Categories
ಕರಾವಳಿ

ಹೋಟೆಲ್ ಕಾರ್ಮಿಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಹೋಟೆಲ್ ಕಾರ್ಮಿಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ 
– ಜುಲೈ 17ರಂದು ಮಂಗಳೂರಲ್ಲಿ ಕಾರ್ಯಕ್ರಮ: ಸರ್ವರಿಗೂ ಸ್ವಾಗತ
– ಹೋಟೆಲ್‌ ಕಾರ್ಮಿಕರಿಗೆ ಲೇಬರ್ ಕಾರ್ಡ್ ನೋಂದಣಿ, ವಿತರಣೆ ಸಮಾರಂಭ

NAMMUR EXPRESS NEWS
ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ( ರಿ) ಇವರ ವತಿಯಿಂದ ಹೋಟೆಲ್ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯವರ ಸಹಯೋಗದೊಂದಿಗೆ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯ ಹೋಟೆಲ್‌ ಕಾರ್ಮಿಕರಿಗೆ ಲೇಬರ್ ಕಾರ್ಡ್ ನೋಂದಣಿ ಮತ್ತು ವಿತರಣೆ ಸಮಾರಂಭವನ್ನು 17-07-2025, ಬೆಳಿಗ್ಗೆ 11:00 ಗಂಟೆಗೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ, ಕೊಲ್ಯ, ಮಂಗಳೂರಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಶಿವಗಿರಿ ಮಠ ಕೊಂಡಣ ಮಂಗಳೂರು ಇವರು ವಹಿಸಲಿದ್ದು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸತೀಶ್ ಜೋಗಿ ರಾಜ್ಯ ಅಧ್ಯಕ್ಷರು ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ ಇವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಯು ಟಿ ಖಾದರ್ ಸಭಾಪತಿ ಕರ್ನಾಟಕ ವಿಧಾನಸಭೆ ಶಾಸಕರು, ಕುಮಾರ್ ಬಿ.ಆರ್ ಕಾರ್ಮಿಕ ಅಧಿಕಾರಿ ದ.ಕ ಉಪ ವಿಭಾಗ ಮಂಗಳೂರು, ಸುನಿಲ್ ಕುಮಾ‌ರ್ CITU ದಕ್ಷಿಣ ಕನ್ನಡ, ಸತೀಶ್ ಕುಂಪಲ ಜಿಲ್ಲಾಧ್ಯಕ್ಷರು ದಕ್ಷಿಣ ಕನ್ನಡ ಬಿಜೆಪಿ, ಚಂದ್ರಶೇಖ‌ರ್ ಉಚ್ಚಿಲ ಆಡಳಿತ ಮುಖ್ಯಸ್ಥರು, ಕೃಷ್ಣ ಸಮಾಜ ಸೇವಕರು ಶಿವ ಕೃಪ ಕುಂಜತ್ತೂರು, ಸುರೇಶ್ ನಾಯಕ್ ಹೋಟೆಲ್ ಗೋಲ್ಡ್ ಪಿಂಚ್ ಇವರು ವಹಿಸಲಿದ್ದಾರೆ.

ಉಚಿತವಾಗಿ ಕಾರ್ಮಿಕರಿಗೆ ಲೇಬರ್ ಕಾರ್ಡ್ ನೋಂದಣಿ, ವಿತರಣೆ

ಹೋಟೆಲ್ ಕಾರ್ಮಿಕರಿಗೆ ಲೇಬರ್ ಕಾರ್ಡ್ ನೋಂದಣಿ ಮತ್ತು ವಿತರಣೆ
ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆ ಕರ್ನಾಟಕ ರಾಜ್ಯ ಸರ್ಕಾರವು ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಎಲ್ಲಾ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯ ಮೂಲಕ ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಅದರಂತೆ ಇದರ ಪ್ರಯೋಜನವು ಹೋಟೆಲ್ ಕಾರ್ಮಿಕರಿಗೆ ಸಿಗಲಿದ್ದು, ಕರ್ನಾಟಕ ಹೋಟೆಲ್ ಕಾರ್ಮಿಕರ ಸಂಘ ಮತ್ತು ಮಂಗಳೂರು ಕಾರ್ಮಿಕ ಇಲಾಖೆಯ ಸಹಭಾಗಿತ್ವದಲ್ಲಿ ಹೋಟೆಲ್ ಕಾರ್ಮಿಕರಿಗೆ ಫ್ರೀ ಯಾಗಿ ಲೇಬರ್ ಕಾರ್ಡ್ ನೋಂದಣಿ ಮತ್ತು ವಿತರಣಾ ಕ್ಯಾಂಪನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಆದರದ ಸ್ವಾಗತವನ್ನು ರಾಜ್ಯ ಸಮಿತಿಯ ಪದಾಧಿಕಾರಿಗಳು, ಮಂಗಳೂರು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಕರ್ನಾಟಕ ಹೋಟೆಲ್ ಕಾರ್ಮಿಕ ಸಂಘ ಇವರು ಕೋರಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.