ದೇವಂಗಿಯ ಸ್ನೇಹಲತಾಗೆ ಒಲಿದ ಕನ್ನಡ ಕೋಗಿಲೆ ರಾಜ್ಯ ಪ್ರಶಸ್ತಿ
* ರಾಜ್ಯಮಟ್ಟದ ಗಾಯನ ಹಾಗೂ ಕನ್ನಡ ಕೋಗಿಲೆ ಸ್ಪರ್ಧೆಯಲ್ಲಿ ವಿನ್ನರ್
* ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ಪ್ರಶಸ್ತಿ ಪ್ರದಾನ
NAMMMUR EXPRESS NEWS
ತೀರ್ಥಹಳ್ಳಿ: ಚಿಕ್ಕಮಗಳೂರಿನ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘ ಹೂವಿನ ಹಡಗಲಿ ವತಿಯಿಂದ ಕರ್ನಾಟಕ ಧ್ವನಿ ವೇದಿಕೆಯಲ್ಲಿ ನಡೆದ ಗಾಯನ ಸ್ಪರ್ಧೆಯಲ್ಲಿ ಭಾವಹಿಸಿ ವಿಜೇತರಾಗಿದ್ದು, ಜುಲೈ 27 ರಂದು ರಾಷ್ಟ್ರಮಟ್ಟದ ಗಾಯನ ಹಾಗೂ ಕನ್ನಡ ಕೋಗಿಲೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಇದೇ ವೇದಿಕೆಯಲ್ಲಿ ತೀರ್ಥಹಳ್ಳಿಯ ಕಲಾವಿದೆ ಸ್ನೇಹಲತಾ ದೇವಂಗಿ ಇವರು ಕನ್ನಡ ಕೋಗಿಲೆ ರಾಜ್ಯ ಪ್ರಶಸ್ತಿಗೆ ಭಾಜನರಾದರು. ಪ್ರತಿಭೆಗಳನ್ನು ಹೊರೆ ತರಲು ಸಾಮಾಜಿಕ ಜಾಲತಾಣದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಗಾಯನ ಸ್ಪರ್ಧೆಯಲ್ಲಿ 150ಕ್ಕೂ ಅಧಿಕ ಗಾಯಕರು ಭಾಗವಹಿಸಿದ್ದರು. ರಾಜ್ಯದ ಮೂಲೆ ಮೂಲೆಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಅದರಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರಾದ ಸ್ನೇಹಲತಾ ಅವರು ಪ್ರಥಮ ಸ್ಥಾನ ಪಡೆದು ಜಿಲ್ಲೆಗೆ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಧು ನಾಯಕ್ ಲಂಬಾಣಿ ಅವರು ವಹಿಸಿದ್ದರು ನುರಿತ ತೀರ್ಪುಗಾರರು ಗೀತೆಗಳನ್ನು ಪರಿಶೀಲಿಸಿ ವಿಜೇತರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದ್ದರು.
