ಶೃಂಗೇರಿ ಅಪ್ರಾಪ್ತ ಬಾಲಕಿ ರೇಪ್ ಕೇಸ್ ಅಂತ್ಯ!
– 53 ಮಂದಿ ಆರೋಪಿಗಳ ಪೈಕಿ 49 ಮಂದಿ ನಿರ್ದೋಷಿ
– ನಾಲ್ವರಿಗೆ ಜೈಲೇ ಗತಿ: ಮಾ.11ಕ್ಕೆ ಶಿಕ್ಷೆ ಪ್ರಕಟ!
– ಚಿಕ್ಕಮ್ಮ ಹೆಸರಲ್ಲಿ ತಾಯಿಯೇ ಅತ್ಯಾಚಾರಕ್ಕೆ ಕಿಂಗ್ ಪಿನ್!
NAMMUR EXPRESS NEWS
ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಗ್ರಾಮವೊಂದರಲ್ಲಿ ಕಳೆದ 3 ವರ್ಷದ ಹಿಂದೆ ನಡೆದ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ ಇದೀಗ ಅಂತ್ಯವಾಗಿದೆ. ಇಡೀ ರಾಜ್ಯದಲ್ಲೇ ಅತೀ ಹೆಚ್ಚು ಮಂದಿ ಆರೋಪಿಗಳು ಜೈಲಿಗೆ ಹೋದ ಘಟನೆ ಗಮನ ಸೆಳೆದಿತ್ತು.
ಅತ್ಯಾಚಾರ ಪ್ರಕರಣದ ಆರೋಪದಡಿ 53 ಜನರನ್ನು ಬಂಧಿಸಿದ್ದರು. ಇದೀಗ 49 ಜನ ಆರೋಪಿಗಳು ನಿರ್ದೋಷಿಗಳು ಎಂದು ತೀರ್ಮಾನಿಸಿ ಖುಲಾಸೆಗೊಳಿಸಿದ್ದು, ಇನ್ನುಳಿದ ನಾಲ್ವರು ಆರೋಪಿಗಳೆಂದು ಸಾಭೀತಾಗಿದೆ.
ಸಂತ್ರಸ್ತ ಬಾಲಕಿ ತಾಯಿಯೇ ಕಿಂಗ್ ಪಿನ್!
ಸಂತ್ರಸ್ತ ಬಾಲಕಿಯ ತಾಯಿ ಗೀತಾ ಸೇರಿದಂತೆ ಅಭಿ, ಗಿರೀಶ್, ಶರಣ್ ಅಪರಾಧಿಗಳೆಂದು ಸಾಭೀತಾಗಿದ್ದು, ಮಾರ್ಚ್ 11 ರಂದು ನ್ಯಾಯಾಲಯ ಶಿಕ್ಷೆ ಪ್ರಕಟಿಸಲಿದೆ. ಇನ್ನುಳಿದ 49 ಜನರಿಗೆ ನಿರ್ದೋಷಿಗಳು ಎಂದು ತೀರ್ಮಾನಿಸಿ ಖುಲಾಸೆಗೊಳಿಸಿದೆ.
ಎಸ್. ಎಸ್. ಎಲ್. ಸಿ ವಿದ್ಯಾರ್ಥಿನಿ ಮೇಲೆ ರೇಪ್!
ಶೃಂಗೇರಿಯಲ್ಲಿ ವಾಸವಿದ್ದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಜನವರಿ 30.2021ರಂದು ಎಫ್.ಐ.ಆರ್ ದಾಖಲಾಗಿತ್ತು. 15 ವರ್ಷದ ಬಾಲಕಿ ಮೇಲೆ ಸ್ಮಾಲ್ ಅಭಿ ಮತ್ತು ಆತನ ಸ್ನೇಹಿತರು ಸೇರಿದಂತೆ ಹಲವು ಮಂದಿ ನಿರಂತರ ಅತ್ಯಾಚಾರ ನಡೆಸಿ ಲೈಂಗಿಕ ದೌರ್ಜನ್ಯವೆಸಗಿದ್ದರು. ಈ ಹಿನ್ನಲೆ ಹೆಚ್ಚುವರಿ ಎಸ್ಪಿ ಎಸ್. ಶ್ರುತಿ ನೇತೃತ್ವದ ತಂಡ ಪ್ರಕರಣದ ತನಿಖೆ ನಡೆಸಿ 53 ಜನರನ್ನು ಬಂಧಿಸಿದ್ದರು.
ಚಿಕ್ಕಮ್ಮ ಎಂದಿದ್ದ ತಾಯಿಗೂ ಜೈಲು!
ತಾಯಿಯಿಂದಲೇ ಅತ್ಯಾಚಾರಕ್ಕೆ ಕುಮ್ಮಕ್ಕು ಸಿಕ್ಕಿದೆ. ಬಂಧನವಾದಾಗ ಆರೋಪಿ ಬಾಲಕಿಯ ಚಿಕ್ಕಮ್ಮ ಎಂದು ಹೇಳಿ ಕೊಂಡಿದ್ದಳು. ಆದರೆ, ಪೊಲೀಸರ ತನಿಖೆಯಲ್ಲಿ ಚಿಕ್ಕಮ್ಮ ಅಲ್ಲ ತಾಯಿ ಅನ್ನೋದು ಬೆಳಕಿಗೆ ಬಂದಿತ್ತು. ಈ ಪ್ರಕರಣದ ಬಗ್ಗೆ ರಾಜ್ಯಾದ್ಯಂತ ಭಾರೀ ಚರ್ಚೆ ನಡೆದಿತ್ತು. ಇದೀಗ ಪೋಕ್ಸೋ ಕೇಸ್ ನಲ್ಲಿದ್ದ 49 ಜನ ಆರೋಪಿಗಳಿಗೆ ನಿರ್ದೋಷಿಗಳು ಎಂದು ತೀರ್ಮಾನಿಸಿ ಖುಲಾಸೆಗೊಳಿಸಿದ್ದು, ಇನ್ನುಳಿದ ಸಂತ್ರಸ್ತ ಬಾಲಕಿಯ ತಾಯಿ ಸೇರಿದಂತೆ ನಾಲ್ವರ ಮೇಲೆ ಆರೋಪ ಸಾಭೀತಾಗಿದೆ.