Categories
ಚಿಕ್ಕಮಗಳೂರು ಮಲ್ನಾಡ್

ಗುಳಿಗ ದೈವದ ಶಕ್ತಿ ಕಳ್ಳನನ್ನೇ ಹುಡುಕಿ ಕೊಟ್ಟಿತು!

ಗುಳಿಗ ದೈವದ ಶಕ್ತಿ ಕಳ್ಳನನ್ನೇ ಹುಡುಕಿ ಕೊಟ್ಟಿತು!
– ಹುಂಡಿ ಕಳವು ಮಾಡಿದ ವ್ಯಕ್ತಿ ಕೆಲವೇ ಗಂಟೆಗಳಲ್ಲಿ ಸೆರೆ
– ಗುಳಿಗ ದೈವದ ಪವಾಡಕ್ಕೆ ಭಕ್ತರಲ್ಲಿ ಮೂಡಿತು ಸಂತಸ

NAMMUR EXPRESS NEWS
ಕೊರಗಜ್ಜ, ಗುಳಿಗ, ಪಂಜುರ್ಲಿ ಪವಾಡಗಳನ್ನು ನಾವು ಕೇಳಿದ್ದೇವೆ. ಅಂತಹದ್ದೇ ಒಂದು ಪವಾಡ ಘಟನೆ ಇದೀಗ ಚಿಕ್ಕಮಗಳೂರು ಜಿಲ್ಲೆ ಬಣಕಲ್ ಎಂಬಲ್ಲಿ ವರದಿಯಾಗಿದೆ. ಬಣಕಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಹುಂಡಿಯಲ್ಲಿದ್ದ ಹಣ ಕಳವು ಮಾಡಿದ ಘಟನೆ ನಡೆದು ಕೆಲವೇ ಗಂಟೆಯಲ್ಲಿ ಕಳ್ಳನ ಪತ್ತೆಯಾಗಿರುವುದು ದೈವಶಕ್ತಿಗೆ ಸಾಕ್ಷಿಯಾಗಿದೆ. ಘಟನೆ ನಡೆದಾಗ ಸ್ಥಳದಲ್ಲಿದ್ದ ಮಹಾಮ್ಮಾಯಿ ಯುವಕಸಂಘದ ಸದಸ್ಯ ಅರುಣ್ ಪೂಜಾರಿ ಅವರು ಗುಳಿಗ ದೈವದ ಬಳಿ ಕೈ ಮುಗಿದು ಕಳ್ಳತನ ಮಾಡಿದವನಿಗೆ ದೈವ ಶಕ್ತಿ ಏನೆಂದು ತೋರಿಸಬೇಕು ಎಂದು ಬೇಡಿಕೊಂಡಿದ್ದರು.ಅದನ್ನು ಸ್ನೇಹಿತರಲ್ಲೂ ಹೇಳಿಕೊಂಡಿದ್ದರು.

ಕಾಕತಾಳಿಯ ಎಂಬಂತೆ ದೈವದ ಬಳಿ ಬೇಡಿಕೊಂಡ ವ್ಯಕ್ತಿಯ ಕೈಗೆ ರಾತ್ರಿ ಕಳ್ಳ ಸಿಕ್ಕಿಬಿದ್ದಿದ್ದಾನೆ. ಕಳ್ಳತನ ನಡೆದ ಬಳಿಕ ರಾತ್ರಿ 9:30ರ ಸುಮಾರಿಗೆ ಎಂದಿನಂತೆ ಮನೆಗೆ ಹೋಗುತ್ತಿದ್ದಾಗ ಸುಭಾಷ್ ನಗರ ಸಮೀಪ ಅಪರಿಚಿತ ವ್ಯಕ್ತಿ ನಡೆದುಕೊಂಡು ಹೋಗುವುದನ್ನು ಗಮನಿಸಿ ಅನುಮಾನಗೊಂಡು ವಿಚಾರಿಸುತ್ತಾರೆ. ಹಾಗೆ ಮಾತನಾಡುತ್ತ ಆ ವ್ಯಕ್ತಿಗೆ ಅನುಮಾನ ಬರದಂತೆ ಫೋಟೋ ತೆಗೆದು ಈ ವ್ಯಕ್ತಿಯೇ ಎಂದು ತಿಳಿಯಲು ಪ್ರತ್ಯಕ್ಷದರ್ಶಿಗೆ ಕಳುಹಿಸುತ್ತಾರೆ. ತಕ್ಷಣಕ್ಕೆ ಅವರು ಕಳವು ಮಾಡಿದ ವ್ಯಕ್ತಿ ಇವನೇ ಎಂದು ಪತ್ತೆ ಹಚ್ಚುತ್ತಾರೆ. ನಂತರ ಅವನನ್ನು ಹಿಡಿದು ಬಣಕಲ್ ಪೊಲೀಸರಿಗೆ ಒಪ್ಪಿಸಿದ್ದಾರೆ.

ಇದನ್ನೂ ಓದಿ : ಕರಾವಳಿಯಲ್ಲಿ ಕೊರಗಜ್ಜನ ಪವಾಡ.!

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.