Categories
ಮಲ್ನಾಡ್

ತಂದೆ ಮಾಡಿದ್ದ ಸಾಲಕ್ಕೆ ಮಗನಿಗೆ ಹಲ್ಲೆ ಮನನೊಂದ ಯುವಕ ಆತ್ಮಹತ್ಯೆ

ಟಾಪ್ 4 ನ್ಯೂಸ್ ಮಲ್ನಾಡ್

ಭದ್ರಾವತಿ :ತಂದೆ ಮಾಡಿದ್ದ ಸಾಲಕ್ಕೆ ಮಗನಿಗೆ ಹಲ್ಲೆ ಮನನೊಂದ ಯುವಕ ಆತ್ಮಹತ್ಯೆ
– ಶಿವಮೊಗ್ಗ : ವಿದ್ಯುತ್ ತಗುಲಿ ಗಾರೆ ಕೆಲಸದ ಯುವಕ ಸಾವು
– ಸಾಗರ: ಚಂಪಕ ಸರಸ್ ನಲ್ಲಿ ಈಜಲು ಇಳಿದ ಯುವಕ ಸಾವು
– ಮೂಡಿಗೆರೆ: ಬೈಕ್ ಮತ್ತು ಟಾಟಾ ಸುಮೋ ವಾಹನ ಮುಖಾಮುಖಿ ಡಿಕ್ಕಿ

NAMMUR EXPRESS NEWS
ಭದ್ರಾವತಿ : ತಂದೆ ಮಾಡಿದ್ದ ಸಾಲಕ್ಕೆ ಮಗನಿಗೆ ಹಲ್ಲೆ ಮಾಡಲಾಗಿದ್ದು, ಮನನೊಂದ ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿಯ ಪೇಪರ್ ಟೌನ್ ನಲ್ಲಿ ಸಂಭವಿಸಿದೆ. ಸ್ಟೀವನ್ (25) ಯುವಕ ಮೃತನಾಗಿದ್ದು, ಭದ್ರಾವತಿಯ ಪೇಪರ್ ಟೌನ್ ಬಡಾವಣೆಯಲ್ಲಿ ಘಟನೆ ನಡೆದಿದೆ. ಪರಶುರಾಮ್ ಎಂಬುವರ ಬಳಿ 2 ಲಕ್ಷ ಸಾಲವನ್ನ ಪೇಪರ್ ಟೌನ್ ನ ನಿವಾಸಿ ಜೋಸೆಫ್ ಎಂಬುವರು ಪಡೆದಿದ್ದರು. ಜೋಸೆಫ್, ಮೃತ ಸ್ಟೀವನ್ ನ ತಂದೆಯಾಗಿದ್ದಾರೆ. ಸಾಲ ಪಡೆದುಕೊಂಡು ತೀರಿಸಲಾಗದೇ ಜೋಸೆಫ್ ಮನೆ ಬಿಟ್ಟು ಹೋಗಿದ್ದನು. ಸಾಲ ವಸೂಲಿಗಾಗಿ ಸ್ಟೀವನ್ ಕರೆದುಕೊಂಡು ಹೋಗಿ ಪರಶುರಾಮ ಹಲ್ಲೆ ನಡೆಸಿರುವುದಾಗಿ ಇಂದು ದಾಖಲಾಗಿದ್ದ ಎಫ್ಐಆರ್ ನಲ್ಲಿ ಆರೋಪಿಸಲಾಗದೆ. ಲ್ಲೆಯಿಂದ ಮನನೊಂದ ಸ್ಟೀವನ್ ಮನೆಗೆ ಬಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ದಾಖಲಾಗಿದೆ.
ಘಟನೆ ಕುರಿತು ಪೇಪರ್ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಧ್ಯ‌ ಭದ್ರಾವತಿ ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆರೋಪಿಯ ಬಂಧನದ ಬಗ್ಗೆ ಇನ್ನೂ ತಿಳಿದು ಬರಬೇಕಿದೆ.

– ಶಿವಮೊಗ್ಗ : ವಿದ್ಯುತ್ ತಗುಲಿ ಗಾರೆ ಕೆಲಸದ ಯುವಕ ಸಾವು

ಶಿವಮೊಗ್ಗ : ಹಳೆ ಜಂಬರಘಟ್ಟದಲ್ಲಿ ಗಾರೆ ಕೆಲಸ ಮಾಡುವ ವೇಳೆ ಯುವಕನೋರ್ವನಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿದ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಹೊಳೆಹೊನ್ನೂರಿನ ಉಪ್ಪಾರರ ಕೇರಿಯ ವಾಸಿ ಶರತ್ ಮೃತ ಯುವಕ. ಹಳೇ ಜಂಬರಘಟ್ಟದ ದೇವಸ್ಥಾನದ ಕೆಲಸ ಮಾಡುವ ವೇಳೆ ವಿದ್ಯುತ್ ತಂತಿ ತಗುಲಿ ಕೆಳಕ್ಕೆ ಬಿದ್ದಾಗ ಕೂಡಲೇ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟರಲ್ಲೇ ಆತನ ಸಾವಾಗಿತ್ತು ಎಂದು ಗೊತ್ತಾಗಿದೆ.

