Categories
ಕರಾವಳಿ

ಪ್ರವಾಸಿಗರ ಬೆಸ್ಟ್ ಆಯ್ಕೆ ನಮ್ಮ ಕರಾವಳಿ!

ಪ್ರವಾಸಿಗರ ಬೆಸ್ಟ್ ಆಯ್ಕೆ ನಮ್ಮ ಕರಾವಳಿ!

– ಪ್ರವಾಸಿಗರನ್ನು ಸದಾ ಕೈಬೀಸಿ ಕರೆಯುವ ಕರಾವಳಿ!
– ಪ್ರವಾಸೋದ್ಯಮ ದೇಗುಲಗಳ ನಾಡು, ಬೀಚ್, ಕಾಡುಗಳ ಸೊಬಗು
– ಆತಿಥ್ಯ ಕ್ಷೇತ್ರದಲ್ಲಿ ದೇಶಕ್ಕೆ ಅಪಾರ ಕೊಡುಗೆ

NAMMUR EXPRESS NEWS
ದೇವಸ್ಥಾನ, ಬೀಚುಗಳು, ಹೋಟೆಲ್ ಒಂದೋ ಎರಡೋ ಎಲ್ಲವೂ ಸುಂದರ. ಹೌದು. ಕರಾವಳಿ ಕರುನಾಡು ಮಾತ್ರವಲ್ಲ, ದೇಶದಲ್ಲೇ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿರುವ ಜಾಗ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಒಂದು ಭಾಗ ಜಿಲ್ಲೆಗಳನ್ನು ಒಳಗೊಂಡ ಕರ್ನಾಟಕದ ಕರಾವಳಿಯು ಪ್ರವಾಸೋದ್ಯಮ ಅಂದರೆ ಒಂದು ರೋಮಾಂಚನ ಅನುಭವ ಎಂದೇ ಹೇಳಬಹುದು.
ವಿಶಾಲ ಕಡಲ ತೀರ, ಪುರಾತನ ಹಾಗೂ ಐತಿಹ್ಯ ಹಿನ್ನಲೆಯನ್ನು ಹೊಂದಿರುವ ಪ್ರಸಿದ್ಧ ದೇವಸ್ಥಾನಗಳು ಹಾಗೂ ಗೋವಾದಿಂದ ಮಡಿಕೇರಿವರೆಗೆ ಮೈಚಾಚಿಕೊಂಡಿರುವ ರಮಣೀಯ ಪಶ್ಚಿಮ ಘಟ್ಟದ ಸೊಬಗು- ಪ್ರಕೃತಿ ವಿಸ್ಮಯ.
ಹೀಗಾಗಿ, ಇಲ್ಲಿನ ಬೀಚ್‌ಗಳು, ದೇವಸ್ಥಾನಗಳು, ಐತಿಹಾಸಿಕ ತಾಣಗಳು ಹಾಗೂ ಅವುಗಳಿಗೆ ಪೂರಕವಾಗಿರುವ ಶುಚಿ-ರುಚಿಯಾದ ಹೋಟೆಲ್, ವಿಶ್ರಾಂತಿಯ ತಾಣಗಳು ಪ್ರತಿದಿನವೂ ಸಾವಿರಾರು ಪ್ರವಾಸಿಗರನ್ನು ರಾಜ್ಯ ಮಾತ್ರವಲ್ಲ ದೇಶ- ವಿದೇಶಗಳಿಂದ ಕೈಬೀಸಿ ಕರೆದುಕೊಳ್ಳುತ್ತಿದೆ.
ಪಶ್ಚಿಮದಲ್ಲಿ ಅರೇಬಿಯನ್ ಸಮುದ್ರ ಹಾಗೂ ಪೂರ್ವದಲ್ಲಿ ದಟ್ಟ ರಮಣೀಯ ಪಶ್ಚಿಮ ಘಟ್ಟದ ಹಸಿರಾಗಿ ಕಣ್ಮನ ಸೆಳೆಯುವ ಪ್ರಕೃತಿ. ಇವೆರಡು ಕರಾವಳಿ ಪ್ರವಾಸೋದ್ಯಮ ಸಿರಿವಂತಿಕೆಗೆ ನೈಜ ಸಾಕ್ಷಿಯಾಗಿದೆ.

ದೇವರ ನಾಡು ಈ ಕರಾವಳಿ…!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.