ಮೇಳಿಗೆ ಗ್ರಾಮದಲ್ಲಿ ವೃದ್ಧ ದಂಪತಿ ಮೇಲೆ ಹಲ್ಲೆ: ಶಿಕ್ಷೆ
– ಅಂಗಡಿಯೊಳಗೆ ನುಗ್ಗಿ ಹಲ್ಲೆ ಮಾಡಿದಕ್ಕೆ 1 ವರ್ಷ ಜೈಲು: ಕೋರ್ಟ್ ಆದೇಶ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಮೇಳಿಗೆ ಗ್ರಾಮದಲ್ಲಿ ವೃದ್ಧ ದಂಪತಿ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿ ನ್ಯಾಯಾಲಯದಲ್ಲಿ ಆರೋಪಿತನಿಗೆ ಶಿಕ್ಷೆ ಪ್ರಕಟವಾಗಿದೆ.
ಏನಿದು ಘಟನೆ?: ಮೇಳಿಗೆ ಗ್ರಾಮದಲ್ಲಿ ಕೃಷ್ಣಪ್ಪ (70)ಮತ್ತು ರತ್ನಮ್ಮ (62) ವರ್ಷದ ವೃದ್ಧರು ದಿನಸಿ ಅಂಗಡಿ ಯೊಂದನ್ನು ನಡೆಸುತ್ತಿದ್ದರು. ಅಂಗಡಿಗೆ ಬಂದ ಆಟೋ ಚಾಲಕ ಸತ್ಯನಾರಾಯಣ ಸುಮಾರು ಹೊತ್ತು ಕಾದರೂ, ತಾನು ಕೇಳಿದ ವಸ್ತು ನೀಡಲಿಲ್ಲವೆಂದು ಆರೋಪಿಸಿ ವಿರುದ್ಧ ದಂಪತಿಗಳನ್ನು ನಿಂದಿಸಿದ್ದಾನೆ. ಅಂಗಡಿ ಒಳಗೆ ನುಗ್ಗಿದ ಸತ್ಯನಾರಾಯಣ ಅಂಗಡಿ ವಸ್ತುಗಳನ್ನೆಲ್ಲ ಚೆಲ್ಲಪಿಲ್ಲಿ ಮಾಡಿದ್ದಾನೆ. ಎರಡು ಕುರ್ಚಿಗಳನ್ನು ಒಡೆದು ಹಾಕಿದ್ದು ಇದನ್ನು ತಡೆಯಲು ಬಂದ ವಿರುದ್ಧ ಕೃಷ್ಣಪ್ಪರ ಮೇಲೆ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾನೆ. ವೃದ್ಧಿ ರತ್ನಮ್ಮರ ಮೇಲೆ ಹಲ್ಲೆ ಮಾಡಿದ್ದ ಎಂದು ದೂರು ದಾಖಲಾಗಿತ್ತು. ಗಾಯಗೊಂಡ ಕೃಷ್ಣಪ್ಪರನ್ನು ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ರತ್ನಮ್ಮ ತೀರ್ಥಹಳ್ಳಿ ಠಾಣೆಗೆ ದೂರು ನೀಡಿದ್ದರು.
ಶಿಕ್ಷೆಯ ಬಗ್ಗೆ ಕೋರ್ಟ್ ಆದೇಶ
ಅಭಿಯೋಜನೆ ಪರ ಹಾಗೂ ಆರೋಪಿತರ ಪರ ಶಿಕ್ಷೆಯ ಪ್ರಮಾಣ ಮೇಲೆ ವಾದವನ್ನು ಕೇಳಲಾಯಿತು. ಅಭಿಯೋಜನೆ ಪರ ವಕೀಲರು ಆರೋಪಿಯು ಮಹಿಳೆಯ ಮೇಲೆ ಹಲ್ಲೆ ಮಾಡಿರುವ ಅಪರಾಧವನ್ನು ಮಾಡಿದ್ದು, ಗರಿಷ್ಟ ಪ್ರಮಾಣದ ಶಿಕ್ಷೆಯನ್ನು ವಿಧಿಸುವಂತೆ ಮಂಡಿಸಿರುತ್ತಾರೆ. ವಾದ ಆರೋಪಿ ಪರ ವಕೀಲರು, ಆರೋಪಿ ಬಡ ಕುಟುಂಬದವರಾಗಿದ್ದು, ಹಾಗೂ ಕುಟುಂಬಕ್ಕೆ ಅವರು ಒಬ್ಬರೇ ದುಡಿಯುವ ವ್ಯಕ್ತಿಯಾಗಿರುತ್ತಾರೆ ಎಂದು ಆರೋಪಿ ಪರ ವಕೀಲರು ವಾದ ಮಂಡನೆ ಮಾಡಿರುತ್ತಾರೆ.
ಆರೋಪಿ ಪರ ವಕೀಲರು ಹಾಗೂ ಅಭಿಯೋಜನೆಯ ವಾದವನ್ನು ಪರಿಗಣನೆಗೆ ಪಡೆದುಕೊಂಡು ಆರೋಪಿಯು ಪ್ರಾಸಾ 3 ರಿಂದ 5 ರವರ ಮೇಲೆ ಹಲ್ಲೆ ಮಾಡಿರುವ, ಅವಾಚ್ಯ ಶಬ್ದಗಳಿಂದ ಬೈದಿರುವುದು ಹಾಗೂ ಜೀವ ಬೆದರಿಕೆ ಹಾಕಿರುವ ಆರೋಪಗಳು ದೃಢಪಟ್ಟಿದ್ದು, ಆರೋಪಿ ದೋಷಿಯೆಂದು ತೀರ್ಮಾನಿಸಲಾಗಿದ್ದು, ಆದ ಕಾರಣ ಆರೋಪಿಗೆ ಅಪರಾಧ ಪರಿವೀಕ್ಷಣಾ ಅಧಿನಿಯಮ ಕಲಂ 3 ಮತ್ತು 4 ರಲ್ಲಿ ಬಿಡುಗಡೆ ಮಾಡಲು ಬರುವುದಿಲ್ಲ ಎಂದು ನಿರ್ಣಯಕ್ಕೆ ಬರಲಾಯಿತು. ಆರೋಪಿಗೆ ಭಾರತೀಯ ದಂಡ ಸಂಹಿತೆ 323 ರಡಿಯಲ್ಲಿ 6 ತಿಂಗಳ ಸಾದಾ ಕಾರವಾಸ ಹಾಗೂ 1,000/- ರೂ. ದಂಡ ದಂಡ ಕಟ್ಟಲು ತಪ್ಪಿದಲ್ಲಿ ಒಂದು ತಿಂಗಳ ಸಾದಾ ಕಾರವಾಸ ಶಿಕ್ಷೆ ಪ್ರಕಟವಾಗಿದೆ.