Categories
ತೀರ್ಥಹಳ್ಳಿ ಮಲ್ನಾಡ್

ರಸ್ತೆಯಲ್ಲಿ ಸಿಕ್ಕ ಪರ್ಸ್ ಕೊಟ್ಟು ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿಗಳು!

ರಸ್ತೆಯಲ್ಲಿ ಸಿಕ್ಕ ಪರ್ಸ್ ಕೊಟ್ಟು ಪ್ರಾಮಾಣಿಕತೆ ಮೆರೆದ ವಿದ್ಯಾರ್ಥಿಗಳು!
– ವಿದ್ಯಾರ್ಥಿಗಳ ನಡೆಗೆ ಮೆಚ್ಚುಗೆ ಸೂಚಿಸಿದ ಸಾರ್ವಜನಿಕರು
– ನಮ್ಮೂರ್ ಎಕ್ಸ್ ಪ್ರೆಸ್ ಕಚೇರಿಯಲ್ಲಿ ಪರ್ಸ್ ಮಾಲೀಕರಿಗೆ ವಾಪಾಸ್

NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಸೊಪ್ಪುಗುಡ್ಡೆ ದಾರಿಯಲ್ಲಿ ಸಿಕ್ಕ ಪರ್ಸ್ ಅನ್ನು ವಿದ್ಯಾರ್ಥಿಗಳು ಪರ್ಸ್ ಮಾಲೀಕರಿಗೆ ಕೊಟ್ಟು ಪ್ರಾಮಾಣಿಕತೆ ಮೆರೆದಿದ್ದಾರೆ. ಮಂಗಳವಾರ ಸೊಪ್ಪುಗುಡ್ಡೆ ರಸ್ತೆಯಲ್ಲಿ ತೀರ್ಥಹಳ್ಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಸುಮನ್ ಹಾಗೂ ಗಣೇಶ್ ಎಂಬುವವರಿಗೆ ಪರ್ಸ್ ಸಿಕ್ಕಿದ್ದು ಅದರಲ್ಲಿ ಆಧಾರ್ ಕಾರ್ಡ್,ಡಿಎಲ್ ಹಾಗೂ 2,000 ರೂ. ಹಣ ಇದ್ದು, ವಿದ್ಯಾರ್ಥಿಗಳು ಪರ್ಸ್ ಅನ್ನು ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮದ ಕಚೇರಿಗೆ ನೀಡಿ, ವಾರಸುದಾರರಿಗೆ ತಲುಪಿಸಲು ಮನವಿ ಮಾಡಿದ್ದರು. ಅದರಂತೆ ಸುಮಂತ್ ಹಾಗೂ ಗಣೇಶ್ ಅವರನ್ನು ಕರೆಸಿ ಅವರ ಕೈನಿಂದಲೇ ಪರ್ಸ್ ವಾರಸುದಾರರಿಗೆ ನಮ್ಮೂರ್ ಎಕ್ಸ್ಪ್ರೆಸ್ ಕಚೇರಿಯಲ್ಲಿ ಹಿಂತಿರುಗಿಸಲಾಯಿತು. ಸಾರ್ವಜನಿಕರು ಕೂಡ ವಿದ್ಯಾರ್ಥಿಗಳ ಪ್ರಮಾಣಿಕತೆಗೆ ಮೆಚ್ಚುಗೆ ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.