ಟಾಪ್ ನ್ಯೂಸ್ ಮಲ್ನಾಡ್
ಸಾಗರ : ಕೆ.ಎಸ್.ಆರ್.ಟಿ.ಬಸ್ಸಿಗೆ ಮಹಿಳೆ ಬಲಿ
– ಭದ್ರಾವತಿ: 20 ಸಾವಿರಕ್ಕೆ ನಡೆಯಿತು ಅಜ್ಜಿಯ ಕೊಲೆ
– ಸಾಗರ : ಅಪರಿಚಿತ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ
– ಚಿಕ್ಕಮಗಳೂರು: ಹೂತಿದ್ದ ಶವ ಹೊರತೆಗೆದು ಸುಟ್ಟರು!
NAMMUR EXPRESS NEWS
ಸಾಗರ: ಬಸ್ ಚಕ್ರಕ್ಕೆ ಸಿಲುಕಿ 38 ವರ್ಷದ ಮಹಿಳೆ ಸಾವು ಕಂಡಿದ್ದಾರೆ. ಪ್ರವಾಸಕ್ಕೆ ಬಂದ ಮಹಿಳೆ ಕೆ ಎಸ್ ಆರ್ ಟಿ ಸಿ ಬಸ್ ಗೆ ಬಲಿಯಾಗಿದ್ದಾರೆ. ಸಾಗರ ತಾಲ್ಲೂಕಿನ ಸಿಗಂದೂರು ಬಳಿಯ ಹೊಳೆ ಬಾಗಿಲಿನಲ್ಲಿ ಸರ್ಕಾರಿ ಬಸ್ ಬಂತು ಅಂತ ಮುನ್ನುಗ್ಗಿದ ಮಹಿಳೆ ಅಚಾನಕ್ಕಾಗಿ ಬಸ್ ಚಕ್ರಕ್ಕೆ ಸಿಲುಕಿ ಸಾವು ಕಂಡಿದ್ದಾರೆ. ಈ ಬಸ್ ಸಾಗರದಿಂದ ಹೊಳೆಬಾಗಿಲಿಗೆ ಸಂಚರಿಸುವ ಬಸ್ ಆಗಿದೆ. ಬಸ್ ಇನ್ನೂ ನಿಲ್ದಾಣದ ಬಳಿ ಬಂದು ನಿಲ್ಲುವುದಕ್ಕೂ ಮೊದಲು ನೂಕುನುಗ್ಗಲಿಂದಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ. ಸಾವು ಕಂಡ ಮಹಿಳೆಯನ್ನ ಧಾರವಾಡ ಜಿಲ್ಲೆಯ ಕಲಘಟಕಿಯ ನಿವಾಸಿ ಮಂಜುಳ (38) ಎಂದು ಗುರುತಿಸಲಾಗಿದೆ. ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕೆಎಸ್ ಆರ್ ಟಿಸಿ ಶಿವಮೊಗ್ಗ ವಿಭಾಗದ ಸಂಚಾರಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಬಸ್ ಸಧ್ಯಕ್ಕೆ ಠಾಣೆಯಲ್ಲಿ ನಿಲ್ಲಿಸಾಗಿದೆ.
– ಭದ್ರಾವತಿ: 20 ಸಾವಿರಕ್ಕೆ ಅಜ್ಜಿಯ ಕೊಲೆ!
