Categories
ಕರಾವಳಿ ಮಲ್ನಾಡ್

ಶುಂಠಿ ಗೂ ಬಂತು ಮೇಲೆ ಚುಕ್ಕಿ ರೋಗ

ಶುಂಠಿ ಗೂ ಬಂತು ಮೇಲೆ ಚುಕ್ಕಿ ರೋಗ.

* ರೈತರ ಪರಿಸ್ಥಿತಿ ಲಭ ಲಭೋ ….!
* ಶುಂಠಿ ಬೆಳೆ ಉಳಿಸಿಕೊಂಡವನೇ ಕುಬೇರ.

ವರದಿ: ಉಮೇಶ್ ದೇಮ್ಲಾಪುರ
NAMMUR EXPRESS NEWS
ಕರ್ನಾಟಕ ಹಾಗೂ ಹೊರ ರಾಜ್ಯಗಳಲ್ಲಿ ಬಹುತೇಕ ರೈತರು ಶುಂಠಿ ಬೆಳೆಯನ್ನ ಅವಲಂಬಿಸಿದ್ದಾರೆ, ಆದರೆ ಶುಂಠಿಯನ್ನು ನಂಬಿದ ರೈತನ ಪರಿಸ್ಥಿತಿ ಅದೋಗತಿಯತ್ತ ಸಾಗುತ್ತಿದೆ, ಅಡಕೆ ಮತ್ತು ತೆಂಗಿಗೆ ಎಲೆಚುಕ್ಕಿ ರೋಗ ಕಾಣಿಸಿಕೊಂಡು ಇನ್ನೇನು ರೈತ ಸಲ್ಪ ಸುಧಾರಿಸಿಕೊಂಡಿದ್ದ ಆದರೆ ಈಗ ಶುಂಠಿಗೆ ಶುರು ಆಯ್ತು ಎಲ್ಲ ಚುಕ್ಕಿ ರೋಗ.
ಮೈತುಂಬ ಸಾಲ ಮಾಡಿಕೊಂಡು ಶುಂಠಿ ಬೆಳೆಯೋಣ ಎಂದು ಮುಂದಾದ ರೈತರ ಕರುಣಾಜನಕ ಸ್ಥಿತಿ ಅವರ್ಣನೀಯ. ಶುಂಠಿ ಬೆಳೆಗೆ ಔಷಧಿ ಮತ್ತು ಗೊಬ್ಬರಗಳನ್ನು ಸಮಯಕ್ಕೆ ಸರಿಯಾಗಿ ಸಿಂಪಡಿಸಿದರೆ, ಶುಂಠಿಯು ಒಂದು ಲಾಭದಾಯಕ ಬೆಳೆ ಆಗಿದ್ದು. ಶುಂಠಿ ಬೆಳೆಯನ್ನು ಬಹುತೇಕ ಯುವ ರೈತರುಗಳು ಐಟಿ ಬಿಟಿ ಕಂಪನಿಗಳ ಕೆಲಸವನ್ನು ಬಿಟ್ಟು ಶುಂಠಿ ಬೆಳೆಯನ್ನು ಹತ್ತು ಹದಿನೈದು ಎಕರೆ ಗಳಷ್ಟು ಶುಂಠಿ ಬೆಳೆಯನ್ನು ಮಾಡುತ್ತಿರುವ ಅದೆಷ್ಟೋ ಯುವಕರು ಕಾಣ ಸಿಗುತ್ತಾರೆ.
ಆದರೆ ಶುಂಠಿ ಬೆಳೆಗೆ ಬಂದ ಮಹಾಮಾರಿ ಎಲೆಚುಕ್ಕಿ ರೋಗವು ಅತಿಯಾದ ತೇವಾಂಶ ಮತ್ತು ಅತಿಯಾದ ಮಳೆಯಿಂದ ಉಲ್ಬಣಗೊಳ್ಳುತ್ತಿದೆ, ಈ ರೋಗವು ಪೈರಿಕ್ಯುಲೇರಿಯಾ ಶಿಲೀಂಧ್ರದಿಂದ ಬರುತ್ತದೆ.
ಹೆಚ್ಚಿನ ತೇವಾಂಶ, ಕಡಿಮೆ ರಾತ್ರಿಯ ಉಷ್ಣಾಂಶ ಮತ್ತು ಸಾರಜನಕ ಗೊಬ್ಬರವನ್ನು ಅತಿಯಾಗಿ ಬಳಸುವುದರಿಂದ ಈ ರೋಗ ಹರಡುತ್ತದೆ, ಮೊದಲು ಯಾವುದೋ ಸ್ವಲ್ಪ ಜಾಗದಲ್ಲಿ ಶುಂಠಿ ಗಿಡಗಳ ಮೇಲೆ ಚುಕ್ಕಿ ಗಳು ಕಂಡುಬರುತ್ತವೆ ನಂತರ ಗಿಡದಿಂದ ಗಿಡಕ್ಕೆ ಹರಡುತ್ತಾ ಇಡೀ ಶುಂಠಿ ಇರುವ ಪ್ರದೇಶವನ್ನೇ ಹಬ್ಬುತ್ತದೆ.
ಮಾರುಕಟ್ಟೆಯಲ್ಲಿ ಈಗಾಗಲೇ ಈ ಎಲೆ ಚುಕ್ಕಿ ರೋಗಕ್ಕೆ ಔಷಧಿಗಳು ದೊರಕುತ್ತಿದ್ದು, ತಕ್ಷಣ ಔಷಧಿಯನ್ನು ಸಿಂಪಡಿಸಿದರೆ ರೋಗವನ್ನು ತಡೆಹಿಡಿಯಬಹುದೇ ಹೊರತು, ಆದರೆ ಶುಂಠಿಯೂ ಮೊದಲಿನಷ್ಟು ಉತ್ತಮ ರೀತಿಯಲ್ಲಿ ಫಸಲು ನೀಡುವುದಿಲ್ಲ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.