– ಸಾಗರ: ಚಂಪಕ ಸರಸ್ ನಲ್ಲಿ ಈಜಲು ಇಳಿದ ಯುವಕ ಸಾವು

ಸಾಗರ: ಆನಂದಪುರ ಇಲ್ಲಿನ ಮಹಂತಿನ ಮಠ ಚಂಪಕ ಸರಸ್ ನಲ್ಲಿ ಈಜಲು ಇಳಿದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರು ಮೂಲದ ಕುಶಾಲ್ (22) ಎಂಬ ಇಂಜಿನಿಯರ್ ಸಾವನ್ನಪ್ಪಿರುವ ದುರ್ದೈವಿ. ಕುಶಾಲ್, ಸಾಯಿ ರಾಮ್ ಹಾಗೂ ಯಶ್ವಂತ್ ಎಂಬ ಯುವಕರು ಬೆಂಗಳೂರಿನಿಂದ ಕುವೆಂಪುರವರ ಮನೆಗೆ ತೆರಳುವ ಉದ್ದೇಶದಿಂದ ಟ್ರಿಪ್ ಪ್ಲಾನ್ ಮಾಡಿ ಬಂದಿದ್ದರು, ಶಿವಮೊಗ್ಗ ಸಮೀಪಿಸುತ್ತಿದ್ದಂತೆ ಕುಶಾಲ್ ರವರ ಸ್ನೇಹಿತ ಆನಂದಪುರ ಸಮೀಪ ಚಂಪಕ ಸರಸು ಎಂಬ ಉತ್ತಮ ಸ್ಥಳವಿದೆ ನೋಡಿಕೊಂಡು ಬನ್ನಿ ಎಂದು ತಿಳಿಸಿದ್ದರು ಇದರ ಹಿನ್ನೆಲೆ ಚಂಪಕ ಸರಸುವಿಗೆ ಬಂದ ಕುಶಾಲ್ ಮತ್ತು ತಂಡದವರು ಫೋಟೋಶೂಟ್ ಕೂಡ ಮಾಡಿದ್ದಾರೆ.
ಚಂಪಕ ಸರಸುವಿನಲ್ಲಿ ಕೆಲ ಸ್ಥಳೀಯ ಯುವಕರು ಈಜಾಡುತ್ತಿದ್ದನ್ನು ಕಂಡು ಕುಶಾಲ್ ಕೂಡ ಬಟ್ಟೆ ತೆಗೆದು ಈಜಾಡಲು ಪ್ರಾರಂಭಿಸಿದ್ದಾನೆ, ಆದರೆ ಕೆಲ ಹೊತ್ತಿನಲ್ಲಿ ನೀರಿನಲ್ಲಿ ಮುಳುಗಿದ ವ್ಯಕ್ತಿ ನಾಪತ್ತೆಯಾಗಿದ್ದು ಆತನ ಸ್ನೇಹಿತರಿಗೆ ಭಯವನ್ನುಂುಮಾಡಿದೆ, ತಕ್ಷಣ ಅವರು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ, ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ಮೃತ ದೇಹವನ್ನು ಹೊರತೆಗೆದಿದ್ದಾರೆ.
ಆನಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

– ಮೂಡಿಗೆರೆ: ಬೈಕ್ ಮತ್ತು ಟಾಟಾ ಸುಮೋ ವಾಹನ ಮುಖಾಮುಖಿ ಡಿಕ್ಕಿ

ಮೂಡಿಗೆರೆ: ಬೈಕ್ ಮತ್ತು ಟಾಟಾ ಸುಮೋ ವಾಹನ ಮುಖಾಮುಖಿ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಗ್ಗಸಗೊಡು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ನಿರಂಜನ್ (25) ಮೃತ ಪಟ್ಟ ವ್ಯಕ್ತಿ. ಮೂಡಿಗೆರೆಯಿಂದ ಹೆಗ್ಗುಡ್ಲು ಎಂಬ ತನ್ನ ಊರಿಗೆ ತೆರಳುತ್ತಿದ್ದ ಯುವಕ, ಧರ್ಮಸ್ಥಳದಿಂದ ಚಿಕ್ಕಮಗಳೂರು ಕಡೆಗೆ ಹೋಗುತ್ತಿದ್ದ ಟಾಟಾ ಸುಮೋ ಬೈಕ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸವಾರ ನಿರಂಜನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆ ಕುರಿತು ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.