ಭದ್ರಾವತಿ: ಹಣಕ್ಕಾಗಿ ಅಜ್ಜಿಯನ್ನೇ ಕೊಲೆ ಮಾಡಿರುವ ಘಟನೆ ಭದ್ರಾವತಿಯ ಅಂತರಗಂಗೆಯಲ್ಲಿ ನಡೆದಿದೆ. ಅಂತರಗಂಗೆಯ ಭೋವಿಕೇರಿಯಲ್ಲಿ ರಾಮಕ್ಕ ಎಂಬ 72 ವರ್ಷದ ಅಜ್ಜಿಯನ್ನ ಮೊಮ್ಮಗನೇ ಹೊಂಚು ಹಾಕಿ ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಅಜ್ಕಿಯ ಸೊಂಟದಲ್ಲಿದ್ದ 20 ಸಾವಿರ ರೂ ಮತ್ತು ಕಿವಿ ಓಲೆ ಕಿತ್ತುಕೊಂಡು ಹೋಗಿದ್ದಾನೆ. ಈ ಸಂಬಂಧ ಮೊಮ್ಮಗ ಚೇತನ್, ಭರತ್, ರೋಹಿತ್, ಆದರ್ಶ ವಿರುದ್ಧ ದೂರು ದಾಖಲಾಗಿದೆ. ರಾಮಕ್ಕನವರ ಮಗ ಗೋವಿಂದ ಜೆಸಿಬಿ ಖರೀದಿಸಿದ್ದಾರೆ. ಜೆಸಿಬಿ ಕಂತು ಕಟ್ಟಲು ರಾಮಕ್ಕರಿಗೆ 20 ಸಾವಿರ ಕಂತು ಹಣ ನೀಡಿ ಗೋವಿಂದರವರು ದಾವಣಗೆರೆಗೆ ಹೋಗಿದ್ದಾರೆ. ಗೋವಿಂದ ದಾವಣಗೆರೆಯಿಂದ ವಾಪಾಸ್ ಬರುವ ವೇಳೆಯಲ್ಲಿ ರಾಮಕ್ಕರ ಕೊಲೆಯಾಗಿದೆ.
ಈ ಕೊಲೆಗೆ ಚೇತನ್, ಭರತ್, ರೋಹಿತ್, ಆದರ್ಶ ಕಾರಣವೆಂದು ಗೋವಿಂದರವರು ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚೇತನ್ ರಾಮಕ್ಕನವರ ಮಗ ಹನುಮಂತಪ್ಪನವರ ಮಗ ಆಗಿದ್ದಾನೆ. ಮೈತುಂಬ ಸಾಲ ಮಾಡಿಕೊಂಡಿದ್ದ ಚೇತನ್ ಅಜ್ಜಿಯ ಬಳಿ ಹಣವಿತ್ತೆಂದು ಗಮನಿಸಿದ್ದನು. ತಂದೆ ಹನುಮಂತಪ್ಪನವರನ್ನ ಸ್ನೇಹಿತರೊಂದಿಗೆ ಎಣ್ಣೆ ಹೊಡೆಯಲು ಕಳುಹಿಸಿ ಅಜ್ಜಿ ಮಲಗಿದ್ದಾನೆ. ದಿಂಬಿನಿಂದ ಕೊಲೆ ಮಾಡಿರುವುದಾಗಿ ದೂರಿನಿಂದ ತಿಳಿದು ಬಂದಿದೆ.
ಸಾಗರ : ಅಪರಿಚಿತ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ
ಸಾಗರ : ಟೌನ್ 17ನೇ ವಾರ್ಡಿನ ಬೆಳಲಮಕ್ಕಿ ಎರಡನೇ ತಿರುವಿನ ರಸ್ತೆಯಲ್ಲಿ ಅಪರಿಚಿತ ವಾಹನವೊಂದು ವಿದ್ಯುತ್ ಕಂಬಕ್ಕೆ ಇಂದು ಬೆಳಗ್ಗೆ ಡಿಕ್ಕಿ ಸಂಭವಿಸಿ ವಿದ್ಯುತ್ ಕಂಬ ಸಂಪೂರ್ಣ ಮುರಿದು ಹೋಗಿರುವ ಘಟನೆ ಸಂಭವಿಸಿ ಅನಾಹುತ ಒಂದು ತಪ್ಪಿದೆ. ವಿದ್ಯುತ್ ಕಂಬ ಯಾವುದೇ ಸಮಯದಲ್ಲಿ ಬೀಳುವ ಸಾಧ್ಯತೆ ಇದ್ದು ಕೂಡಲೇ ಮೆಸ್ಕಾಂ ಅಧಿಕಾರಿಗಳು ಈ ವಿದ್ಯುತ್ ಕಂಬವನ್ನು ಬದಲಾಯಿಸುವಂತೆ ಇಲ್ಲಿಯ ನಾಗರಿಕರು ಕೊರಿದ್ದಾರೆ.
