Categories
ಕರಾವಳಿ

ಪುತ್ತೂರಿನಲ್ಲಿ ಕಾಡಾನೆ ದಾಳಿ; ಮಹಿಳೆ ದಾರುಣ ಸಾವು

ಕರಾವಳಿ ಟಾಪ್ ನ್ಯೂಸ್!

ಪುತ್ತೂರಿನಲ್ಲಿ ಕಾಡಾನೆ ದಾಳಿ; ಮಹಿಳೆ ದಾರುಣ ಸಾವು

– ಮಂಗಳೂರು: ಬೇಕರಿಗೆ ಬೆಂಕಿ ಅವಘಡ; ಭಾರೀ ನಷ್ಟ!
– ಕಾರ್ಕಳ: ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ
– ಮಂಗಳೂರು: ಯುವತಿಯಿಂದ ಧರ್ಮ ವಿರೋಧಿ ಪೋಸ್ಟ್: ‘FIR!
– ಕಾರ್ಕಳ:ಅಂದರ್ ಬಾಹರ್ ಜುಗಾರಿ ಆಟ: 7 ಮಂದಿ ವಶ

NAMMUR EXPRESS NEWS
ಪುತ್ತೂರು: ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕಣಿಯಾರು ಮಲೆ ಅರ್ತಿಯಡ್ಕ ಸಿಆರ್‌ಸಿ ಕಾಲನಿ ಬಳಿ ಕಾಡಾನೆ ದಾಳಿಗೆ ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮುಂಜಾನೆ ರಬ್ಬರ್‌ ಟ್ಯಾಪಿಂಗ್‌ಗೆಂದು ಬಂದಿದ್ದ ಅರ್ತಿಯಡ್ಕದ ಮಹಿಳೆಯೊಬ್ಬರು ಮೇಲೆ ಎ.29 ಮಂಗಳವಾರ ಕಾಡಾನೆ ದಾಳಿ ಮಾಡಿದೆ. ಆನೆ ದಾಳಿಯಿಂದ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

– ಮಂಗಳೂರು: ಬೇಕರಿಯಲ್ಲಿ ಬೆಂಕಿ ಅವಘಡ; ಭಾರೀ ನಷ್ಟ!

ಮಂಗಳೂರು: ಬೇಕರಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿರುವ ಘಟನೆ ಎ.29 ಮಂಗಳವಾರ ಮುಂಜಾನೆ ನಡೆದಿರುವ ಕುರಿತು ವರದಿಯಾಗಿದೆ.
ನಗರದ ಪಾಂಡೇಶ್ವರ ಬಳಿಯ ಬೇಕರಿಯಲ್ಲಿ ಈ ಘಟನೆ ಸಂಭವಿಸಿದ್ದು, ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ ತಗುಲಿದೆ ಎನ್ನುವ ಕುರಿತು ವರದಿಯಾಗಿದೆ. ಈ ಅವಘಡದಿಂದ ಐದು ಲಕ್ಷಕ್ಕೂ ಅಧಿಕ ಮೊತ್ತದ ವಸ್ತು ಬೆಂಕಿಗೆ ಅಹುತಿಯಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿರುವ ಕುರಿತು ವರದಿಯಾಗಿದೆ.
ಪಾಂಡೇಶ್ವರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ ಎಂದು ವರದಿಯಾಗಿದೆ.

– ಕಾರ್ಕಳ: ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆ

ಕಾರ್ಕಳ: ಉದ್ಯಮಿಯೋರ್ವರು ಗುಂಡು ಹಾರಿಸಿಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ಕಾರ್ಕಳ ತಾಲೂಕು ನಿಟ್ಟೆ ದೂಪದಕಟ್ಟೆ ರಾಜ್ಯ ಹೆದ್ದಾರಿ ಬಳಿ ಏ. 29 ಮಂಗಳವಾರ ಮುಂಜಾನೆ ನಡೆದಿದೆ.
ಕಾರ್ಕಳದ ದಿಲೀಪ್ ಎನ್ ಆರ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ದಿಲೀಪ್ ಎನ್ ಆರ್ ಅವರು ಮಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದು ಮಂಗಳವಾರ ನಸುಕಿನ ಜಾವ ಕಾರ್ಕಳದ ನಿಟ್ಟೆ ದೂಪದಕಟ್ಟೆ ರಾಜ್ಯ ಹೆದ್ದಾರಿ ಬಳಿಯ ಎಸ್ಟೇಟ್ ಮುಂಭಾಗ ಕಾರು ನಿಲ್ಲಿಸಿ ಕಾರಿನೊಳಗೆ ಕುಳಿತು ಸ್ವಯಂ ತಾನೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಉದ್ಯಮ ನಷ್ಟ ಹಾಗೂ ವಿಪರೀತ ಸಾಲ ಆತ್ಮಹತ್ಯೆಗೆ ಕಾರಣ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಕೆಲ ವರ್ಷಗಳಿಂದ ಕುಟುಂಬದ ಜೊತೆ ಮಂಗಳೂರಿನಲ್ಲಿ ವಾಸವಾಗಿದ್ದರು.
ಕಾರಿನಲ್ಲಿ ಸ್ವೀಟ್ ಬಾಕ್ಸ್ , ರಿವಾಲ್ವರ್ ಪತ್ತೆಯಾಗಿದ್ದು ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರೀಶಿಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಮಣಿಪಾಲ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿಲೀಪ್ ಅವರು ಕಾರ್ಕಳ ಪುರಸಭೆ ಮಾಜಿ ಅಧ್ಯಕ್ಷ ಸುಭೀತ್ ಎನ್ ಆರ್ ಅವರ ಸಹೋದರರಾಗಿದ್ದಾರೆ.

