Categories
ಕೊಪ್ಪ

ಚೈತ್ರಾ ಕುಂದಾಪುರ ವಿರುದ್ಧ ದೇವರಿಗೆ ತೆಂಗಿನಕಾಯಿ ಒಡೆದ ಜನ!

ಚೈತ್ರಾ ಕುಂದಾಪುರ ವಿರುದ್ಧ ದೇವರಿಗೆ ತೆಂಗಿನಕಾಯಿ ಒಡೆದ ಜನ!
– ಹಿಂದೂಗಳನ್ನೇ ಎತ್ತಿಕಟ್ಟುವ ಪ್ರಚೋದನಾಕಾರಿ ಭಾಷಣ ಆರೋಪ
– ಶಿಕ್ಷೆ ನೀಡಿದ್ದಕ್ಕೆ ವಿಶೇಷ ಪೂಜೆ: ಆಕೆ ಭಾಷಣ ಮಾಡಿದ್ದ ಜಾಗದಲ್ಲಿ ಕೊಪ್ಪದ ಗ್ರಾಮಸ್ಥರಿಂದ ವಿಶೇಷ ಪೂಜೆ

NAMMUR EXPRESS NEWS – ಕೊಪ್ಪ: ಹಿಂದುತ್ವದ ಹೆಸರಲ್ಲಿ ಮಾಡಬಾರದ ಕೆಲಸ ಮಾಡಿ ಸದ್ಯ ಚೈತ್ರಾ ಕುಂದಾಪುರ ಪೊಲೀಸರ ಅತಿಥಿಯಾಗಿರುವ ನಡುವೆ ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕು ಮಾವಿನಕಟ್ಟೆ ಗ್ರಾಮಸ್ಥರು ಆಕೆ ಕಾಲಿಟ್ಟ ಜಾಗವನ್ನು ಶುದ್ದೀಕರಣ ಮಾಡಿದ್ದಾರೆ. ಕಳೆದ ವರ್ಷ ಸಹಬಾಳ್ವೆ ನಡೆಸಿ ನೆಮ್ಮದಿಯಿಂದ ಇದ್ದ ಗ್ರಾಮಕ್ಕೆ ಕಾಲಿಟ್ಟು ಶಾಂತಿ ಕದಡುವ ಕೆಲಸ ಮಾಡಿದ್ದರು. ಹಿಂದುಗಳ ವಿರುದ್ಧ ಹಿಂದುಗಳನ್ನೇ ಎತ್ತಿಕಟ್ಟುವ ಪ್ರಚೋದನಾಕಾರಿ ಭಾಷಣ ಮಾಡಿದ್ದರು ಎನ್ನಲಾಗುತ್ತಿದೆ. ಇದರಿಂದ ಬೇಸರಗೊಂಡು ಗ್ರಾಮಸ್ಥರು ಶಕ್ತಿ ಸನ್ನಿಧಿ ಕೇಂದ್ರವಾದ ಶ್ರೀ ಆನೆ ವಿಶ್ಲೇಶ್ವರ ಸ್ವಾಮಿ ಬ್ರಹ್ಮ ಜಟಿಗೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಗ್ರಾಮದಲ್ಲಿ ಶಾಂತಿ ಕದಡಲು ಪ್ರಯತ್ನಿಸಿದವರಿಗೆ ನೀನೇ ಪ್ರತಿಫಲ ತೋರಿಸು ಎಂದು ಪ್ರಾರ್ಥಿಸಿದ್ದರು.

ಒಂದು ವರ್ಷದೊಳಗೆ ಚೈತ್ರ ಕುಂದಾಪುರ ಅವರಿಗೆ ಶಿಕ್ಷೆಯಾದ ಕಾರಣಕ್ಕೆ ಮಾವಿನಕಟ್ಟೆಯ ಗ್ರಾಮಸ್ಥರು ದೇವರ ಸನ್ನಿಧಿಗೆ ತೆರಳಿ ಪೂಜಾ ಸೇವೆಯನ್ನು ಸಲ್ಲಿಸಿದರು. ಜತೆಗೆ ಆಕೆ ಕಾಲಿಟ್ಟ ಜಾಗಕ್ಕೆ ತೀರ್ಥ ಪ್ರೋಕ್ಷಣೆ ಮಾಡಿ ಶುದ್ದೀಕರಣ ಮಾಡಿದ್ದಾರೆ.
ಚೈತ್ರಾ ಕುಂದಾಪುರ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ವಂಚನೆ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.