Categories
ಬೆಂಗಳೂರು ಮಲ್ನಾಡ್

ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗಲ್ಲಿ ದಿಶಾ ಚಿನ್ನದ ಭೇಟೆ!

ರಾಷ್ಟ್ರ ಮಟ್ಟದ ಪವರ್ ಲಿಫ್ಟಿಂಗಲ್ಲಿ ದಿಶಾ ಚಿನ್ನದ ಭೇಟೆ!
– ಶೃಂಗೇರಿ ಮೂಲದ ಕ್ರೀಡಾಪಟು ದಿಶಾ ಭರತ್
– ಬೆಂಗಳೂರಲ್ಲಿ ನಡೆದ ಕ್ರೀಡಾಕೂಟದಲ್ಲಿ ಸಾಧನೆ

NAMMUR EXPRESS NEWS
ಬೆಂಗಳೂರು: ಕ್ರೀಡಾ ಕ್ಷೇತ್ರದಲ್ಲಿ ಅನೇಕ ಮಲೆನಾಡಿನ ಪ್ರತಿಭೆಗಳು ಸಾಧನೆ ಮೂಲಕ ತಮ್ಮೂರಿಗೆ ಕೀರ್ತಿ ತರುತ್ತಿದ್ದಾರೆ. ಇದೀಗ ಶೃಂಗೇರಿ ಮೂಲದ ಪವರ್ ಲಿಫ್ಟರ್ ದಿಶಾ ಅವರು ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ಶಿಪ್ ನಲ್ಲಿ ಒಂದು ಗೋಲ್ಡ್ ಮೆಡಲ್ ಹಾಗೂ ಒಂದು ಸಿಲ್ವರ್ ಮೆಡಲ್ ಪಡೆದಿದ್ದಾರೆ. ಈ ಮೂಲಕ ಸಾಧನೆ ಮಾಡಿದ್ದಾರೆ. ಭಾರತದ ಎಲ್ಲಾ ಭಾಗಗಳಿಂದಲೂ ಹಾಗೂ ರಾಜ್ಯಗಳಿಂದಲೂ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಅವರ ಪತಿ ಭರತ್ ಅವರ ಸ್ಪರ್ಧೆಗೆ ಸಾತ್ ನೀಡಿದ್ದಾರೆ.

ಭರತ್ ಅವರು ಖ್ಯಾತ ಜಿಮ್ ಟ್ರೈನರ್ ಆಗಿದ್ದು ಕನ್ನಡ ಸಿನಿಮಾದ ಸ್ಟಾರ್ ನಟರಾದ ಶ್ರೀಮುರುಳಿ ಹಾಗೂ ನಿಖಿಲ್ ಕುಮಾರಸ್ವಾಮಿ ಅವರಿಗೂ ಟ್ರೈನರ್ ಆಗಿದ್ದಾರೆ.

ದಿಶಾ ಅವರ ಸಾಧನೆಗೆ ಮಲೆನಾಡಿನ ಪರವಾಗಿ ನಮ್ಮೂರ್ ಎಕ್ಸ್ ಪ್ರೆಸ್ ಅಭಿನಂದನೆ ಸಲ್ಲಿಸುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.