Categories
ಮಲ್ನಾಡ್

ನಾಗರ ಪಂಚಮಿ ಆಚರಣೆಗೆ ಸಿದ್ಧತೆ!

ನಾಗರ ಪಂಚಮಿ ಆಚರಣೆಗೆ ಸಿದ್ಧತೆ!
– ನಾಗದೇವಸ್ಥಾನಗಳಲ್ಲಿ ಪೂಜೆಗೆ ಭಕ್ತರ ಸಜ್ಜು
– ನಾಗರಕಟ್ಟೆಗಳಲ್ಲಿ ಪೂಜೆ: ವಿವಿಧ ಅಭಿಷೇಕ

NAMMUR EXPRESS NEWS
ಮಲೆನಾಡು: ನಾಗರ ಪಂಚಮಿ ನಿಮಿತ್ತ ಎಲ್ಲೆಡೆ ಹಬ್ಬಕ್ಕೆ ಸಿದ್ಧತೆ ಜೋರಾಗಿದೆ. ನಾಗದೇವಸ್ಥಾನಗಳಲ್ಲಿ ಪೂಜೆಗೆ ಸಿದ್ಧತೆ ನಡೆಯುತ್ತಿದೆ. ಹಬ್ಬದ ಆಚರಣೆಗೆ ಭಕ್ತರು ಸಜ್ಜುಗೊಂಡಿದ್ದಾರೆ. ಹಬ್ಬದ ಪ್ರಯುಕ್ತ ಜನತೆ ಈಗಾಗಲೇ ಭರ್ಜರಿ ಸಿದ್ಧತೆ ಆರಂಭಿಸಿದ್ದು, ಹೂವು, ಹಣ್ಣು, ಸೀಯಾಳ ಖರೀದಿ ಭರಾಟೆ ಬಿರುಸಿನಿಂದ ನಡೆಯುತ್ತಿದೆ. ನಾಗನಿಗೆ ಪ್ರಿಯವಾದ ಕೇದಗೆ ಮತ್ತು ಸಂಪಿಗೆ ಹೂವಿಗೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ.ಹಬ್ಬದ ಪ್ರಯುಕ್ತ ತರಕಾರಿಗಳ ಬೆಲೆಯೂ ಏರಿಕೆಯಾಗಿದೆ.

ದೇವಸ್ಥಾನಗಳಲ್ಲಿ ಪೂಜಾ ಸಿದ್ಧತೆ :

ನಾಗರಪಂಚಮಿ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿಯೂ ವಿಶೇಷ ಪೂಜೆ, ಪುರಸ್ಕಾರಗಳಿಗೆ ಸಿದ್ಧತೆ ನಡೆಯುತ್ತಿದೆ. ಪ್ರಸಿದ್ಧ ನಾಗಾರಾಧನಾ ದೇಗುಲಗಳಲ್ಲಿ ನಾಗದೇವರ ಆರಾಧನೆಗೆ ಸಕಲ ಸಿದ್ಧತೆ ನಡೆಸಲಾಗುತ್ತಿದೆ. ಇನ್ನು ವಿವಿಧ ದೇವಸ್ಥಾನಗಳಲ್ಲಿ, ನಾಗಬನಗಳಲ್ಲಿ ನಾಗರ ಪಂಚಮಿ ನಡೆಯಲಿದೆ. ವಿವಿಧ ಧಾರ್ಮಿಕ ಸ್ಥಳಗಳಲ್ಲಿ ತಂಬಿಲ ಸೇವೆ, ನಾಗರಕಟ್ಟೆಯಲ್ಲಿ ವಿಶೇಷ ಪೂಜೆ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ ನಡೆಯಲಿದೆ.

ಇದನ್ನೂ ಓದಿ : ತೀರ್ಥಹಳ್ಳಿ ಬಸ್ ಒಳಗೆ ನಾಗರ ಹಾವು!

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.