಳವುಗೈದ ಆರೋಪಿಯ ಬಂಧನ
– ಮಂಗಳೂರು: ಚೂರಿಯಿಂದ ಇರಿದು ಕೊಲೆಗೈದ ಪ್ರಕರಣ, ಮೂವರಿಗೆ ಶಿಕ್ಷೆ

NAMMUR EXPRESS NEWS
ಮಂಗಳೂರು: ಬೈಕ್ ನಲ್ಲಿ ತ್ರಿಬಲ್ ರೈಡಿಂಗ್ ವೇಳೆ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಡಿಕ್ಕಿ ಹೊಡೆದ ಪರಿಣಾಮ ಕೇರಳ ಮೂಲದ ಇಬ್ಬರು ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡ ಘಟನೆ ಏ. 09ರಂದು ಮುಂಜಾನೆ ಕುಂಟಿಕಾನ ಹಾಗೂ ಕೆಪಿಟಿ ನಡುವೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಅಪಘಾತದಲ್ಲಿ ಇನ್ನೊಬ್ಬ ಸವಾರ ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ವಿದ್ಯಾರ್ಥಿಗಳಾದ ಸಂಕೀರ್ತ್ (23) ಹಾಗೂ ಧನುರ್ವೇದ್ (19) ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ವಿದ್ಯಾರ್ಥಿ ಸಿಬಿ ಸ್ಯಾಮ್ (22) ಗಾಯಗೊಂಡಿದ್ದಾರೆ. ಈ ಮೂರು ವಿದ್ಯಾರ್ಥಿಗಳು ಕೇರಳದವರು ಎಂದು ತಿಳಿದು ಬಂದಿದೆ.
ರಾಯಲ್ ಎನ್‌ಫೀಲ್ಡ್‌ ಬೈಕ್‌ನಲ್ಲಿ ಈ ಮೂವರು ವಿದ್ಯಾರ್ಥಿಗಳು ಕುಂಟಿಕಾನದಿಂದ ಪಂಪ್‌ವೆಲ್ ಕಡೆಗೆ ಹೋಗುತ್ತಿದ್ದರು. ಯಾರೂ ಹೆಲ್ಕೆಟ್ ಧರಿಸಿರಲಿಲ್ಲ. ಅತಿವೇಗದಿಂದ ಸಾಗಿದ ಬೈಕ್ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಸವಾರ ಸಂಕೀರ್ತ್ ಅವರ ತಲೆ ರಸ್ತೆ ವಿಭಜಕಕ್ಕೆ ಬಡಿದಿತ್ತು. ಸಹ ಸವಾರ ಧನುರ್ವೇದ್ ಅವರ ತಲೆ ಸಮೀಪದಲ್ಲಿದ್ದ ವಿದ್ಯುತ್ ಕಂಬಕ್ಕ ಡಿಕ್ಕಿ ಹೊಡೆದಿತ್ತು. ಇಬ್ಬರ ತಲೆಗೂ ಬಲವಾದ ಏಟು ಬಿದ್ದಿತ್ತು. ಗಾಯಗೊಂಡಿದ್ದ ಅವರನ್ನು ಅವರ ಹಿಂದೆ ಇನ್ನೊಂದು ಬೈಕಿನಲ್ಲಿ ಬರುತ್ತಿದ್ದ ಗೆಳೆಯರು ಆಸ್ಪತ್ರೆಗೆ ದಾಖಲಿಸಿದ್ದರು.

– ಮೂಡಬಿದಿರೆ: ಕರಿಮಣ ಸರ ಕಳವುಗೈದ ಆರೋಪಿಯ ಬಂಧನ

ಮೂಡಬಿದಿರೆ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಬೆಳುವಾಯಿಯಲ್ಲಿ ಮಾ.31ರಂದು ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಕರಿಮಣ ಸರ ಕಳವುಗೈದ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಮೂಡಬಿದ್ರೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ಕಾರ್ಕಳ ಕಾಂತಾವರದ ಕಂದಿಲ ನಿವಾಸಿ ಆರೋಪಿ ಪ್ರಶಾಂತ್ ಸಾಲಿಯನ್ ಯಾನೆ ಪಚ್ಚು (34) ಎಂದು ತಿಳಿದು ಬಂದಿದೆ.
ಆರೋಪಿ ಕೈಯಿಂದ ಚಿನ್ನದ ಮಾಂಗಲ್ಯ ಕರಿಮಣಿ ಸರ ಹಾಗೂ ಚಿನ್ನದ ಸರದ ಒಂದು ತುಂಡು ಸ್ವಾಧೀನಪಡಿಸಿಕೊಂಡಿದ್ದು ಹಾಗೂ ಆರೋಪಿಯು ಕೃತ್ಯಕ್ಕೆ ಬಳಸಿದ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ಕೈಯಿಂದ ವಶಪಡಿಸಿಕೊಂಡ ಸೊತ್ತುಗಳ ಅಂದಾಜು ಮೌಲ್ಯ ಸುಮಾರು 3,30,000 ರೂ. ಆಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.

– ಮಂಗಳೂರು: ಚೂರಿಯಿಂದ ಇರಿದು ಕೊಲೆಗೈದ ಪ್ರಕರಣ, ಮೂವರಿಗೆ ಶಿಕ್ಷೆ

ಮಂಗಳೂರು: ವಿದೇಶದಿಂದ ಅಕ್ರಮವಾಗಿ ಸಾಗಾಟ ಮಾಡಿದ ಚಿನ್ನದ ಗಟ್ಟಿ ಮಾರಾಟದಲ್ಲಿ ತಕರಾರು ನಡೆದು ಇಬ್ಬರನ್ನು ಉಪಾಯದಿಂದ ಕರೆಸಿ ಮಲಗಿದಲ್ಲಿಗೆ ಚೂರಿಯಿಂದ ಇರಿದು ಕೊಲೆಗೈದ ಪ್ರಕರಣದಲ್ಲಿ ಮೂವರ ವಿರುದ್ಧದ ಆರೋಪ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
ಕಾಸರಗೋಡು ತಾಲೂಕು ಚೆರ್ಕಳ ಮುಹಮ್ಮದ್ ಮುಹಜೀರ್ ಸನಾಫ್ (34), ಕಾಸರಗೋಡು ಆಣಂಗೂರು ಟಿ.ವಿ.ಸ್ಟೇಷನ್ ರಸ್ತೆ ನಿವಾಸಿ ಎ.ಮುಹಮ್ಮದ್ ಇರ್ಷಾದ್ (35), ಎ.ಮುಹಮ್ಮದ್ ಸಫ್ವಾನ್ (35) ಶಿಕ್ಷೆಗೊಳಗಾದ ಅಪರಾಧಿಗಳು. ನಾಫೀರ್ ಹಾಗೂ ಪಹೀಮ್ ಕೊಲೆಯಾದವರು ಎಂದು ಗುರುತಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.