Categories
ಮಲ್ನಾಡ್

ಶೃಂಗೇರಿಯಲ್ಲಿ ಹೈಟೆಕ್ ದನ ಸಾಗಣೆ!

  • ಹೈಫೈ ಕಾರಲ್ಲಿ ಗೋ ಸಾಗಣೆ ಮಾಡಿದವರು ಈಗ ಅಂದರ್

ಶೃಂಗೇರಿ: ಮಲೆನಾಡಿನಲ್ಲಿ ಹೈಟೆಕ್ ಗೋ ಸಾಗಣೆ ನಡೆಯುತ್ತಿದೆ. ಇದಕ್ಕೆ ಈಗೊಂದು ಪುರಾವೆ ಸಿಕ್ಕಿದೆ. ನಮ್ಮೂರ್ ಎಕ್ಸ್‍ಪ್ರೆಸ್ ಕೂಡ ಈ ಬಗ್ಗೆ ಹಲವು ಬಾರಿ ವರದಿ ಮಾಡಿತ್ತು. ಇದೀಓಗ ಶೃಂಗೇರಿಯಲ್ಲಿ ಸೆ.13ರಂದು ಶ್ರೀಮಾತಾ ಹೋಟೆಲ್ ಬಳಿ ಮಲಗಿದ್ದ ಜಾನುವಾರಿಗಳನ್ನು ಹೈಟೆಕ್ ಕಾರಿನಲ್ಲಿ ಕದ್ದೊಯ್ದ ಘಟನೆಗೆ ಸಂಬಂಧ ಇಬ್ಬರು ಆರೋಪಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಜತೆಗೆ ಕೃತ್ಯಕ್ಕೆ ಬಳಸಿದ ಕಾರನ್ನು ವಶಪಡಿಸಿಕೊಂಡಿದ್ದಾರೆ.


ಘಟನೆಯಲ್ಲಿ ಭಾಗಿಯಾದ ಮತ್ತಿಬ್ಬರು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಮಲೆನಾಡಿನ ಕೊಪ್ಪ, ಶೃಂಗೇರಿ, ಆಲ್ದೂರು, ಸಾಗರ, ತೀರ್ಥಹಳ್ಳಿ ಭಾಗದಲ್ಲಿ ಕಾರಿನಲ್ಲಿ ದನ ಕಳ್ಳತನ ಆಗಾಗ್ಗೆ ನಡೆಯುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.