ರೈತರ ಅಹೋರಾತ್ರಿ ಹೋರಾಟ!
– ತೀರ್ಥಹಳ್ಳಿ ತಾಲೂಕು ಕಚೇರಿ ಎದುರು ಅಹೋರಾತ್ರಿ ಧರಣಿ: ಡಿಸಿ ಕಚೇರಿಗೆ ಹೋರಾಟ ಶಿಫ್ಟ್
– ಹೋರಾಟಗಾರರ ಜತೆ ಆರಗ ಮಾತುಕತೆ
NAMMUR EXPRESS NEWS
ತೀರ್ಥಹಳ್ಳಿ: ಮಾಲತಿ ನದಿಯ ಕೇಂದ್ರೀಕೃತ ಸ್ಥಳದಿಂದ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಕಾಮಗಾರಿ ಅನುಷ್ಟಾನ ಮಾಡದಂತೆ ಆಗ್ರಹಿಸಿ ಸೋಮವಾರ ಭೀಮೇಶ್ವರ, ಸಂಗಮ: ಉಳಿಸಿ, ಸಮಿತಿ ನೇತೃತ್ವದಲ್ಲಿ ತುಂಗಾ, ಮಾಲತಿ ನದಿಪಾತ್ರದ ಜನರು ತಾಲೂಕಿನ ಭೀಮನ ಕಟ್ಟೆಯಿಂದ ತೀರ್ಥಹಳ್ಳಿವರೆಗೆ ಪಾದಯಾತ್ರೆ ಚಳವಳಿ, ತಾಲೂಕು ಕಚೇರಿ ಮುಂಭಾಗ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಿದರು. ಮಂಗಳವಾರ ಕೂಡ ಪಟ್ಟು ಬಿಡದ ಹೋರಾಟಗಾರರು ಡಿಸಿ ಜನಪ್ರತಿನಿಧಿಗಳು, ಮುಖಂಡರು ನಡೆಸಿದ ಚರ್ಚೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ಧರಣಿ ಮುಂದುವರಿಯಿತು. ಸಂಜೆ ವೇಳೆಗೆ ಅಹೋರಾತ್ರಿ ಧರಣಿ ಕೈಬಿಟ್ಟ ಹೋರಾಟಗಾರರು ಅಹೋರಾತ್ರಿ ಧರಣಿ ತಾತ್ಕಾಲಿಕವಾಗಿ ಡಿಸಿ ಕಚೇರಿಯ ಮಾತುಕತೆ ಬಳಿಕ ಮುಂದುವರಿಸುವುದಾಗಿ ತಿಳಿಸಿದರು.
ಹೋರಾಟಗಾರರು ಹೇಳೋದೇನು?
ಕುಡಿಯುವ ನೀರು ಪೂರೈಕೆ ಯೋಜನೆಗೆ ವಿರೋಧವಾಗಿಲ್ಲ, ಮಾಲತಿ ನದಿಯ ಏಕ ಸ್ಥಳದಿಂದ ಕುಡಿಯುವ ನೀರು ಪೂರೈಸುವುದಕ್ಕೆ ವಿರೋಧವಿದೆ. ಗ್ರಾಮದ ಸ್ವಾಲಂಬನೆಯನ್ನು ಕಸಿಯುವ ಪ್ರಯತ್ನವನ್ನು ಆಡಳಿತ ಮಾಡಬಾರದು. ನದಿ ಪರಿಸರ, ಪ್ರಕೃತಿ ಸಂಪತ್ತು ಉಳಿಸಲು ಆಡಳಿತ ನಿರ್ಧರಿಸಬೇಕು. ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಪ್ರತಿಭಟನೆ ಉದ್ದೇಶಿಸಿ ರಾಜ್ಯ ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಮಾತನಾಡಿ, ವೈಜ್ಞಾನಿಕ ಮಾದರಿಯಲ್ಲಿ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನಕ್ಕೆ ಸರಕಾರ ಆದ್ಯತೆ ನೀಡ ಬೇಕು. ಹಳ್ಳಿಯ ಜನರು ದುಡಿಯದೆ ಇದ್ದರೆ ಆಡಳಿತ ನಡೆಯದು ಎಂಬ ಸಂಗತಿ ಗೊತ್ತಿರಬೇಕು ಎಂದರು.
