ಮಲೆನಾಡಿನ ಸಾಂಪ್ರದಾಯಿಕ ಹಬ್ಬ ಅಂಟಿಗೆ ಪಿಂಟಿಗೆ!
– ಶಿರುಪತಿ ಟೆಂಕಬೈಲು ಕಲಾವಿದರ ಸೇವಾ ಕಲೆ
– ಗಬಡಿಯಲ್ಲಿ ಅಂಟಿಗೆ ಪಿಂಟಿಗೆಗೆ ಯುವಕರ ಟೀಮ್!
NAMMUR EXPRESS NEWS
ಅಂಟಿಗೆ ಪಿಂಟಿಗೆ ಮಲೆನಾಡಿನ ಸಾಂಪ್ರದಾಯಿಕ ಹಬ್ಬ ದೀಪಾವಳಿ ಸಮಯದಲ್ಲಿ ಮಾಡುವಂತ ಜಾನಪದ ಕಲೆ. ಮಲೆನಾಡಿನ ಜನಪ್ರಿಯ ಸಂಪ್ರದಾಯಿಕ ಜಾನಪದ ಕಲೆಯನ್ನು ಶಿರುಪತಿ ಟೆಂಕ ಬೈಲು ತಂಡದವರು ಪ್ರತಿವರ್ಷದಂತೆ ಈ ವರ್ಷವೂ ಸಹ ಅತ್ಯಂತ ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಶ್ರೀ ವ್ಯಾಘ್ರ ನರಸಿಂಹಸ್ವಾಮಿ ದೇವರ ಆಶೀರ್ವಾದದೊಂದಿಗೆ ಜ್ಯೋತಿಯನ್ನು ಹಚ್ಚಿ ಮನೆ ಮನೆಗೆ ಭೇಟಿ ನೀಡಿದ್ದಾರೆ. ಕನ್ನಡ ಜಾನಪದ ಪರಿಷತ್ ಸಹಯೋಗದೊಂದಿಗೆ ಕಲೆಯನ್ನು ಮಲೆನಾಡಿನಲ್ಲಿ ಮುಂದಿನ ಪೀಳಿಗೆಗೆ ಯುವಕರಿಗೆ ಉಳಿಸಲು ಮತ್ತು ಈ ಹಿಂದೆ ಅನೇಕ ಸಮಾಜದ ಕೆಲಸಗಳಿಗೆ ಅಂಟಿಗೆ ಪಿಂಟಿಗೆಯಿಂದ ಸಂಗ್ರಹಿಸಿದ ಕಾಣಿಕೆಯನ್ನು ಉತ್ತಮ ಕೆಲಸಕ್ಕೆ ಅಭಿವೃದ್ಧಿಗೆ ಬಳಸಿಕೊಂಡು ಈ ತಂಡವು ಸುಮಾರು ವರ್ಷಗಳಿಂದ ಈ ಕಲೆ ಬೆಳೆಸಿಕೊಂಡು ಬಂದಿದ್ದಾರೆ. ಟೆಂಕಬೈಲು ಶ್ರೀನಿವಾಸ್, ಸಂಜೀವ್, ಗಿರೀಶ್ ಮಂಜುನಾಥ್, ಶಿರುಪತಿ ಇನ್ನು ಪ್ರಮುಖರು ಕುಸ್ಕಿ ಹಾಗೂ ತುಪ್ಪದ ಮನೆ ಅನೇಕ ಯುವಕರು ಸಹಕರಿಸಿದರು.
ಗಬಡಿ ಯಲ್ಲಿ ಯುವಕರ ತಂಡ!
ಆಧುನಿಕ ತಂತ್ರಜ್ಞಾನದ ಸಮಯದಲ್ಲಿ ಅಂದರೆ ಮೊಬೈಲ್ ಯುಗದಲ್ಲಿ ಇಂತಹ ಅದೆಷ್ಟು ಜನಪದ ಕಲೆಗಳು ನಶಿಸಿ ಹೋಗಲು ಸಿದ್ಧವಾಗಿದೆ. ಗಬಡಿ ಯುವಕರು ಈ ದೀಪಾವಳಿಯ ಅಂಟಿಗೆ ಪಿಂಟಿಗೆ ಸೇವೆಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಪ್ರತಿ ಒಂದನ್ನು ಹಿರಿಯರ ಮಾರ್ಗದರ್ಶನದಂತೆ ಅಚ್ಚುಕಟ್ಟಾಗಿ ನಡೆಸಿ ಈ ಸಂಪ್ರದಾಯವನ್ನು ಉಳಿಸಿ ಮತ್ತು ಬೆಳೆಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅಂಟಿಗೆ ಪಿಂಟಿಗೆಯ ಉಸಿರು ಪದ್ಯ. ಆ ಪದ್ಯಗಳನ್ನು ತುಂಬಾ ಸುಮಧುರವಾಗಿ ಕಲಿತು ಇಡೀ ಊರಿನ ಗ್ರಾಮಸ್ಥರ ಗಮನವನ್ನು ಸೆಳೆದಿದ್ದಾರೆ.
[embedyt] https://www.youtube.com/watch?v=NvkAp3N6btc%5B/embedyt%5D