Categories
ಕಾರ್ಕಳ

ತಾಯಿ ಮತ್ತು ಮಗುವಿನ ಆರೋಗ್ಯ ಕುರಿತು ಅರಿವು ಮೂಡಿಸಿದ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ – ಶ್ರೀ ದುರ್ಗಾ ಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

ತಾಯಿ ಮತ್ತು ಮಗುವಿನ ಆರೋಗ್ಯ ಕುರಿತು ಅರಿವು ಮೂಡಿಸಿದ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ – ಶ್ರೀ ದುರ್ಗಾ ಶಾಲೆಯಲ್ಲಿ ಆರೋಗ್ಯ ಮಾಹಿತಿ ಕಾರ್ಯಕ್ರಮ

ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇದರ ಸಹಯೋಗದಲ್ಲಿ ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಜೋಡುರಸ್ತೆ, ಕುಕ್ಕುಂದೂರು ಇಲ್ಲಿ ದಿನಾಂಕ 26.07.2025 ಶನಿವಾರ ” ತಾಯಿ ಮತ್ತು ಮಗುವಿನ ಆರೋಗ್ಯ”ಎಂಬ ವಿಷಯದ ಕುರಿತು ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಅಯೋಜಿಸಲಾಗಿತ್ತು. ಕಾರ್ಯಕ್ರಮದ ವೇದಿಕೆಯಲ್ಲಿ ರೋಟರಿ ವಲಯ ಸೇನಾನಿ ರೋ. ಪ್ರಶಾಂತ ಬೆಳಿರಾಯ , ಕಾರ್ಯದರ್ಶಿಗಳಾದ ರೋ.ರಾಘವೇಂದ್ರ ಕಾಮತ್, ಪೂರ್ವಾಧ್ಯಕ್ಷರಾದ ರೋ ಸುರೇಶ್ ನಾಯಕ್, ಸಂಪನ್ಮೂಲ ವ್ಯಕ್ತಿಗಳಾದ ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳ ಇಲ್ಲಿನ ಪ್ರಸೂತಿ ತಜ್ಞರಾದ ಡಾಕ್ಟರ್ ಕೃಷ್ಣಾನಂದ ಮಲ್ಯ, ಪ್ರಾಥಮಿಕ ಆರೋಗ್ಯ ಘಟಕ, ನಕ್ರೆ ಕುಕ್ಕುಂದೂರು ಇಲ್ಲಿನ ವೈದ್ಯಾಧಿಕಾರಿಗಳಾದ ಡಾಕ್ಟರ್ ಶ್ರೀವಿದ್ಯಾ ಎಸ್ ಕಿದಿಯೂರು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಡಾಕ್ಟರ್ ಕೃಷ್ಣಾನಂದ ಮಲ್ಯ ರವರು ಗರ್ಭಿಣಿ ಮಹಿಳೆಯರ ಆರೋಗ್ಯ, ಆಹಾರ ಪದ್ಧತಿ, ಪೌಷ್ಟಿಕಾಂಶಗಳ ಮಾಹಿತಿ, ಮಾನಸಿಕ ಆರೋಗ್ಯದ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು . ಡಾಕ್ಟರ್ ಶ್ರೀವಿದ್ಯಾರವರು ಮಕ್ಕಳ ಆರೋಗ್ಯ, ಆಹಾರ ಪದ್ಧತಿ, ಪೌಷ್ಟಿಕತೆಯ ಅವಶ್ಯಕತೆಯ ಮಾಹಿತಿ ನೀಡಿದರು. ಸಂಪನ್ಮೂಲ ವ್ಯಕ್ತಿಗಳನ್ನು ರೋಟರಿ ಕ್ಲಬ್ ಕಾರ್ಕಳ, ರಾಕ್ ಸಿಟಿ ವತಿಯಿಂದ ಗೌರವಿಸಲಾಯಿತು. ರೋಟರಿ ಕ್ಲಬ್ ಕಾರ್ಕಳ, ರಾಕ್ ಸಿಟಿಯ ಅಧ್ಯಕ್ಷರಾದ ರೊಟೊರಿಯನ್ ಸುರೇಂದ್ರ ನಾಯಕ್ ರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಸಂಯೋಜನೆಗೊಂಡು ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಎಲ್ಲಾ ಮಹಿಳೆಯರಿಗೆ ಹಣ್ಣು ಹಂಪಲು ಗಳನ್ನು ಕ್ಲಬ್ ವತಿಯಿಂದ ವಿತರಿಸಲಾಯಿತು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.