Categories
ಮಲ್ನಾಡ್

ನವದೆಹಲಿ ಪರೇಡ್ ಗೆ ರಂಗಾಯಣ ಕಲಾವಿದರು

-ಶಿವಮೊಗ್ಗ ಕಲಾವಿದರು ಗಣರಾಜ್ಯೋತ್ಸವ ಪರೇಡ್ ಗೆ ಆಯ್ಕೆ

– ಮೊದಲ ಬಾರಿಗೆ ರಂಗಾಯಣ ಕಲಾವಿದರ ಆಯ್ಕೆ

ಶಿವಮೊಗ್ಗ: ಈ ಬಾರಿ ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್‍ಗೆ ಶಿವಮೊಗ್ಗದ ರಂಗಾಯಣ ಕಲಾವಿದರು ಆಯ್ಕೆಯಾಗಿದ್ದಾರೆ.

ವಿಜಯನಗರ ಸಂಸ್ಥಾನದ ಇತಿಹಾಸ ಬಿಂಬಿಸುವ ರಾಜ್ಯದ ಸ್ತಬ್ಧಚಿತ್ರದ ಪಾತ್ರಗಳಿಗೆ ಜೀವ ತುಂಬಲಿದ್ದು, ಖ್ಯಾತ ಕಲಾ ನಿರ್ದೇಶಕ ಶಶಿಧರ ಅಡಪ ಅವರು ಸ್ತಬ್ಧಚಿತ್ರ ವಿನ್ಯಾಸ ಮಾಡಿದ್ದಾರೆ ಎಂದು ರಂಗಾಯಣ ನಿರ್ದೇಶಕ ಸಂದೇಶ ಜವಳಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದೇಶದ 14 ರಾಜ್ಯಗಳ ಸ್ತಬ್ಧಚಿತ್ರಗಳು ಭಾಗವಹಿಸುತ್ತಿದ್ದು, ಅದರಲ್ಲಿ ರಾಜ್ಯದಿಂದ ವಿಜಯನಗರದ ಇತಿಹಾಸ ಸಾರುವ ಸ್ತಬ್ಧಚಿತ್ರ ಆಯ್ಕೆಯಾಗಿದೆ. ಇದೇ ಮೊದಲ ಬಾರಿಗೆ ಶಿವಮೊಗ್ಗ ರಂಗಾಯಣ ಕಲಾವಿದರಿಗೆ ಅವಕಾಶ ಸಿಕ್ಕಿರುವುದಾಗಿ ನಿರ್ದೇಶಕರು ತಿಳಿಸಿದ್ದಾರೆ..

12 ಕಲಾವಿದರಾದ ಆರ್.ಪ್ರಸನ್ನ ಕುಮಾರ್, ಡಿ.ಆರ್. ನಿತಿನ್, ರಮ್ಯ ಆರ್., ಸವಿತಾ ಆರ್. ಕಾಳಿ, ಆರ್. ರಂಜಿತಾ, ಎಂ.ಎಚ್. ದೀಪ್ತಿ, ಎಸ್.ಎಂ. ರವಿಕುಮಾರ್, ಸುಜಿತ್ ಕಾರ್ಕಳ, ಎನ್.ಚಂದನ್, ಎಂ.ಎಲ್. ಶರತ್ ಬಾಬು, ಬಿ.ಕೆ. ಮಹಾಬಲೇಶ್ವರ್, ಕಾರ್ತಿಕ ಕಲ್ಲುಕುಟಿಕರ್ ಭಾಗವಹಿಸಲಿದ್ದು, ಜ.12ರಂದು ಬೆಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.