ಶ್ರೀ ಮೂಡು ಗಣಪತಿ ಸನ್ನಿಧಿಯಲ್ಲಿ ನೆರವೇರಿತು ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ!
– ಸಿನಿಮಾ ಮೂಲಕ ವಿಭ ಫಿಲ್ಮ್ಸ್ಅವರ ಹೊಸ ಹೆಜ್ಜೆ!
– ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಸುನಾದ್ ಗೌತಮ್ ಅವರ ಉಪಸ್ಥಿತಿ
NAMMUR EXPRESS NEWS
ಹೊಸ ಸಿನಿಮಾ ಮೂಲಕ ವಿಭ ಫಿಲ್ಮ್ಸ್ ಅವರು ಹೊಸ ಹೆಜ್ಜೆ ಇಟ್ಟಿದ್ದಾರೆ. ಯುವ ನಟರು ಈ ಚಿತ್ರಕ್ಕೆ ನಟನಾಗಿ ಬಣ್ಣ ಹಚ್ಚುವುದರ ಜೊತೆಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶಕರಾಗಿ ಪ್ರವೀಣ್ ಜಾರ್ಕಳ ಅವರು ಹೊಸ ಪಯಣ ಬೆಳೆಸಿದ್ದಾರೆ.
ಈ ಚಿತ್ರಕ್ಕೆ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿದ್ದ ಜೀ ವಾಹಿನಿಯ ‘ಜೊತೆ ಜೊತೆಯಲಿ ಧಾರಾವಾಹಿ’ ‘ಜೀಕುಟುಂಬ ಅವಾಡ್ರ್ಸ್-2019’, ಕಲರ್ಸ್ ಕನ್ನಡ ವಾಹಿನಿಯ ‘ನನ್ನರಸಿ ರಾಧೆ’, ಕನ್ನಡದ ರಿಯಾಲಿಟಿ ಶೋಗಳಾದ ಉದಯ ವಾಹಿನಿಯ ‘ಕಿಕ್ ಡ್ಯಾನ್ಸ್ ಶೋ’, ‘ಆದರ್ಶ ದಂಪತಿಗಳು’ ಮತ್ತು ಸುವರ್ಣ ವಾಹಿನಿಯ ‘ಭರ್ಜರಿ ಕಾಮಿಡಿ ಶೋ’ಗಳಿಗೆ ಸಂಗೀತ ಸಂಯೋಜಿಸಿ ನಿರ್ದೇಶಿಸಿರುವಂತಹ ಸುನಾದ್ ಗೌತಮ್ ಅವರು ಸಂಗೀತ ಸಂಯೋಜಿಸಿ ನಿರ್ದೇಶಿಸಲಿದ್ದು, ಛಾಯಾಗ್ರಹಣ ನಿರ್ದೇಶಕರಾಗಿ ಮಿಂಚಲಿದ್ದಾರೆ.
ಈ ಪ್ರಯುಕ್ತ ಮೇ 1ರಂದು ( ಇಂದು) ಶ್ರೀ ಮೂಡು ಗಣಪತಿ ದೇವಸ್ಥಾನ ಬಂಡಿ ಮಠದಲ್ಲಿ ಬೆಳಿಗ್ಗೆ 9:30ಕ್ಕೆ ಸ್ಕ್ರಿಪ್ಟ್ ಪೂಜೆ ಅದ್ದೂರಿಯಾಗಿ ನೆರವೇರಿತು.
ಈ ಸಂದರ್ಭದಲ್ಲಿ ಕ್ರಿಯೇಟಿವ್ ಕಾಲೇಜು ಸಂಸ್ಥಾಪಕರಾದ ಅಶ್ವಥ್ ಎಸ್. ಎಲ್, ಸಂಗೀತ ನಿರ್ದೇಶಕರಾದ ಸುನಾದ್ ಗೌತಮ್, ನಿರ್ದೇಶಕರಾದ ಪ್ರವೀಣ್ ಜಾರ್ಕಳ, ಸಹ ನಿರ್ಮಾಪಕರಾದ ಶ್ರೀನಿಧಿ ಪ್ರೊಡಕ್ಷನ್ ಹಾಗೂ ವಿನಾಯಕ ಕುಲಾಲ್ ಮತ್ತು ಪ್ರವೀಣ್. ಜಿ ಇವರು ಉಪಸ್ಥಿತರಿದ್ದರು.
