Categories
ಮಲ್ನಾಡ್

ಲೈಂಗಿಕ ದೌರ್ಜನ್ಯದ ಸುಳ್ಳು ಕೇಸ್ ಹಾಕಿಸಿದವನ ಮೇಲೆ ಕೇಸ್!

ಲೈಂಗಿಕ ದೌರ್ಜನ್ಯದ ಸುಳ್ಳು ಕೇಸ್ ಹಾಕಿಸಿದವನ ಮೇಲೆ ಕೇಸ್!

– ರಾಜಕೀಯ ದ್ವೇಷಕ್ಕೆ ಅಪ್ರಾಪ್ತರಿಂದ ಸುಳ್ಳು ಹೇಳಿಕೆ: ಅರೆಸ್ಟ್
– ಲೈಂಗಿಕ ದೌರ್ಜನ್ಯದ ಆರೋಪ ಮಾಡಿಸಿದ್ದ ಇಬ್ಬರ ವಿರುದ್ಧ ಕೇಸ್
– ಬಾಲಕರಿಗೆ ಧಮ್ಮಿ ಹಾಕಿ ವಿಡಿಯೋ ಚಿತ್ರೀಕರಣ ಮಾಡಿ ವೈರಲ್

NAMMUR EXPRESS NEWS
ಶೃಂಗೇರಿ: ರಾಜಕೀಯ ದ್ವೇಷಕ್ಕೆ ಅಪ್ರಾಪ್ತ ಬಾಲಕರನ್ನು ಬಳಸಿಕೊಂಡು ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪವನ್ನು ಮಾಡಿಸಿದ ತಪ್ಪಿಗೆ ಶೃಂಗೇರಿ ಗ್ರಾಮ ಪಂಚಾಯ್ತಿ ಸದಸ್ಯ ಶಬರೀಶ್ ಅವರ ಮೇಲೆ ಕೇಸು ದಾಖಲಾಗಿದ್ದು ತಾನು ತೋಡಿದ್ದ ಖೆಡ್ದಾಕ್ಕೆ ತಾನೇ ಬಿದ್ದಿದ್ದಾನೆ. ಇದೀಗ ಶಬರೀಶ್ ಅರೆಸ್ಟ್ ಆಗಿದ್ದು ಇನ್ನೊರ್ವನ ಹುಡುಕಾಟ ನಡೆದಿದೆ.
ಸುಳ್ಳು ಆರೋಪಕ್ಕೆ ಬಾಲಕರನ್ನು ಬಳಸಿಕೊಂಡಿದ್ದ ಶಬರೀಶ್ ವಿರುದ್ಧವೇ ಫೋಕ್ಸೋ ಪ್ರಕರಣ ದಾಖಲಾಗಿದ್ದು ಶೃಂಗೇರಿ ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?

ಶೃಂಗೇರಿಯಲ್ಲಿ ಬಿಜೆಪಿ ಮುಖಂಡನ ವಿರುದ್ಧ ಅಪ್ರಾಪ್ತ ಬಾಲಕರಿಬ್ಬರ ಮೇಲೆ ದೌರ್ಜನ್ಯದ ಆರೋಪ ಎಂಬ ಸುದ್ದಿ ದಿನವಿಡೀ ಹರಿದಾಡಿತ್ತು. ಶೃಂಗೇರಿ ಬಿಜೆಪಿ ಪಕ್ಷದ ಮುಖಂಡನ ವಿರುದ್ಧ ಅಪ್ರಾಪ್ತ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ದಲಿತ ಬಾಲಕರ ಮೇಲೆ ಬಿಜೆಪಿ ಮುಖಂಡನಿಂದ ಲೈಂಗಿಕ ದೌರ್ಜನ್ಯದ ಆರೋಪ ಪ್ರಕರಣದಲ್ಲಿ ಸಲಿಂಗಕಾಮಕ್ಕೆ ಅಪ್ರಾಪ್ತ ಬಾಲಕರನ್ನ ಬಳಸಿಕೊಂಡ ಆರೋಪ ಸುಳ್ಳಾಗಿದೆ. ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಅಪ್ರಾಪ್ತ ಬಾಲಕರ ವಿಡಿಯೋ ಮಾಡಿ ಅದು ವೈರಲ್ ಆಗುತ್ತಿದ್ದಂತೆ ತನಿಖೆ ನಡೆಸಿದ್ದ ಶೃಂಗೇರಿ ಪೊಲೀಸರು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಕೌನ್ಸಿಲಿಂಗ್ ನಲ್ಲಿ ಸತ್ಯ ಬಯಲಾಗಿದೆ. ಅಪ್ರಾಪ್ತ ಬಾಲಕನ ಬಳಸಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿಸಿದ್ದ ಇಬ್ಬರ ವಿರುದ್ಧ ಪೋಕೋ ಕೇಸ್ ದಾಖಲಾಗಿದೆ. ರಾಜಕೀಯ ದ್ವೇಷಕ್ಕೆ ಲೈಂಗಿಕ ದೌರ್ಜನ್ಯದ ಆರೋಪ ಮಾಡುವಂತೆ ಬಾಲಕರಿಗೆ ಧಮ್ಮಿ ಹಾಕಿ ವಿಡಿಯೋ ಚಿತ್ರೀಕರಣ ಮಾಡಿ ವೈರಲ್ ಮಾಡಿದ್ದ ಇಬ್ಬರ ವಿರುದ್ಧ ಕೇಸು ದಾಖಲಾಗಿದೆ. ಇಬ್ಬರಲ್ಲಿ ಓರ್ವನ ಬಂಧನವಾಗಿದ್ದು ಮತ್ತೋರ್ವನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಅಪ್ರಾಪ್ತ ಬಾಲಕರನ್ನ ಬಳಸಿಕೊಂಡು ದುರ್ಬಳಕೆಗೆ ಯತ್ನ ಮಾಡಿದ್ದಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಘವೇಂದ್ರರಿಂದ ಶೃಂಗೇರಿ ಪೊಲೀಸರಿಗೆ ದೂರು ನೀಡಲಾಗಿದೆ.

ಗ್ರಾಮ ಪಂಚಾಯತಿ ಸದಸ್ಯ ಶಬರೀಶ್ ಹಾಗೂ ಸೂರ್ಯ ವಿರುದ್ಧ ರಾಘವೇಂದ್ರ ದೂರು ನೀಡಿದ್ದಾರೆ. ಸದ್ಯ ಶಬರೀಶ್ ನನ್ನು ಬಂಧಿಸಿರುವ ಶೃಂಗೇರಿ ಇನ್ಸ್‌ಪೆಕ್ಟರ್ ಜಿ.ಎಸ್ ಸಂದೀಪ್‌ ವಿಚಾರಣೆ ನಡೆಸುತ್ತಿದ್ದಾರೆ. ಪಟ್ಟಣ ಪಂಚಾಯ್ತಿ ಸದಸ್ಯ ಹರೀಶ್ ಶೆಟ್ಟಿ ಹಾಗೂ ಶಬರೀಶ್ ನಡುವೆ ವೈಯಕ್ತಿಕ. ಹಾಗೂ ರಾಜಕೀಯ ದ್ವೇಷವಿತ್ತು. ಈ ಕಾರಣಕ್ಕೆ ಬಾಲಕರನ್ನು ಲೈಂಗಿಕ ಕಾರಣಕ್ಕೆ ಬಳಸಿಕೊಂಡಿದ್ದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.