Categories
ಬೆಂಗಳೂರು

ವಿದ್ಯುತ್ ಕಳ್ಳ ಕುಮಾರಸ್ವಾಮಿ: ಪೋಸ್ಟರ್ ವೈರಲ್!

ವಿದ್ಯುತ್ ಕಳ್ಳ ಕುಮಾರಸ್ವಾಮಿ: ಪೋಸ್ಟರ್ ವೈರಲ್!
– ಜೆಡಿಎಸ್ ಕಚೇರಿಗೆ ಪೋಸ್ಟರ್ ಅಂಟಿಸಿದ ಕೈ ಕಾರ್ಯಕರ್ತರು
– ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದು ಮನೆಗೆ ಲೈಟಿಂಗ್ ಹಾಕಿಸಿದ್ದ ಆರೋಪ

NAMMUR EXPRESS NEWS
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ದೀಪಾವಳಿಯ ದೀಪಾಲಂಕಾರಕ್ಕೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ಬೆನ್ನಲ್ಲೇ, ಈಗ ಅವರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಸಮರ ಸಾರಿದ್ದಾರೆ. ಜೆಡಿಎಸ್ ಕಚೇರಿಯ ಕಾಂಪೌಂಡ್ ಗಳಿಗೆ ಕೈ ಕಾರ್ಯಕರ್ತರು ವಿದ್ಯುತ್ ಕಳ್ಳ ಕುಮಾರಸ್ವಾಮಿ ಎಂಬುದಾಗಿ ಪೋಸ್ಟರ್ ಅಂಟಿಸಿದ್ದಾರೆ ಎನ್ನಲಾಗುತ್ತಿದೆ.
ಜೆಡಿಎಸ್ ಕಚೇರಿಯ ತಡೆಗೋಡೆಗೆ ಅಂಟಿಸಿರೋ ಪೋಸ್ಟರ್ ಗಳು ವೈರಲ್ ಆಗಿವೆ. ಅದರಲ್ಲಿ ವಿದ್ಯುತ್ ಕಳ್ಳ ಕುಮಾರಸ್ವಾಮಿ ಎಂಬುದಾಗಿ ಒಂದಾಗಿದ್ದರೆ, ಮತ್ತೊಂದು ಕಾಂಗ್ರೆಸ್ ಗ್ಯಾರಂಟಿ 200 ಯೂನಿಟ್ ಉಚಿತವಾಗಿದೆ ಎಂಬುದು ಮತ್ತೊಂದಾಗಿದೆ.
ಇದಷ್ಟೇ ಅಲ್ಲದೇ 200 ಯೂನಿಟ್ ವಿದ್ಯುತ್ ಉಚಿತದ ಬಗ್ಗೆ ಮಾತನಾಡಿದಂತ ಹೆಚ್ ಡಿಕೆಗೆ ಟಾಂಗ್ ಎನ್ನುವಂತೆ ಕುಮಾರಸ್ವಾಮಿಯವರೇ 200 ಯೂನಿಟ್ ಉಚಿತವಾಗಿದೆ. ನೆನಪಿಟ್ಟುಕೊಳ್ಳಿ ಹೆಚ್ಚು ಕದಿಯಬೇಡಿ. ಎಂಬುದಾಗಿ ಪೋಸ್ಟರ್ ನಲ್ಲಿ ಬರೆದಿರೋದನ್ನು ಅಂಟಿಸಲಾಗಿದೆ.

ಏನಿದು ಘಟನೆ?

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ತಮ್ಮ ಬೆಂಗಳೂರಿನ ಜೆಪಿ ನಗರದಲ್ಲಿರುವಂತ ನಿವಾಸಕ್ಕೆ ದೀಪಾವಳಿ ಅಲಂಕಾರಕ್ಕೆ ವಿದ್ಯುತ್ ಸಂಪರ್ಕವನ್ನು ಅಕ್ರಮವಾಗಿ ಪಡೆದಿದ್ದರು. ಸುದ್ದಿ ಪ್ರಕಟ ಬಳಿಕ ಬೆಸ್ಕಾಂ ಜಾಗೃತದಳದ ಅಧಿಕಾರಿಗಳ ಅವರ ನಿವಾಸಕ್ಕೆ ಭೇಟಿ ನೀಡಿ, ಇದನ್ನು ಖಚಿತ ಪಡಿಸಿದರು. ಜೊತೆಗೆ ವಿದ್ಯುತ್ ಕದ್ದ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಹೆಚ್ ಡಿಕೆ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.