ಕುಂದಾಪುರ : ಕೋಟೇಶ್ವರದಲ್ಲಿ ಮಾರಕಾಸ್ತ್ರದೊಂದಿಗೆ ಮನೆಗೆ ನುಗ್ಗಿದ ಕಳ್ಳರು!
NAMMUR EXPRESS NEWS
ಕೋಟೇಶ್ವರ ಮನೆಯೊಂದರಲ್ಲಿ ಕಳ್ಳತನ ನಡೆಸುವ ತಲುವಾಗಿ ಮನೆಗೆ ನುಗ್ಗಿದ ಘಟನೆ ನಡೆದಿದೆ. ಬಾಗಿಲಿನ ನೆಟ್ ಮುರಿದ ವ್ಯಕ್ತಿಗಳಿಗೆ ಗ್ರಿಲ್ ಮುರಿಯಲು ಸಾಧ್ಯವಾಗಿಲ್ಲ. ವ್ಯಕ್ತಿಯೊಬ್ಬ ಮಚ್ಚಿನಂತಹ ಮಾರಕ ಅಸ್ತ್ರವನ್ನು ಉಪಯೋಗಿಸಿ ಬಾಗಿಲ ಸಂದಿಯಿಂದ ಹಾಕಿ ಬಾಗಿಲು ಮುರಿಯಲು ಯತ್ನಿಸಿದ್ದಾನೆ ಎನ್ನಲಾಗಿದೆ.
ಈ ಸಂದರ್ಭ ಮನೆಯಲ್ಲಿದ್ದ ಮಹಿಳೆಗೆ ಎಚ್ಚರವಾಗಿ ದುಬೈಯಲ್ಲಿದ್ದ ಮನೆ ಮಾಲಕರಿಗೆ ಕರೆ ಮಾಡಿದ್ದಾರೆ. ಅವರು ಸ್ಥಳೀಯ ವ್ಯಕ್ತಿಯೋರ್ವರನ್ನು ಸಂಪರ್ಕಿಸಿ, ಕುಂದಾಪುರ ಪೊಲೀಸರನ್ನು ಕೂಡ ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ಮಹಿಳೆಯ ಕಿರುಚಾಟ ಕೇಳಿಸಿಕೊಂಡ ದುಷ್ಕರ್ಮಿಗಳ ತಂಡ ಓಡಿ ಹೋಗಿದ್ದಾರೆ.
ಕುಂದಾಪುರ ಪೊಲೀಸ್ ಅಧಿಕಾರಿಗಳು ಮನೆಗೆ ತಕ್ಷಣ ಭೇಟಿ ನೀಡಿ ಧೈರ್ಯ ತುಂಬಿದ್ದಾರೆ. ಫೋನ್ ಸಂಖ್ಯೆ ನೀಡಿ ಯಾವುದೇ ತುರ್ತು ಸಂದರ್ಭ ತಮ್ಮನ್ನು ಸಂಪರ್ಕಿಸುವಂತೆ ತಿಳಿಸಿದ್ದಾರೆ.