Categories
ತೀರ್ಥಹಳ್ಳಿ

ವಿಶ್ವ ಕಪ್ ಫೈನಲ್ : ತೀರ್ಥಹಳ್ಳಿ ಎಲ್.ಇ.ಡಿ ಪರದೆಯಲ್ಲಿ ಪ್ರದರ್ಶನ

ವಿಶ್ವ ಕಪ್ ಫೈನಲ್ : ತೀರ್ಥಹಳ್ಳಿ ಎಲ್.ಇ.ಡಿ ಪರದೆಯಲ್ಲಿ ಪ್ರದರ್ಶನ
– ಭಾರತ, ಆಸ್ಟ್ರೇಲಿಯಾ ಪಂದ್ಯದ ಪ್ರದರ್ಶನ
– ತೀರ್ಥಹಳ್ಳಿ ರಾಮೇಶ್ವರ ದೇಗುಲದ ಮುಂಭಾಗ ವ್ಯವಸ್ಥೆ

NAMMUR EXPRESS NEWS
ತೀರ್ಥಹಳ್ಳಿ: ಭಾರತ- ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಅಂತಿಮ ಹಣಾಹಣಿಯನ್ನು ಬೃಹತ್ ಎಲ್.ಇ.ಡಿ. ವಾಲ್‌ನಲ್ಲಿ ಪ್ರದರ್ಶನ ಮಾಡಲು ತೀರ್ಥಹಳ್ಳಿಯಲ್ಲಿ ಸಿದ್ಧತೆ ನಡೆದಿದೆ. ಹೌದು. ದೇಶದೆಲ್ಲೆಡೆ ನ.19ರ ವಿಶ್ವ ಕಪ್ ಫೈನಲ್ ಪಂದ್ಯ ಭಾರತ ಗೆಲ್ಲಲಿ ಎಂಬ ಹಾರೈಕೆ, ಪ್ರಾರ್ಥನೆ ಶುರುವಾಗಿದೆ.
19-11-2023, ಭಾನುವಾರ ಸಮಯ : ಮಧ್ಯಾಹ್ನ 2 ರಿಂದ ಶ್ರೀರಾಮೇಶ್ವರ ದೇವಸ್ಥಾನದ ಆವರಣ, ತೀರ್ಥಹಳ್ಳಿಯಲ್ಲಿ ಪ್ರದರ್ಶನ ನಡೆಯಲಿದೆ. ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಸದಸ್ಯ ಸಂದೇಶ ಜವಳಿ, ರಥಬೀದಿ ಜನತೆ ಸೇರಿ ಈ ವ್ಯವಸ್ಥೆ ಮಾಡಿದ್ದು ಅತೀ ದೊಡ್ಡ ಪರದೆಯಲ್ಲಿ ಕ್ರಿಕೆಟ್ ನೋಡಬಹುದು. ಭಾರತ ತಂಡಕ್ಕೆ ಬೆಂಬಲ ನೀಡಬಹುದು.

ಅಹಮದಬಾದ್ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಕಳೆದ ವಿಶ್ವಕಪ್ ನಲ್ಲಿ ಸೆಮಿ ಫೈನಲ್ ಪಂದ್ಯದಲ್ಲಿ ಸೋತಿದ್ದ ಭಾರತ ಈ ಬಾರಿ ಸತತವಾಗಿ 10 ಪಂದ್ಯಗಳನ್ನು ಗೆದ್ದು ಫೈನಲ್ ತಲುಪಿದ್ದು 1996, 2014ರ ನಂತರ ಮತ್ತೊಮ್ಮೆ ವಿಶ್ವಕಪ್ ಗೆ ಗೆಲ್ಲಲು ಕಾತುರವಾಗಿದೆ. ಗುರುವಾರ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯದಲ್ಲಿ ಅಸಿಸ್ ಗೆದ್ದಿದೆ. ಈಗ ಭಾರತ ಆಸ್ಟ್ರೇಲಿಯಾ ಪಂದ್ಯಕ್ಕೆ ದೇಶವೇ ಕಾದು ಕುಳಿತಿದ್ದು ಈ ಪಂದ್ಯವನ್ನು ಹಬ್ಬದಂತೆ ವೀಕ್ಷಿಸುವ ಸುವರ್ಣ ಅವಕಾಶ ತೀರ್ಥಹಳ್ಳಿ ಜನತೆಗೆ ಇದ್ದು ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಎಲ್ಇಡಿ ವಾಲ್ ನಲ್ಲಿ ವೀಕ್ಷಿಸಿ ಆನಂದಿಸಬಹುದಾಗಿದೆ.

ಸರ್ವರನ್ನು ಆಯೋಜಕರು ಸ್ವಾಗತಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.