Categories
ಕಾರ್ಕಳ

ಕ್ರೈಸ್ಟ್ ಕಿಂಗ್ : ವಾಲಿಬಾಲ್‌ನಲ್ಲಿ ಪ್ರೌಢಶಾಲಾ ಹಾಗೂ ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿಯರ ಸಾಧನೆ

ಕ್ರೈಸ್ಟ್ ಕಿಂಗ್ : ವಾಲಿಬಾಲ್‌ನಲ್ಲಿ ಪ್ರೌಢಶಾಲಾ ಹಾಗೂ ಪ್ರಾಥಮಿಕ ವಿಭಾಗದ ವಿದ್ಯಾರ್ಥಿನಿಯರ ಸಾಧನೆ
* ಪ್ರೌಢಶಾಲೆ: ಕ್ರೈಸ್ಟ್ ಕಿಂಗ್ ಬಾಲಕಿಯರ ತಂಡ ಪ್ರಥಮ – 3 ಮಂದಿ ಮೈಸೂರು ಹಂತಕ್ಕೆ.
* ಪ್ರಾಥಮಿಕ: 3 ವಿದ್ಯಾರ್ಥಿನಿಯರು ಮೈಸೂರು ಹಂತಕ್ಕೆ – ತ್ರಿಷ್ಮಾ ಎಸ್. ಬೆಸ್ಟ್ ಅಟ್ಯಾಕರ್.

NAMMUR EXPRESS NEWS
ಕಾರ್ಕಳ: ಜಿಲ್ಲಾ ಪಂಚಾಯತ್ ಉಡುಪಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಸರ್ಕಾರದ ಸಹಯೋಗದಲ್ಲಿ ಕಾವಡಿಯಲ್ಲಿ ನಡೆದ ಜಿಲ್ಲಾಮಟ್ಟದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೆಸ್ಟ್ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದೆ.

ಈ ತಂಡದಲ್ಲಿ ಒಂಬತ್ತನೇ ತರಗತಿಯ ಶಗುನ್ ವರ್ಮಾ, ಶೈನಿ ಡಿಸೋಜಾ, ಕಾರ್ತಿಕಾ ಶೆಟ್ಟಿ, ಆಶಿಕಾ, ಹತ್ತನೇ ತರಗತಿಯ ವಿದ್ಯಾಶ್ರೀ, ಕೀರ್ತನಾ ಡಿಸೋಜಾ ಹಾಗೂ ಎಂಟನೇ ತರಗತಿಯ ಸಾನ್ವಿ ಶೆಟ್ಟಿ ಪಾಲ್ಗೊಂಡಿದ್ದರು. ಇವರಲ್ಲಿ ಶಗುನ್ ವರ್ಮಾ, ಶೈನಿ ಡಿಸೋಜಾ ಮತ್ತು ಕಾರ್ತಿಕಾ ಶೆಟ್ಟಿ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಗುನ್ ವರ್ಮಾ ಬೆಸ್ಟ್ ಅಟ್ಯಾಕರ್, ಶೈನಿ ಡಿಸೋಜಾ ಬೆಸ್ಟ್ ಪಾಸರ್ ಪ್ರಶಸ್ತಿ ಗಳಿಸಿದ್ದಾರೆ.

ಇದೇ ವೇಳೆ, ಪ್ರಾಥಮಿಕ ವಿಭಾಗದ ಕಾರ್ಕಳ ತಾಲೂಕು ಬಾಲಕಿಯರ ತಂಡವೂ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿದೆ. ಈ ತಂಡವನ್ನು ಪ್ರತಿನಿಧಿಸಿದ ಕ್ರೈಸ್ಟ್ ಕಿಂಗ್ ಶಾಲೆಯ ವಿದ್ಯಾರ್ಥಿನಿಯರಾದ ತ್ರಿಷ್ಮಾ ಎಸ್., ಕೆಟ್ಲಿನ್ ಏಂಜೆಲ್ ಪಿಂಟೊ, ಎಲ್ಸಾ ರುಬೆಲ್ ಆಯ್ಕೆಯಾದರು. ತ್ರಿಷ್ಮಾ ಎಸ್. ಬೆಸ್ಟ್ ಅಟ್ಯಾಕರ್ ಪ್ರಶಸ್ತಿ ಪಡೆದುಕೊಂಡರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.