ಇಂಜಿನಿಯರಿಂಗ್ ಪದವಿಯಲ್ಲಿ ಚಿನ್ನದ ಪದಕ ಪಡೆದ ಸಾತ್ವಿಕ್ ಎಂ.ಹೆಗಡೆ
– ತೀರ್ಥಹಳ್ಳಿ ಸೇವಾ ಭಾರತಿ ಶಾಲೆ ವಿದ್ಯಾರ್ಥಿ
– ಸಹಕಾರಿ ನಾಯಕ ಮಹಾಬಲೇಶ್ ಹೆಗ್ಡೆ ಅವರ ಪುತ್ರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಸೇವಾಭಾರತಿ ಶಾಲೆಯ ಹಿರಿಯ ವಿದ್ಯಾರ್ಥಿಯಾದ ಸಾತ್ವಿಕ್ ಎಂ ಹೆಗಡೆ ಅವರು ಎನ್. ಐ. ಇ ಮೈಸೂರು ಸ್ವಾಯತ್ತ ವಿಶ್ವವಿದ್ಯಾನಿಲಯದಲ್ಲಿ ಇಂಜಿನಿಯರಿಂಗ್ ಅಂತಿಮ ವರ್ಷದಲ್ಲಿ ಮೂರನೇ ರಾಂಕ್ ಪಡೆಯುವ ಮೂಲಕ ಚಿನ್ನದ ಪದಕವನ್ನು ಗಳಿಸಿದ್ದಾರೆ. ಓದಿನಲ್ಲಿ ಸದಾ ಮುಂದಿರುವ ಸಾತ್ವಿಕ್ ಹೆಗಡೆ ತೀರ್ಥಹಳ್ಳಿ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮಹಾಬಲೇಶ ಹೆಗಡೆ ಹಾಗೂ ಇಂದಿರಾನಗರ ಹಿ ಪ್ರಾ ಶಾಲೆಯ ಶಿಕ್ಷಕಿಯಾದ ರೇಣುಕಾ ಹೆಗಡೆ ಇವರ ಮಗ. ಮೈಸೂರಿನಲ್ಲಿ ನಡೆದ 13ನೇ ಪದವಿ ಪ್ರಧಾನ ಸಮಾರಂಭದಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಹೆತ್ತವರಿಗೆ ಹಾಗೂ ಓದಿದ ಶಿಕ್ಷಣ ಸಂಸ್ಥೆಗಳಿಗೆ ಕೀರ್ತಿ ತಂದಿದ್ದಾನೆ . ಪ್ರಸ್ತುತ ಪ್ರಸಿದ್ಧ ಕಂಪೆನಿ ಸ್ಯಾಮ್ ಸಂಗ್ ಅಲ್ಲಿ ಉತ್ತಮ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಭಾವಂತ ಸಾತ್ವಿಕ್ ಹೆಗಡೆಯ ಸಾಧನೆಗೆ ಅಭಿನಂದನೆಗಳು.