Categories
ಬೆಂಗಳೂರು

ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ಉಗ್ರರ ಅಮಾನುಷ ಹತ್ಯಾಕಾಂಡವನ್ನು ಖಂಡಿಸಿ ತಹಶೀಲ್ದಾರ್ ಗೆ ಮನವಿ

ಕಾಶ್ಮೀರದಲ್ಲಿ ಹಿಂದೂಗಳ ಮೇಲಿನ ಉಗ್ರರ ಅಮಾನುಷ ಹತ್ಯಾಕಾಂಡವನ್ನು ಖಂಡಿಸಿ ತಹಶೀಲ್ದಾರ್ ಗೆ ಮನವಿ
– ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆಯಿಂದ ಪ್ರಬಲ ಕ್ರಮ ಕೈಗೊಳ್ಳುವಂತೆ ಅಗ್ರಹ
– ಉಗ್ರ ಸಂಘಟನೆಗಳನ್ನು ಶೀಘ್ರವೇ ಪತ್ತೆ ಹಚ್ಚಿ ಕಾನೂನಾತ್ಮಕವಾಗಿ ಶಿಕ್ಷಿಸಬೇಕೆಂದು ವಿನಂತಿ

NAMMUR EXPRESS NEWS
ಇತ್ತೀಚೆಗೆ ಕಾಶ್ಮೀರದಲ್ಲಿ ಉಗ್ರರು ನಡೆಸಿದ ಅಮಾನುಷ ಹತ್ಯಾಕಾಂಡಗಳು ನಮ್ಮೆಲ್ಲರ ಮನಸ್ಸಿಗೆ ಆಘಾತವನ್ನುಂಟು ಮಾಡಿವೆ. ಅಮಾಯಕ ಹಿಂದೂ ನಾಗರಿಕರನ್ನು ಲಕ್ಷವಿಟ್ಟು ನಡೆದ ಈ ಕ್ರೂರ ದಾಳಿಗಳು ಮಾನವೀಯತೆಗೆ ಅಪಮಾನವಾಗಿವೆ. ಈ ಘಟನೆಯು ಭಾರತೀಯ ಸಂವಿಧಾನವು ಸಾರುವ ಶಾಂತಿ, ಸಮಾನತೆ ಮತ್ತು ಸಹಬಾಳ್ವೆ ಮೌಲ್ಯಗಳಿಗೆ ಧಕ್ಕೆ ಉಂಟುಮಾಡಿದೆ.
ಈ ಹತ್ಯಾಕ್ಯಾಂಡವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಸರ್ಕಾರ ಈ ರೀತಿಯ ಕ್ರೂರ ಕೃತ್ಯಗಳನ್ನು ತಡೆಗಟ್ಟಲು ತ್ಯರಿತ ಮತ್ತು ಪ್ರಬಲ ಕ್ರಮಗಳನ್ನು ಕೈಗೊಳ್ಳಬೇಕು. ಖಾತರಿಯ ಶಾಂತಿ ಮತ್ತು ಸುರಕ್ಷತೆಯನ್ನು ಕಲ್ಪಿಸಿ. ಸಾರ್ವಜನಿಕರಲ್ಲಿ ವಿಶ್ವಾಸವನ್ನು ಬಲಪಡಿಸಬೇಕು.

ಮಾನವೀಯ ಹಕ್ಕುಗಳನ್ನು ಕಾಪಾಡುವುದು ಪ್ರತಿಯೊಬ್ಬನ ಜವಾಬ್ದಾರಿ. ನಾವು ಶಾಂತಿ, ಸಹಿಷ್ಣುತೆ ಮತ್ತು ಸಮಾನತೆಯ ಪರವಾಗಿದ್ದೇವೆ ಎಂಬುದನ್ನು ಈ ಸಂದರ್ಭದಲ್ಲಿಯೂ ಸಾಬೀತುಪಡಿಸಬೇಕು.
ನಾವು ಈ ಮನವಿಯನ್ನು ಮಾನವೀಯತೆಯ ಧ್ವನಿಯಾಗಿ ಸಲ್ಲಿಸುತ್ತಿದ್ದೇವೆ. ಸಂಬಂಧಿತ ಉಗ್ರ ಸಂಘಟನೆಗಳನ್ನು ಶೀಘ್ರವೇ ಪತ್ತೆ ಹಚ್ಚಿ. ಕಾನೂನಾತ್ಮಕವಾಗಿ ಶಿಕ್ಷಿಸಬೇಕೆಂದು ನಿಮಗೆ ವಿನಂತಿಸುತ್ತೇವೆ.
ಅಧ್ಯಕ್ಷರು ಆದ ದಿವಾಕರ್ ಬಿ ಆರ್ ಹಾಗೂ ಪದಾಧಿಕಾರಿಗಳು ಆದ ನಯನ ಶೆಟ್ಟಿ, ಜ್ಯೋತಿ ದೀಲಿಪ್, ನಿರಂಜನ್, ಹೇಮರಾಜ್
ಯೋಗೇಂದ್ರ ಶೆಟ್ಟಿ, ನಾಗರಾಜ್, ಷಣ್ಮುಖ, ವಿಶಾಲ್ ಕುಮಾರ್
ಈ ಸಂದರ್ಭದಲ್ಲಿ ಇವರೆಲ್ಲ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.