2025ಕ್ಕೆ ದೇಶದ ಸಾಲ 210 ಲಕ್ಷ ಕೋಟಿ ಇದನ್ನು ಯಾರು ಪ್ರಶ್ನೆ ಮಾಡುವ ಹಾಗಿಲ್ಲ – ಸಂತೋಷ್ ಲಾಡ್
* ಬಿಜೆಪಿಗರು ಕಛೇರಿಯಲ್ಲಿ ನೆಹರು ಫೋಟೋ ಇಟ್ಕೋಳಿ
* ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಸಂತೋಷ್ ಲಾಡ್
NAMMUR EXPRESS NEWS
ಕೊಪ್ಪ: ಪಟ್ಟಣದಲ್ಲಿ ಭಾನುವಾರ ನಡೆದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು 1947ರಿಂದ 2014ರ ವರೆಗೆ ಭಾರತದ ಸಾಲ 57 ಲಕ್ಷ ಕೋಟಿ ಇತ್ತು 2025ಕ್ಕೆ ಈ ದೇಶದ ಸಾಲ 210ಲಕ್ಷ ಕೋಟಿ ತಲುಪಿದೆ ಎಂದು ಕಿಡಿಕಾರಿದರು. ದೇಶದ ಸಾಲ ಹೆಚ್ಚಾದರೆ ಬಿಜೆಪಿ ಅವರು ಮಾತಾಡಲ್ಲ, 15 ಲಕ್ಷ ಕೋಟಿ ಉದ್ಯಮದಾರರ ಹಣ ರೈಟ್ ಆಫ್ ಆಗಿದೆ ಇದರ ಬಗ್ಗೆ ಯಾರು ಮಾತಾಡಲ್ಲ, ಹತ್ತು ವರ್ಷದಲ್ಲಿ ಒಂದುವರೆ ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೂ ಯಾರು ಮಾತಾಡಲ್ಲ ಮೇಕ್ ಇನ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಮೇಲೂ ಇಲ್ಲ ಇಂಡಿಯಾನು ಇಲ್ಲ ಎಂದು ಸಂತೋಷ್ ವ್ಯಂಗ್ಯವಾಡಿದ್ದಾರೆ.
ಚೀನಾದವರಿಗೆ ನಿಲ್ಲಿಸ್ತೀವಿ ಅಂದ್ರು ಟಿಕ್ ಟಾಕ್ ಮಾತ್ರ ನಿಲ್ಲಿಸಿದ್ರು. 2014ರಲ್ಲಿ 50 ಮಿತಿಯ ಡಾಲರ್ ನಮ್ಮ ವಹಿವಾಟು ಇದ್ದರೆ ಈಗ 120 ಬಿಲಿಯನ್ ಡಾಲರ್ ಆಗಿದೆ. ಇದನ್ನ ಮಾಧ್ಯಮದವರು ತೋರ್ಸಲ್ಲ, ಅವರು ಇಡೀ ದಿನ ಅವರದ್ದೇ ತೋರ್ಸೋದು. ಮಾಧ್ಯಮದವರೇ ಇದು ಬಿಜೆಪಿ ಕಾಂಗ್ರೆಸ್ ದೇಶವಲ್ಲ ಎಲ್ಲರ ದೇಶ ಇದು ರಾಜಕೀಯ ಪಕ್ಷದ ದೇಶ ಅಲ್ಲ ಅಂತ ಲಾಡ್ ಮಾಧ್ಯಮದವರಿಗೆ ಟಾಂಗ್ ನೀಡಿದರು.
“ಬಿಜೆಪಿಯವರು, ನೆಹರೂ ಅವರಿಂದ ದೇಶ ಒಡೆದೋಯ್ತು ಪಾಕಿಸ್ತಾನ ಆಯ್ತು ಅಂತ ನೆಹರು ಅವರನ್ನು ತೆಗಳುತ್ತಾರೆ. ಇದರಿಂದ ನಿಮಗೇ ಅನುಕೂಲ ಆಗಿಲ್ವಾ” ನಿಮ್ಮ ಕಚೇರಿಯಲ್ಲಿ ನೆಹರೂ ಫೋಟೋ ಇಟ್ಟುಕೊಳ್ಳಿ ಎಂದು ಬಿಜೆಪಿ ವಿರುದ್ಧ ಕಾರ್ಯಕ್ರಮದಲ್ಲಿ ಮಾತಾಡಿದರು.
ಪಾಕಿಸ್ತಾನದಲ್ಲಿ 25- 26 ಕೋಟಿ ಮುಸ್ಲಿಮರು ಇದ್ದಾರೆ. ಭಾರತದಿಂದ ವಿಂಗಡನೆ ಆಗದಿದ್ದರೆ, ಇಲ್ಲೇ ಇರುತಿದ್ದರು. ಆಗ ಭಾಷಣಗಳೆಲ್ಲ ಹೇಗಿರುತ್ತಿತ್ತು ಎಲ್ಲಾರು ಉರ್ದು ಭಾಷೆಯಲ್ಲಿ ಸಲ್ಲಾವುಲಿಲ್ಲಾ ಹಲ್ಲಾವುಲಿಲ್ಲ ಎಂದು ಬಿಜೆಪಿಯವರು ಉರ್ದು ಭಾಷಣ ಮಾಡುತಿದ್ದರು. ಹಾಗೆಯೇ, ಮೋದಿ ಅವರು ಅಯೋಧ್ಯೆ ರಾಮ ಮಂದಿರದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿ 7 ದಿನ ಪೂಜೆ ಮಾಡಿ ಪ್ರಾಣ ಪ್ರತಿಷ್ಠಾಪನೆ ಮಾಡಿದರು. ಹಿಂದೂಗಳಲ್ಲಿ ಮೂರ್ತಿ-ಪ್ರಾಣ ಪ್ರತಿಷ್ಠಾಪನೆ ಆಗಬೇಕಾದರೆ, ಬ್ರಾಹ್ಮಣರು ಇರಲೇಬೇಕು, ಆದರೆ ಅದೆಲ್ಲ ಬಿಟ್ಟು ಮೋದಿ ಅವರೇ ಓ.ಬಿ.ಸಿ ನಾಯಕ ಎಂದು ಹೇಳಿಕೊಳ್ಳುತ್ತಾರೆ, ಎಂದು ಪ್ರಶ್ನಿಸಿ ಬಿಜೆಪಿಯ ವಿರುದ್ಧ ಸಚಿವ ಸಂತೋಷ್ ಲಾಡ್ ವಾಗ್ದಾಳಿ ನಡೆಸಿದರು.
