Categories
ಕರಾವಳಿ ಮಂಗಳೂರು

ಮಂಗಳೂರಿನ ಈಶಿಕಾ ಶೆಟ್ಟಿ ಸೌಂದರ್ಯ ಸ್ಪರ್ಧೆಯಲ್ಲಿ ವಿನ್!

ಮಂಗಳೂರಿನ ಈಶಿಕಾ ಶೆಟ್ಟಿ ಸೌಂದರ್ಯ ಸ್ಪರ್ಧೆಯಲ್ಲಿ ವಿನ್!
– ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ 2024’ ಪ್ರಶಸ್ತಿ
– ಕರ್ನಾಟಕದಿಂದ ಆಯ್ಕೆಯಾಗಿದ್ದ ಏಕೈಕ ಸ್ಪರ್ಧಿ ಈಶಿಕಾ!

NAMMUR EXPRESS NEWS
ಮಂಗಳೂರು: ದೆಹಲಿಯಲ್ಲಿ ನಡೆದ “ಮಿಸ್ ಟೀನ್ ಗ್ಲೋಬಲ್ ವರ್ಲ್ಡ್ ಇಂಡಿಯಾ ಓಷಿಯಾನ 2024” ಸೌಂದರ್ಯ ಸ್ಪರ್ಧೆಯಲ್ಲಿ ಮಂಗಳೂರಿನ ಈಶಿಕಾ ಶೆಟ್ಟಿ “ಮಿಸ್‌ ಟೀನ್‌ ಗ್ಲೋಬಲ್‌ ವರ್ಲ್ಡ್‌ ಇಂಡಿಯಾ ಓಷಿಯಾನಿಯಾ-2024” ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ದೆಹಲಿಯ ಟಾಲಕಟೋರ ಸ್ಟೇಡಿಯಂನಲ್ಲಿ ಫೆ.27 ರಂದು ನಡೆದ ಸ್ಪರ್ಧೆಯಲ್ಲಿ ದೇಶದ ಒಟ್ಟು 65 ಮಂದಿ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಕರ್ನಾಟಕದಿಂದ ಆಯ್ಕೆಯಾಗಿದ್ದ ಏಕೈಕ ಸ್ಪರ್ಧಿ ಈಶಿಕಾ. ಈಕೆ 2023 ರಲ್ಲಿ “ಮಿಸ್ ಟೀನ್ ಮಂಗಳೂರು” ಆಗಿ, 2023 ರಲ್ಲಿ “ಮಿಸ್ ಟೀನ್ ಕರ್ನಾಟಕ” ಆಗಿ ಆಯ್ಕೆಯಾಗಿದ್ದರು.

ಗ್ಲೋಬಲ್ ಇಂಡಿಯಾ ಎಂಟರ್ಟೈನ್ಮೆಂಟ್ ಪ್ರೊಡಕ್ಷನ್ ಮತ್ತು ಅಲಿ ಶರ್ಮಾ ವತಿಯಿಂದ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾವೂರಿನ ಶಿವನಗರದ ನಿವಾಸಿ, ಪೊಲೀಸ್ ಇಲಾಖೆಯಲ್ಲಿ ಎಎಸ್ಐ ಆಗಿರುವ ಶರತ್ ಕುಮಾರ್ ಶೆಟ್ಟಿ ಹಾಗೂ ಶ್ವೇತಾ ಶೆಟ್ಟಿ ದಂಪತಿಗಳ ಪುತ್ರಿಯಾಗಿರುವ ಇವರು ಶಾರದಾ ವಿದ್ಯಾಲಯ ಮತ್ತು ಬೆಸೆಂಟ್ ಕಾಲೇಜ್‌ನಲ್ಲಿ ಶಿಕ್ಷಣ ಮುಗಿಸಿ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಪದವಿ ಓದುತ್ತಿದ್ದಾರೆ. ತಮಗೆ ಹೆತ್ತವರು ನೀಡಿದ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಸಣ್ಣಂದಿನಿಂದಲೇ ನಾಟಕದಲ್ಲಿ‌‌ ಅಭಿನಯ ಮತ್ತು ಮಾಡೆಲಿಂಗ್‌ ನಲ್ಲಿ ತುಂಬಾ ಆಸಕ್ತಿ ಇತ್ತು. ಈಗ ರಾಷ್ಟ್ರ ಮಟ್ಟದಲ್ಲಿ ಪ್ರಶಸ್ತಿ ಬಂದಿರುವುದು ತುಂಬಾ ಖುಷಿಕೊಟ್ಟಿದೆ ಎಂದಿದ್ದಾರೆ ಈಶಿಕಾ. ತುಳುನಾಡಿನ ಈಶಿಕಾ ಪ್ರಶಸ್ತಿ ಗೆದ್ದಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.