Categories
ಮಲ್ನಾಡ್

ಮಲ್ನಾಡ್ ಟಾಪ್ ನ್ಯೂಸ್

ಚಿರತೆ ಬಾಯಿಗೆ 31 ಕುರಿಗಳು ಬಲಿ
– ಕಡೂರಿನ ಮಲ್ಲೇಶ್ವರ ಗ್ರಾಮದಲ್ಲಿ ನಡೆದ ಘಟನೆ
– ಭದ್ರಾವತಿ: ಪತ್ನಿಯ ಕುತ್ತಿಗೆ ಕೊಯ್ದ ಪತಿ..!
– ತೀರ್ಥಹಳ್ಳಿ: ಜಿಂಕೆ ಶಿಕಾರಿ: ಓರ್ವ ಅರೆಸ್ಟ್
– ದತ್ತ ಜಯಂತಿ ಹಿನ್ನೆಲೆ: ಮದ್ಯ ಮಾರಾಟ ನಿಷೇಧ

NAMMUR EXPRESS NEWS
ಚಿಕ್ಕಮಗಳೂರು: ಕುರಿ ಮಂದೆ ಮೇಲೆ ಚಿರತೆ ದಾಳಿ ನಡೆಸಿ 31 ಕುರಿ ಮತ್ತು ಮೇಕೆಗಳು ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮಲ್ಲೇಶ್ವರ ಗ್ರಾಮದಲ್ಲಿ ನಡೆದಿದೆ. ಚಿರತೆ ದಾಳಿಗೆ ತೋಟದ ಮನೆಯಲ್ಲಿದ್ದ 17 ಕುರಿ, 14 ಮೇಕೆಗಳ ಸ್ಥಳದಲ್ಲೇ ಸಾವನ್ನಪ್ಪಿವೆ. ಚಂದ್ರು, ಬಸವರಾಜು, ಮಂಜು, ಲಕ್ಷ್ಮಣ್ ಎಂಬುವರಿಗೆ ಸೇರಿದ ಕುರಿ ಮತ್ತು ಮೇಕೆಗಳನ್ನು ಸುಶೀಲಮ್ಮ ಎಂಬುವರ ತೋಟದ ಮನೆಯಲ್ಲಿ ಕಟ್ಟಲಾಗಿತ್ತು. 4 ಲಕ್ಷ ಮೌಲ್ಯದ ನಷ್ಟ ಸಂಭವಿಸಿದೆ. ಪಶು ವೈದ್ಯ ಉಮೇಶ್ ಅವರು ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಿಂಕೆ ಶಿಕಾರಿ: ಓರ್ವ ಅರೆಸ್ಟ್

ತೀರ್ಥಹಳ್ಳಿ: ಜಿಂಕೆ ಶಿಕಾರಿ ಮಾಡಿ ಮಾಂಸವನ್ನು ಸಿದ್ಧಪಡಿಸುತ್ತಿದ್ದ ಓರ್ವನನ್ನು ಮಂಡಗದ್ದೆ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳು ತಪ್ಪಿಸಿಕೊಂಡಿದ್ದು ಅವರಿಗಾಗಿ ಹುಡುಕಾಟ ನಡೆಯುತ್ತಿದೆ. ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ವಲಯದ ಕೀಗಡಿ ಗ್ರಾಮದಲ್ಲಿ ಕಾನೂನುಬಾಹಿರವಾಗಿ ಶಿಕಾರಿ ಮಾಡಿ ಮಾಂಸ ತಯಾರಿಸುತ್ತಿದ್ದವ ತಮಿಳುನಾಡಿನ ಮೂಲದ ರಮೇಶ್ (40) ಎಂದು ತಿಳಿದುಬಂದಿದ್ದು ಇವನನ್ನು ಅರಣ್ಯಾಧಿಕಾರಿಗಳು ಬಂದಿಸಿದ್ದಾರೆ. ಜಿಂಕೆಯ ತಲೆ, ಕೊಂಬು, ಕಾಲುಗಳನ್ನು ಶೇಖರಿಸುತ್ತಿದ್ದ ಮೂವರು ಆರೋಪಿಗಳಿಗೆ ಹುಡುಕಾಟ ನಡೆಯುತ್ತಿದ್ದು ಈ ಅಕ್ರಮ ಕೃತ್ಯಕ್ಕೆ ಒಂದು ಲಕ್ಷ ದಂಡ ಮೂರು ವರ್ಷ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಯಿದೆ.

ಪತ್ನಿಯ ಕುತ್ತಿಗೆ ಕೊಯ್ದ ಪತಿ..!

ಭದ್ರಾವತಿ ನಗರದ ಬೊಮ್ಮನಕಟ್ಟೆಯ ಹೌಸಿಂಗ್ ಬೋರ್ಡ್‌ ನಲ್ಲಿ ಪತಿಯೇ ಪತ್ನಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿ ರುವ ಘಟನೆ ಬುಧವಾರ ತಡರಾತ್ರಿ ನಡೆದಿ ದೆ. ರಮ್ಯ (36) ಕೊಲೆಯಾದವರು. ಆರೋಪಿ, ಈಕೆಯ ಎರಡನೇ ಪತಿ ನಾಗ ಭೂಷಣ ಗುರುವಾರ ಜೈಲು ಸೇರಿದ್ದಾನೆ. ರಮ್ಯಾ ಶಿವಮೊಗ್ಗದ ಖಾಸಗಿ ಫೈನಾನ್ಸ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ನಾಗಭೂಷಣ ಬೆಂಗಳೂರಿನಲ್ಲಿ ಸೂಪರ್ ಮಾರ್ಕೆಟ್ ನಡೆಸುತ್ತಾ ವ್ಯವಹಾರದಲ್ಲಿ ನಷ್ಟವುಂಟಾಗಿ ಆಟೊ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದು, ಬೆಂಗಳೂರಿನಿಂದ ಬೊಮ್ಮನಕಟ್ಟೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ. ರಮ್ಯಳ ಶೀಲ ಶಂಕಿಸಿ ಬುಧವಾರ ರಾತ್ರಿ ಜಗಳ ಮಾಡಿ, ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಕಾಗದ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದತ್ತ ಜಯಂತಿ ಹಿನ್ನೆಲೆ: ಮದ್ಯ ಮಾರಾಟ ನಿಷೇಧ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆಯಲ್ಲಿ ದತ್ತಜಯಂತಿ ಕಾರ್ಯಕ್ರಮದ ಆಚರಣೆ ಹಿನ್ನೆಲೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಡಿಸೆಂಬರ್ 24.12.2023 ರಿಂದ 26.12.2023 ರವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ ಮತ್ತು ನರಸಿಂಹರಾಜಪುರ ತಾಲೂಕುಗಳ ವ್ಯಾಪ್ತಿಯಲ್ಲಿ 24.12.2023ರ ಬೆಳಿಗ್ಗೆ 6 ರಿಂದ 26.12.2023 ಮಧ್ಯರಾತ್ರಿ 12 ಗಂಟೆವರೆಗೆ ನಿಷೇಧಿಸಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.