ಮೇ 3ಕ್ಕೆ ಕಡಿದಾಳ್ ಪ್ರಕಾಶ್ ಅವರ ಪುಸ್ತಕ ಬಿಡುಗಡೆ
– ನನ್ನೂರಿನ ಶ್ರೀಸಾಮಾನ್ಯರು ಹಾಗೂ ನಾ ಕಂಡಂತೆ ತೇಜಸ್ವಿ-ಶಾಮಣ್ಣ ಕೃತಿ ಬಿಡುಗಡೆ ಮತ್ತು ಅವಲೋಕನ
NAMMUR EXPRESS NEWS
ತೀರ್ಥಹಳ್ಳಿ: ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು
03-05-2025, ಸಂಜೆ 5.00 ಗಂಟೆಗೆ ಶಾಂತವೇರಿ ಗೋಪಾಲಗೌಡ ರಂಗಮಂದಿರ, ತೀರ್ಥಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಆರಗ ಜ್ಞಾನೇಂದ್ರ ವಹಿಸಲಿದ್ದಾರೆ.
“ನನ್ನೂರಿನ ಶ್ರೀಸಾಮಾನ್ಯರು” ಕೃತಿ ಬಿಡುಗಡೆ ಮತ್ತು ಅವಲೋಕನ ಗಿರೀಶ್ ಕಾಸರವಳ್ಳಿ ಪದ್ಮಶ್ರೀ ಪುರಸ್ಕೃತ ಹಾಗೂ ಸ್ವರ್ಣಕಮಲ ವಿಜೇತ ಚಲನಚಿತ್ರ ನಿರ್ದೇಶಕರು, ಬೆಂಗಳೂರು. ಹಾಗೂ “ನಾ ಕಂಡಂತೆ ತೇಜಸ್ವಿ-ಶಾಮಣ್ಣ” ಕೃತಿಯ ಪರಿಷ್ಕೃತ ಆವೃತ್ತಿ (3ನೇ ಮುದ್ರಣ) ಬಿಡುಗಡೆ ಮತ್ತು ಅವಲೋಕನ, ಜಿ.ಎನ್. ಮೋಹನ್ ಪತ್ರಕರ್ತರು, ಲೇಖಕರು ಮತ್ತು ಪ್ರಕಾಶಕರು, ಬೆಂಗಳೂರು
“ಕಟ್ಟುವ ಹಾದಿಯಲ್ಲಿ… ಕುವೆಂಪು ಪ್ರತಿಷ್ಠಾನ : ಉಗಮ ವಿಕಾಸ
ಕೃತಿ ಕುರಿತು ಅಭಿಪ್ರಾಯ ಮಂಡನೆ ಮಾಡಲಿದ್ದಾರೆ. ಕಿಮ್ಮನೆ ರತ್ನಾಕರ್ ಮಾಜಿ ಶಿಕ್ಷಣ ಸಚಿವರು ಈ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.
ಸರ್ವರಿಗೂ ಆದರದ ಸ್ವಾಗತವನ್ನು ಕಡಿದಾಳ್ ಪ್ರಕಾಶ್ ಲೇಖಕರು,
ಅಭಿರುಚಿ ಗಣೇಶ್ ಅಭಿರುಚಿ ಪ್ರಕಾಶನ, ಮೈಸೂರು, ಆಸಕ್ತರ ಬಳಗ ಹಾರೋಗೊಳಿಗೆ ಇವರು ಕೋರಿದ್ದಾರೆ. ಕಾಫಿ-ತಿಂಡಿ ಜೊತೆಯಲ್ಲಿ ಮಾತುಕತೆ ಸಂಜೆ 4.00 ರಿಂದ 5.00 ಗಂಟೆಯವರೆಗೆ ನಡೆಯಲಿದೆ.
