Categories
ಕರಾವಳಿ

ಉಡುಪಿಗೆ ಭಾರತದ ಮೊದಲ ಹೊಸ ಯೋಜನೆ!

ಉಡುಪಿಗೆ ಭಾರತದ ಮೊದಲ ಹೊಸ ಯೋಜನೆ!
– ಗೋಡಂಬಿ ತ್ಯಾಜ್ಯದಿಂದ ಇಂಗಾಲ ತಯಾರಿಕಾ ಘಟಕ
– ಭಾರತದ ಮೊದಲ ಬಯೋಚಾರ್ ತಯಾರಿಕಾ ಘಟಕಕ್ಕೆ ಸಿದ್ಧತೆ

ಇನ್ನು ಮುಂದೆ ಹಸಿರಾಗಲಿದೆ ಮಂಗಳೂರು!
– ಅರಣ್ಯ ಇಲಾಖೆಯಿಂದ ಹಸಿರು ಅಭಿಯಾನಕ್ಕೆ ನಿರ್ಧಾರ
– 9000 ಗಿಡ ನೆಡಲು ಇಲಾಖೆ ಮಾಸ್ಟರ್ ಪ್ಲಾನ್

NAMMUR EXPRESS NEWS
ಉಡುಪಿ: ಭಾರತದ ಮೊದಲ ಬಯೋಚಾರ್ ಘಟಕ ಸ್ಥಾಪನೆಗೆ ಕರ್ನಾಟಕದ ಜಿಲ್ಲೆಯೊಂದು ಆಯ್ಕೆಯಾಗಿದ್ದು, 100 ಕೋಟಿ ವೆಚ್ಚದಲ್ಲಿ ಈ ಪರಿಸರ ಸ್ನೇಹಿ ಘಟಕ ಸ್ಥಾಪನೆಯಾಗಲಿದೆ ಎಂದು ಸಚಿವರಾದ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಸುಸ್ಥಿರ ಇಂಧನ ಪರಿಹಾರದಲ್ಲಿ ಮುಂಚೂಣಿಯಲ್ಲಿರುವ ಡೆನ್ಮಾರ್ಕ್ ನ ಮಾಷ್ ಮೇಕ್ಸ್ ಕಂಪನಿಯು ಬಯೋಚಾರ್ ತಯಾರಿಕಾ ಘಟಕ ಸ್ಥಾಪನೆಗೆ ಉಡುಪಿ ಜಿಲ್ಲೆಯಲ್ಲಿ ಹೂಡಿಕೆ ಮಾಡಲು ಮುಂದಾಗಿದೆ. ಸಂಸ್ಕರಿತ ಗೋಡಂಬಿಯ ತ್ಯಾಜ್ಯವನ್ನು ಬಳಸಿ ಇಂಗಾಲವನ್ನು ತಯಾರಿಸುವ ಘಟಕ ಇದಾಗಿದೆ. ಇದರಿಂದ ಮಣ್ಣಿನ ಫಲವತ್ತತೆ ಸಮೃದ್ಧವಾಗಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಇದಕ್ಕೆ ಕರ್ನಾಟಕ ಸರ್ಕಾರ ಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ಮಂಗಳೂರು: ಕರಾವಳಿಯ ಪ್ರಮುಖ ನಗರ ಮಂಗಳೂರು ಹಸಿರುಮಯ ವಾತಾವರಣ ನಶಿಸಿ ಹೋಗುತ್ತಿರುವುದನ್ನು ಮನಗಂಡ ಅರಣ್ಯ ಇಲಾಖೆಯು ಮಂಗಳೂರು ನಗರದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿನ ರಸ್ತೆಯ ಬದಿ, ಖಾಲಿ ಜಾಗಗಳಲ್ಲಿ ಸುಮಾರು ಒಂಭತ್ತು ಸಾವಿರ ಸಸಿಗಳನ್ನು ನೆಡುವ ಗುರಿಯನ್ನು ಹೊಂದುವ ಮೂಲಕ ನೆಡುತೋಪು ಎಂಬ ಹೊಸ ಅಭಿಯಾನವನ್ನು ಆರಂಭಿಸಲು ನಿರ್ಧರಿಸಿದೆ. ಇದರಿಂದ ಪ್ರಾಣಿ ಪಕ್ಷಿಗಳಿಗೂ ಪ್ರಯೋಜನವಾಗಲಿದೆ. ಮಳೆಗಾಲ ಗಿಡಗಳನ್ನು ನೆಡಲು ಸೂಕ್ತ ಸಮಯವಾದ್ದರಿಂದ ಬಜ್ಪೆ, ಬಡಗ, ಎಕ್ಕಾರು, ಉಳ್ಳಾಲ, ಮುಡಿಪು ಮತ್ತು ಮಂಗಳೂರು ನಗರದ ಕೆಲವು ಭಾಗಗಳಲ್ಲಿ ನಾಲ್ಕು ಸಾವಿರ ಸಸಿಗಳನ್ನು ನೆಡುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.