Categories
ಪುತ್ತೂರು

ಪುತ್ತೂರು: ಬಿಜೆಪಿ ಶಾಸಕರಿಂದ ಯಾವುದೇ ನ್ಯಾಯ ದೊರಕಿಲ್ಲ!!’

ಪುತ್ತೂರು: ಬಿಜೆಪಿ ಶಾಸಕರಿಂದ ಯಾವುದೇ ನ್ಯಾಯ ದೊರಕಿಲ್ಲ!!’

* ಮದುವೆಯಾಗುವುದಾಗಿ ನಂಬಿಸಿ ವಂಚನಾ ಪ್ರಕರಣ, ಸಂತ್ರಸ್ತೆ ತಾಯಿಯಿಂದ ಪತ್ರಿಕಾಗೋಷ್ಠಿ

NAMMUR EXPRESS NEWS
ಪುತ್ತೂರು: ‘ನನ್ನ ಮಗಳಿಗೆ ಪ್ರಪೋಸ್ ಮಾಡಿ ಮದುವೆಯಾಗುವುದಾಗಿ ನಂಬಿಸಿ ಯುವಕ ಮಗಳು ಗರ್ಭವತಿಯಾದಾಗ ನಾನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ. ನಮಗೆ ನ್ಯಾಯ ಸಿಗದಿದ್ದರೆ ನಾವು ಬಿಡುವುದಿಲ್ಲ. ಎಲ್ಲಿಯೂ ಪ್ರತಿಭಟನೆಗೂ ಸಿದ್ಧ ಎಂದು ಸಂತ್ರಸ್ತೆ ಯುವತಿಯ ತಾಯಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಿ.ಜಿ.ಜಗನ್ನಿವಾಸ ರಾವ್ ಅವರ ಪುತ್ರ ಶ್ರೀಕೃಷ್ಣ ಜೆ.ರಾವ್‌ಗೆ ನನ್ನ ಮಗಳೊಂದಿಗೆ ಲವ್ ಇತ್ತು. ಆಕೆ 8 ರಿಂದ 10ನೇ ತರಗತಿಯ ತನಕ ರಾಮಕೃಷ್ಣ ಶಾಲೆಗೆ ಹೋಗಿದ್ದಳು. ಅಲ್ಲಿಂದ ನಂತರ ಮಂಗಳೂರಿನಲ್ಲಿ ಸಯನ್ಸ್ ವಿದ್ಯಾರ್ಥಿನಿಯಾಗಿ, ವಿದ್ಯಾರ್ಜನೆ ಪೂರ್ಣಗೊಳಿಸಿದ್ದಾಳೆ. ಈ ನಡುವೆ ಆಕೆ ಗರ್ಭಿಣಿಯಾಗಿರುವ ವಿಚಾರವನ್ನು ಶ್ರೀಕೃಷ್ಣನೇ ನನ್ನ ಬಳಿ ಬಂದು ಆಂಟಿ ನಮ್ಮಿಂದ ತಪ್ಪಾಗಿದೆ ಎಂದು ಹೇಳಿ ವಿಷಯ ತಿಳಿಸಿದ್ದ. ಈ ವಿಚಾರವನ್ನು ಅವನ ತಂದೆಗೂ ತಿಳಿಸಿದ್ದೆ. ಆಗ ಅವರೇ ಹಾಗಾದರೆ ಮದುವೆ ಮಾಡಿಸಿ ಬಿಡುವ ಎಂದು ತಿಳಿಸಿದ್ದರು. ಹಾಗೆ ಗರ್ಭಿಣಿಯ ಪರೀಕ್ಷೆಗೆಂದು ಪಿ.ಜಿ.ಜಗನ್ನಿವಾಸ ರಾವ್, ಅವರ ಪತ್ನಿ ಹಾಗು ನಾನು ಮತ್ತು ಮಗಳು ಜೊತೆಯಲ್ಲೇ ಅಥೇನಾ ಆಸ್ಪತ್ರೆಗೆ ಹೋದಾಗ ಮಗುವನ್ನು ತೆಗೆಸುವಂತೆ ಪರೀಕ್ಷೆ ಮಾಡಿದಾಗ ಆಕೆಗೆ 7 ತಿಂಗಳಾಗಿರುವುದರಿಂದ ಕಷ್ಟ ಸಾಧ್ಯ ಎಂದಿದ್ದರು.
ನಾನು ಜೂ.22ಕ್ಕೆ ಮಹಿಳಾ ಪೊಲೀಸ್ ಸ್ಟೇಷನ್‌ನಲ್ಲಿ ದೂರು ನೀಡಲು ಹೋದಾಗ ಪಿ.ಜಿ.ಜಗನ್ನಿವಾಸ ರಾವ್ ಅವರು ಠಾಣೆಗೆ ಬಂದು ನನ್ನ ಮಗನಿಗೆ 21 ವರ್ಷ ಆದ ತಕ್ಷಣ ರಿಜಿಸ್ಟರ್ ಮದುವೆ ಮಾಡಿಸುತ್ತೇನೆ ಎಂದು ಹೇಳಿ ಬಳಿಕ ಶಾಸಕರಿಗೆ ಕರೆ ಮಾಡಿದ್ದರು. ಶಾಸಕರ ಕರೆಯನ್ನು ನನಗೆ ಕೊಟ್ಟು ಶಾಸಕರೊಂದಿಗೆ ಮಾತನಾಡಲು ತಿಳಿಸಿದರು.
ಶಾಸಕರು ಪೋನ್‌ನಲ್ಲಿ ನನ್ನಲ್ಲಿ ಮಾತನಾಡಿ ಎಫ್‌ಐಆ‌ರ್ ಈಗ ಮಾಡಬೇಡಿ. ಜೂ.23ಕ್ಕೆ ಆವನಿಗೆ 21 ವರ್ಷ ಆದ ಬಳಿಕ ಅವರು ಮದುವೆ ಒಪ್ಪಿದಾರಲ್ಲ ಎಂದರು. ಹಾಗೆ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿ ಇತ್ಯರ್ಥ ಆಗಿತ್ತು. ಆದರೆ ಹುಡುಗನಿಗೆ 21 ವರ್ಷ ಆದ ಬಳಿಕ ಅವರು ಮದುವೆ ಒಪ್ಪದಿರುವುದನ್ನು ಶಾಸಕರಿಗೆ ಕರೆ ಮಾಡಿ ತಿಳಿಸಿದೆ. ಅದಕ್ಕೆ ಅವರು ಮದುವೆಗೆ ಒಪ್ಪದಿದ್ದರೆ ನಿಮಗೆ ಹೇಗೆ ಬೇಕೋ ಹಾಗೆ ಕೇಸ್ ಮುಂದುವರಿಸಿ ಎಂದು ಹೇಳಿದ್ದಾರೆ ಎಂದು ಸಂತ್ರಸ್ತೆಯ ತಾಯಿ ಹೇಳಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.