Categories
ಮಲ್ನಾಡ್

ಮಲೆನಾಡಿನಲ್ಲಿ ಅಂಟಿಗೆ ಪಿಂಟಿಗೆ ರಂಗು!

ಮಲೆನಾಡಿನಲ್ಲಿ ಅಂಟಿಗೆ ಪಿಂಟಿಗೆ ರಂಗು!
– ಮನೆ ಮನೆಗಳಲ್ಲಿ ಜನಪದ ಹಾಡುಗಳ ಸದ್ದು
– ಹಬ್ಬದ ಜತೆಗೆ ಸಾಮಾಜಿಕ ಕಳಕಳಿಯ ಕಲೆ!

NAMMUR EXPRESS NEWS
ಮಲೆನಾಡಿನ ದೀಪಾವಳಿ ವಿಶೇಷ ಅಂಟಿಗೆ ಪಿಂಟಿಗೆ. ಈ ಹಬ್ಬದಂದು ಮಲೆನಾಡಿನ ಜನರು ತಂಡ ತಂಡವಾಗಿ ಹಾಡುತ್ತಾ ರಾತ್ರಿ ಇಡೀ ಸುತ್ತಿ ಹಾಡುವ ಕಲೆ ಇದು. ದೀಪಾವಳಿ ಹಬ್ಬದ ಸಮಯದಲ್ಲಿ ಈ ಹಬ್ಬವನ್ನು ಆಚರಿಸುವುದೇ ಒಂದು ಖುಷಿ ಹಾಗೂ ಮಲೆನಾಡು ಭಾಗದಲ್ಲಿ ದೀಪಾವಳಿ ಹಬ್ಬದ ಸಮಯದಲ್ಲಿ ಅನೇಕ ರೀತಿಯ ಜನಪದ ಕಲೆಗಳು ಆನಾವರಣಗೊಳ್ಳುತ್ತವೆ. ಪ್ರತಿಯೊಂದು ಆಚರಣೆಯು ತನ್ನದೇ ಆದಾ ವಿಶೇಷತೆಗಳನ್ನು ಒಳ ಗೊಂಡಿರುತ್ತದೆ.
ಹಾಗೆಯೇ ಅಂಟಿಗೆ ಪಿಂಟಿಗೆ ಮಲೆನಾಡು ಭಾಗದ ಪ್ರಮುಖ ಜನಪದ ಕಲೆಯಾಗಿದೆ.

ಸಾಧಾರಣ ಪಂಚೆ,ಜುಬ್ಬದ ಜೊತೆಗೆ ತಲೆಗೊಂದು ಮುಂಡಾಸು ಕಟ್ಟಿಕೊಂಡು, ದಾರಿಯಲ್ಲಿ ಎದುರಾಗ ಬಹುದಾದ ಅಪಾಯಗಳನ್ನು ಎದುರಿಸಲು ಸಹಾಯಕವಾಗುವಂತೆ ಕೈಯ್ಯಲ್ಲೊಂದು ಗಟ್ಟಿಯಾದ ಕೋಲು ಹಿಡಿದು ಹಗಲು ಇರಳು ಎನ್ನದೇ, ಮೂರು ದಿನಗಳ ಕಾಲ ನಿದ್ರಿಸದೇ, ಈ ಕಲಾವಿದರು ಮನೆಗಳಿಂದ ಮನೆಗಳಿಗೆ ದೀಪವನ್ನು ಹಿಡಿದುಕೊಂಡು ಜಾನಪದ ಗೀತೆಯನ್ನು ಹಾಡುತ್ತ ಹೋಗುತ್ತಾರೆ. ಏನೇ ಆದರೂ ಕೈಯಲ್ಲಿರುವ ದೀಪವು ಆರದಂತೆ ಕಾಪಾಡಿಕೊಳ್ಳುವುದು ಒಂದು ಸಂಪ್ರದಾಯ ದೀಪವನ್ನು ಹಿಡಿದು ಕೊಳ್ಳಲು ಒಬ್ಬ ವ್ಯಕ್ತಿಯೇ ಇರುತ್ತಾರೆ.

ಸಾಮಾಜಿಕ ಕಳಕಳಿಯ ಕಲೆ!

ಜಾನಪದ ಕಲೆ ಅಂಟಿಗೆ ಪಿಂಟಿಗೆ ಈಗ ಸಾಮಾಜಿಕ ಸೇವಾ ಕಲೆಯಾಗಿ ಪರಿವರ್ತನೆಯಾಗಿದೆ. ತಮ್ಮ ಊರಿನ ದೇಗುಲ, ಶಾಲೆ, ಅರೋಗ್ಯ ಸಹಾಯಕ್ಕಾಗಿ ಅಂಟಿಗೆ ಪಿಂಟಿಗೆ ಮಾಡಲಾಗುತ್ತಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.