– ಮಳೆಗಾಗಿ ಹೂತಿದ್ದ ಶವ ಹೊರತೆಗೆದು ಸುಟ್ಟರು!
ಚಿಕ್ಕಮಗಳೂರು: ಶಿವನಿ, ಚೀರನಹಳ್ಳಿ, ದಂದೂರು, ಜಲದೀಹಳ್ಳಿ, ಚಿಕ್ಕಾನವಂಗಲ, ಕಲ್ಲೇನಹಳ್ಳಿ, ಬುಕ್ಕಾಂಬುದಿ ಸುತ್ತಮತ್ತ ಮೇ 15 ಕಳೆದರೂ ಮಳೆ ಬರಲಿಲ್ಲ. ಇದರಿಂದ ಕಂಗೆಟ್ಟ ರೈತರು ಸುತ್ತಮುತ್ತಲ ದೇವರುಗಳ ಮೊರೆ ಹೋದರು. ಪೂಜೆ, ಪುನಸ್ಕಾರಗಳು ನಡೆಸಿ ಮಳೆಗಾಗಿ ಕೋರಿದರು. ಅಂತಿಮವಾಗಿ ಗ್ರಾಮದ ದೇವಸ್ಥಾನಗಳಲ್ಲಿ ಅಪ್ಪಣೆ ಕೇಳಿ ಪಂಚಾಯಿತಿ ನಡೆಸಿ, ತೊನ್ನು ಇರುವ ಶವಗಳನ್ನು ಹೊರ ತೆಗೆದು ಸುಡುತ್ತಿದ್ದಾರೆ. ಜಲದಿನ ಹಳ್ಳಿಯ ಸ್ಮಶಾನದಲ್ಲಿ ರಾತ್ರೋರಾತ್ರಿ ಐದಾರು ಶವಗಳನ್ನು ಮೇಲೆತ್ತಿ ಅಗ್ನಿಸ್ಪರ್ಶ ಮಾಡಿದ್ದಾರೆ. ಶಿವನಿ ಗ್ರಾಮದ ಹೊರ ವಲಯದಲ್ಲಿ ಹೂತಿದ್ದ ಮಹಿಳೆಯ ಶವವನ್ನು ಗುರುವಾರ ಹೊರ ತೆಗೆದು ಪಕ್ಕದಲ್ಲೆ ಅಗ್ನಿ ಸ್ಪರ್ಶ ಮಾಡಿದ್ದಾರೆ.
ತೊನ್ನಿರುವ ವ್ಯಕ್ತಿಯ ಶವ ಹೂತಿದ್ದರೆ ಮಳೆ ಬರುವುದಿಲ್ಲವೆಂಬ ನಂಬಿಕೆ ಬೇರೂರಿದೆ. ಅಂತಹ ಶವ ಹೊರ ತೆಗೆದು ಸುಟ್ಟ ಬಳಿಕ ಮಳೆ ಬಂದಿದೆ’ ಎಂದು ಹೆಸರು ಬಹಿರಂಗ ಪಡಿಸಲು ಬಯಸದ ಸ್ಥಳೀಯರು ಹೇಳುತ್ತಾರೆ. ಕಾಕತಾಳೀಯ ಎಂಬಂತೆ, ತೊನ್ನಿದ್ದ ಶವ ಹೊರತೆಗೆದು ಸುಟ್ಟ ಬಳಿಕ ಮಳೆಯಾಗಿದೆ. ಶಿವನಿಯಲ್ಲಿ ಗುರುವಾರ ಸಂಜೆ ವೇಳೆಗೆ ಮಳೆ ಬಂದಿದೆ. ತನಿಖೆ ವೇಳೆ ಮಾತ್ರ ನ್ಯಾಯಾಲಯಗಳ ಅನುಮತಿ ಪಡೆದು ಶವವನ್ನು ಗುಂಡಿಯಿಂದ ಹೊರ ತೆಗೆಯಲು ಅವಕಾಶ ಇದೆ. ಬೇಕೆಂದಾಗ ಶವ ಮೇಲೆತ್ತುವುದು ಅಪರಾಧ’ ಎನ್ನುತ್ತಾರೆ ಕಾನೂನು ಪರಿಣತರು.