ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಕ್ರಿಕೆಟ್ ದಿಗ್ಗಜನ ವಿಶೇಷ ಪೂಜೆ
– ಪೂಜೆ ಆದ ನಂತರದಲ್ಲಿ ಸಂತಸವನ್ನು ವ್ಯಕ್ತಪಡಿಸಿದ್ದಾರೆ
– ಅನೇಕರ ಉಪಸ್ಥಿತಿಯಲ್ಲಿ ನಡೆದ ವಿಶೇಷ ಪೂಜೆ
NAMMUR EXPRESS NEWS
ಕಾರ್ಕಳ: ತಾಲೂಕಿನ ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಕ್ರಿಕೆಟ್ ದಿಗ್ಗಜ ರವಿ ಶಾಸ್ತ್ರಿಯವರು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಪಕ್ಕದಲ್ಲಿರುವ ನಾಗನ ಸನ್ನಿಧಾನಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ‘ ಇಲ್ಲಿ ಬಂದಾಗೆಲ್ಲ ನನಗೆ ನೆಮ್ಮದಿ, ಶಕ್ತಿ ಬಂದಂತಾಗುತ್ತದೆ. ಮುಂದೆ ಬರುತ್ತಲೇ ಇರುತ್ತೇನೆ’ ಎಂದರು.
ದೇವಸ್ಥಾನದ ವತಿಯಿಂದ ಆಯೋಜಿಸಿದ ಬೆಳಗ್ಗಿನ ಉಪಹಾರವನ್ನು ಸ್ವೀಕರಿಸಿದರು. ಈ ವೇಳೆ ದೇವಸ್ಥಾನದ ವತಿಯಿಂದ ದ್ವಾರ ನಿರ್ಮಿಸುವ ಸಲುವಾಗಿ ಅವರಲ್ಲಿ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭ ದೇವಸ್ಥಾನದ ಮುಖ್ಯ ಅರ್ಚಕರು, ತಂತ್ರಿಗಳು, ಮೊಕ್ತೇಸರರು ಉಪಸ್ಥಿತರಿದ್ದರು