– ಮಂಗಳೂರು: ಯುವತಿಯಿಂದ ಸಾಮಾಜಿಕ ಜಾಲತಾಣದಲ್ಲಿ ಧರ್ಮ ವಿರೋಧಿ ಪೋಸ್ಟ್ : ‘FIR’!

ಮಂಗಳೂರು: ಯುವತಿಯಿಂದ ಸಾಮಾಜಿಕ ಜಾಲತಾಣದಲ್ಲಿ ಧರ್ಮ ವಿರೋಧಿ ಹಾಗೂ ದೇಶದ್ರೋಹಿ ಪೋಸ್ಟ್ ಹಂಚಿಕೊಳ್ಳಲಾಗಿದ್ದು, ಹೈಲ್ಯಾಂಡ್ ಆಸ್ಪತ್ರೆಯ ವೈದ್ಯ ಅಸಿಫಾ ಫಾತಿಮಾ ಎಂಬ ವೈದ್ಯೆ ಧರ್ಮ ವಿರೋಧಿ ಪೋಸ್ಟ್ ಹಂಚಿಕೊಂಡಿದ್ದಾಳೆ. ಇದೀಗ ಆಸ್ಪತ್ರೆಯ ಎಚ್ ಆರ್ ಅವರ ದೂರು ಆಧರಿಸಿ ಮಂಗಳೂರಿನ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ವೈದ್ಯೆ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪೋಸ್ಟ್ ನಲ್ಲಿ “ಕಾಪಾಡಿ ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ”. ಹೌದು ನಾನು ಭಾರತೀಯಳು ಆದರೆ ನಾನು ಭಾರತವನ್ನು ದ್ವೇಷಿಸುತ್ತೇನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವೈದ್ಯೆ ಅಸಿಫಾ ಫಾತಿಮಾ. ಇದೀಗ ಹೈಲ್ಯಾಂಡ್ ಆಸ್ಪತ್ರೆಯ ವೈದ್ಯೆ ಫಾತಿಮಾ ವಿರುದ್ಧ ಇದೀಗ ತೀವ್ರ ಅಕ್ರೋಶ ವ್ಯಕ್ತವಾಗುತ್ತಿದೆ.
ಆಕ್ರೋಶ ಭುಗಿಲೆಳುತ್ತಿದಂತೆ ಆಡಳಿತ ಮಂಡಳಿ ವೈದ್ಯೆ ಅಸಿಫಾ ಫಾತಿಮಾ ಅವರನ್ನು ಆಸ್ಪತ್ರೆಯಿಂದ ವಜಾಗೊಳಿಸಿದೆ. ಸದ್ಯ ಅಸಿಫಾ ವಿರುದ್ಧ ಪೊಲೀಸರು FIR ದಾಖಲಿಸಿಕೊಂಡಿದ್ದಾರೆ. ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ. ಐಲ್ಯಾಂಡ್ ಆಸ್ಪತ್ರೆ ಎಚ್ ಆರ್ ಮೊಹಮ್ಮದ್ ಅಸ್ಲಾಂ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಬಿಎನ್ಎಸ್ 196 (1) (a), 353 (2) ಅಡಿಯಲ್ಲಿ FIR ದಾಖಲಾಗಿದೆ.

– ಕಾರ್ಕಳ: ಅಂದರ್ ಬಾಹರ್ ಜುಗಾರಿ ಆಟ: 7 ಮಂದಿ ವಶಕ್ಕೆ

ಕಾರ್ಕಳ: ಕೌಡೂರು ಗ್ರಾಮದ ಎಲಿಯಾಳ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಟ ಆಡುತ್ತಿದ್ದ 7 ಮಂದಿ ಆರೋಪಿಗಳನ್ನು ಏ. 27ರಂದು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ.
ಪಳ್ಳಿ ಗ್ರಾಮದ ಬೊಬ್ಬರಪಲ್ಕೆಯ ಗಣೇಶ (38), ಕೌಡೂರಿನ ಮಂಜುನಾಥ (33), ಬೈಲೂರಿನ ರಾಕೇಶ (24), ಕಡಂದಲೆಯ ಗಣೇಶ (46), ಉಡುಪಿಯ ಬೇಲೆಕೆರೆಯ ಸೋಮ ಸುಂದರ (45), ಸಂಜೀವ ಬಾಣಲೆ, ಅಖಿಲೇಶ್‌ ಕಣಜಾರು ಮತ್ತು ಅವಿನಾಶ್ ಜನ್ನ ಬೈಲೂರು ಬಂಧಿತ ಆರೋಪಿಗಳು.
ಪೊಲೀಸ್‌ ಉಪನಿರೀಕ್ಷಕ ಸಂದೀಪ್ ಕುಮಾ‌ರ್ ಶೆಟ್ಟಿ ಅವರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿ, 33,035 ರೂ. ನಗದು ಮತ್ತು ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.