ರೈತ ಮುಖಂಡ ಕಂಬಳಿಗೆರೆ ರಾಜೇಂದ್ರ ಮಾತನಾಡಿ, ಬಡವರು, ತಳಸಮುದಾ ಯದ ಜನರಿಗೆ ಕುಡಿ ಯುವ ನೀರು, ಕೊಡಬೇಡಿ ಎಂಬ ಕಠೋರ ಮನಸ್ಥಿತಿ, ರೈತರಿಗಿಲ್ಲ. ಮಾಲತಿ ನದಿ ಸ್ಥಳ ಸೇರಿದಂತೆ ಇತರ ಕಡೆಗಳಲ್ಲಿ ಸ್ಥಳ ಗುರುತಿಸಿ ಕುಡಿಯುವ ನೀರು ಪೂರೈಸಲಿ. ಕೇಂದ್ರಿಕೃತ ಸ್ಥಳ ಬದಲಾಯಿಸಿ ಎಂಬುದು ಬೇಡಿಕ ಆಗಿದೆ ಎಂದರು.
ಭೀಮೇಶ್ವರ ಸಂಗಮ ಸಮಿತಿ ಮುಖಂಡ ಸಸಿಗೊಳ್ಳಿ ರವೀಂದ್ರ ಮಾತನಾಡಿ, ಗ್ರಾಮಸ್ಥರನ್ನು ಕತ್ತಲೆಯಲ್ಲಿಟ್ಟು ಯೋಜನೆ ಅನುಷ್ಠಾನ ಮಾಡುವ ಅಗತ್ಯ ಏನಿದೆ. ಚಳವಳಿ ಹತ್ತಿಕ್ಕುವ ಪ್ರಯತ್ನ ನಡೆಯುವುದಿಲ್ಲ ಎಂದರು. ಪರಿಸರ ಹೋರಾಟಗಾರ ಕಲ್ಲಹಳ್ಳ ಶ್ರೀಧರ್, ಮಾತನಾಡಿ, ಬೆಂಗಳೂರಿನ ಕಾವೇರಿ ನದಿ ರೀತಿಯಲ್ಲಿ ಮಲೆನಾಡಿನಲ್ಲಿ ಸಮಸ್ಯೆ ಉದ್ಭವಿಸಿದೆ. ಸ್ವಾಲಂಬನೆ ಹಾಳು ಮಾಡದೆ ಕುಡಿಯುವ ನೀರು ಪೂರೈಕೆ ಆದ್ಯತೆ ನೀಡುವ ಕಾಮಗಾರಿ ಜಾರಿ ಆಗಲಿ ಎಂದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಪ್ರತಿಭಟನೆ ಸ್ಥಳಕ್ಕೆ ಆಗಮಿ ಮಾತನಾಡಿದರು. ರೈತ ಸಂಘದ ಅಧ್ಯಕ್ಷ ಕೋಡ್ಲುವೆಂಕಟೇಶ್, ಪ್ರಧಾನ ಕಾವ್ಯದರ್ಶಿ ಹೊರಬೈಲು ರಾಮಕೃಷ್ಣ ರೈತ ಮುಖಂಡ ಕೊರೋಡಿ ಕೃಷ್ಣಪ್ಪ,,ಕೋಡ್ಲು ಸುಂದರೇಶ್, ಸಚಿನ್, ಹರ್ಷ ಮತ್ತಿತರರು ಇದ್ದರು.
ಹೋರಾಟಗಾರರ ಜತೆ ಆರಗ ಮಾತುಕತೆ
ಶಾಸಕ ಆರಗ ಜ್ಞಾನೇಂದ್ರ ಕೂಡ ಹೋರಾಟಗಾರರ ಜತೆ ಮಾತುಕತೆ ನಡೆಸಿದರು. ತಮ್ಮ ಜತೆ ಇದ್ದೇನೆ. ನಿಮಗೆ ತೊಂದರೆ ಆಗಲು ಬಿಡಲ್ಲ ಎಂದು ಧರಣಿ ಸ್ಥಳಕ್ಕೆ ಭೇಟಿ ನೀಡಿದ ಆರಗ ಜ್ಞಾನೇಂದ್ರ ಅಭಯ ನೀಡಿದರು.
