Categories
ತೀರ್ಥಹಳ್ಳಿ

ಕಾಲೇಜು ಕ್ರೀಡಾಕೂಟ: ಸಹ್ಯಾದ್ರಿ ಕಾಲೇಜು ಚಾಂಪಿಯನ್!

ಕಾಲೇಜು ಕ್ರೀಡಾಕೂಟ: ಸಹ್ಯಾದ್ರಿ ಕಾಲೇಜು ಚಾಂಪಿಯನ್!
– ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಐತಿಹಾಸಿಕ ಸಾಧನೆ
– ಬಾಲಕ, ಬಾಲಕೀಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ

NAMMUR EXPRESS NEWS
ತೀರ್ಥಹಳ್ಳಿ: ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ತೀರ್ಥಹಳ್ಳಿ ಸಹ್ಯಾದ್ರಿ ಕಾಲೇಜು ಐತಿಹಾಸಿಕ ಸಾಧನೆ ಮಾಡಿದೆ. ಬಾಲಕರ ಸಮಗ್ರ, ಬಾಲಕಿಯರ ಸಮಗ್ರ ,ಕ್ರೀಡಾಕೂಟದ ಸರ್ವಾಂಗೀಣ ಸಮಗ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಸಹ್ಯಾದ್ರಿ ಪಿಯು ಕಾಲೇಜ್ ತೀರ್ಥಹಳ್ಳಿಯ ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ. 15-09-2023 ಮತ್ತು16-09-2023ರಂದು ಸರ್ಕಾರಿ ಪದವಿ ಪೂರ್ವ ಕಾಲೇಜು ಕ್ರೀಡಾಂಗಣ ತೀರ್ಥಹಳ್ಳಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ಸಹ್ಯಾದ್ರಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕರ ಗುಂಪು ಆಟಗಳು

– ವಾಲಿಬಾಲ್ (ಪ್ರಥಮ)
– ಥ್ರೋಬಾಲ್ (ಪ್ರಥಮ )
– ಬಾಲ್ ಬ್ಯಾಡ್ಮಿಂಟನ್ (ಪ್ರಥಮ)

ಬಾಲಕರ ಅಥ್ಲೆಟಿಕ್ಸ್ ವಿಭಾಗದಲ್ಲಿ

200 ಮೀಟರ್ (ಪ್ರಥಮ ಮತ್ತು ತೃತೀಯ )
400 ಮೀಟರ್ (ಪ್ರಥಮ ಮತ್ತು ದ್ವಿತೀಯ )
800 ಮೀಟರ್ (ಪ್ರಥಮ ಮತ್ತು ತೃತೀಯ)

4*100 ಮೀಟರ್ ರಿಲೇ (ಪ್ರಥಮ )
4 * 400 ಮೀಟರ್ ರಿಲೇ (ಪ್ರಥಮ )
ವಾಕಿಂಗ್ ರೇಸ್ (ಪ್ರಥಮ ಮತ್ತು ತೃತೀಯ )
ಗುಂಡು ಎಸೆತ (ಪ್ರಥಮ ಮತ್ತು ತೃತೀಯ  )
ಉದ್ದ ಜಿಗಿತ (ಪ್ರಥಮ )
100ಮೀಟರ್ (ದ್ವಿತೀಯ )
ಎತ್ತರ ಜಿಗಿತ (ದ್ವಿತೀಯ )
ತ್ರಿವಿಧ ಜಿಗಿತ (ದ್ವಿತೀಯ )
ಜಾವಲಿನ್ ಎಸೆತ (ದ್ವಿತೀಯ ಮತ್ತು ತೃತೀಯ )
ತಟ್ಟೆ ಎಸೆತ (ತೃತೀಯ)

ಬಾಲಕಿಯರ ಗುಂಪು ಆಟಗಳು

ವಾಲಿಬಾಲ್ (ಪ್ರಥಮ)
ತ್ರೋಬಾಲ್ (ಪ್ರಥಮ )
ಬಾಲ್ ಬ್ಯಾಡ್ಮಿಂಟನ್ (ದ್ವಿತೀಯ)

ಬಾಲಕಿಯರ ಅಥ್ಲೆಟಿಕ್ಸ್ ವಿಭಾಗದಲ್ಲಿ

100 ಮೀಟರ್ (ಪ್ರಥಮ ಮತ್ತು ದ್ವಿತೀಯ )
200 ಮೀಟರ್ (ಪ್ರಥಮ )
ತಟ್ಟೆ ಎಸೆತ (ಪ್ರಥಮ )
4*100 ಮೀಟರ್ ರಿಲೇ (ಪ್ರಥಮ )
1500 ಮೀಟರ್ (ದ್ವಿತೀಯ )
ಜಾವೆಲಿನ್ (ದ್ವಿತೀಯ )
ವಾಕಿಂಗ್ ರೇಸ್ (ದ್ವಿತೀಯ )
4*400 ಮೀಟರ್ ರಿಲೇ (ದ್ವಿತೀಯ )
3000 ಮೀಟರ್ (ದ್ವಿತೀಯ )
ಗುಂಡು ಎಸೆತ (ದ್ವಿತೀಯ)

ಅಮೋಘ ಬಾಲಕರ ವೈಯಕ್ತಿಕ ಚಾಂಪಿಯನ್ಶಿಪ್

200 ಮೀಟರ್ 400 ಮೀಟರ್ ಮತ್ತು 800 ಮೀಟರ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಬಾಲಕರ ವೈಯಕ್ತಿಕ ಚಾಂಪಿಯನ್ಶಿಪ್ ಅನ್ನು ಅಮೋಘ ಬಿ ಎಸ್ ಪಡೆದುಕೊಂಡಿದ್ದಾನೆ.

ದೈಹಿಕ ಶಿಕ್ಷಕರ ಸಾಧನೆಗೆ ಅಭಿನಂದನೆ

ಐತಿಹಾಸಿಕ ವಿಜಯವನ್ನು ಪಡೆದುಕೊಂಡ ಸಹ್ಯಾದ್ರಿ ಪದವಿ ಪೂರ್ವ ಕಾಲೇಜಿನ ಕ್ರೀಡಾ ಪ್ರತಿಭೆಗಳನ್ನು ಮತ್ತು ಇವರಿಗೆ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಜಗದೀಶ್ ಎಂ ಎಸ್ ಹಾಗೂ ಅಥ್ಲೆಟಿಕ್ಸ್ ನಲ್ಲಿ ತರಬೇತಿ ನೀಡಿದ ಸಿರಾಜ್ ಇವರನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ,ಆಡಳಿತಾಧಿಕಾರಿಗಳು , ಪ್ರಾಂಶುಪಾಲರು ಭೋದಕ ಹಾಗೂ ಬೋಧಕೇತರ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿ ಶುಭ ಹಾರೈಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.