ಕೊಪ್ಪ ಉತ್ಸವದಲ್ಲಿ ಪುಸ್ತಕ ಮನೆ ಮಳಿಗೆ!
– ಮಲೆನಾಡು ಬರಹಗಾರರ ಪುಸ್ತಕ, ಎಲ್ಲಾ ಪುಸ್ತಕ ಲಭ್ಯ
– ಗ್ರಾಹಕರಿಂದ ಕನ್ನಡ ಪುಸ್ತಕಗಳಿಗೆ ಭಾರೀ ಡಿಮ್ಯಾಂಡ್
– ಜ.20ರ ಸಂಜೆ ಶಿವದೂತೆ ಗುಳಿಗೆ ನಾಟಕ ಪ್ರದರ್ಶನ
NAMMUR EXPRESS NEWS
ಕೊಪ್ಪ: ಕೊಪ್ಪದಲ್ಲಿ ನಡೆಯುತ್ತಿರುವ ಕೊಪ್ಪ ಉತ್ಸವದಲ್ಲಿ ಪುಸ್ತಕ ಮನೆ ಪುಸ್ತಕ ಮಳಿಗೆ ಗಮನ ಸೆಳೆದಿದೆ. ಕಾರ್ಕಳದ ಪುಸ್ತಕ ಮನೆ ಮಳಿಗೆಯಲ್ಲಿ ಮಲೆನಾಡ ಬರಹಗಾರರ ಪುಸ್ತಕಗಳು ಸೇರಿದಂತೆ ಎಲ್ಲಾ ಪ್ರಸಿದ್ಧ ಪುಸ್ತಕಗಳು ಲಭ್ಯವಿದೆ. ಪುಸ್ತಕ ಮನೆ ಮಳಿಗೆಗೆ ಪುಸ್ತಕ ಪ್ರೇಮಿಗಳು ಆಗಮಿಸಿ ಖರೀದಿ ಮಾಡುತ್ತಿದ್ದಾರೆ. ಜ.20ರಂದು ಶಿವ ಧೂತೆ ಗುಳಿಗೆ ನಾಟಕ ಬೃಹತ್ ವೇದಿಕೆಯಲ್ಲಿ ಪ್ರದರ್ಶನಗೊಳ್ಳಲಿದೆ.
