ಪ್ರವಾಸಿ ತಾಣಗಳಲ್ಲಿ ಈಗ ಪ್ರವಾಸಿಗರ ಸಂಭ್ರಮ!
– ಮಳೆ ಬಿಟ್ಟ ಕಾರಣ ಮಲೆನಾಡಿಗೆ ಪ್ರವಾಸಿಗರ ಲಗ್ಗೆ
– ಹೊಸನಗರದ ಕೊಡಚಾದ್ರಿ ಗಿರಿ ಪ್ರವೇಶ ತೆರವು
– ಒಂದೇ ದಿನ ಅತೀ ಹೆಚ್ಚು ವಾಹನಗಳ ಓಡಾಟ!
NAMMUR EXPRESS NEWS
ತೀರ್ಥಹಳ್ಳಿ/ಹೊಸನಗರ: ಸತತವಾಗಿ ರಜೆ ಇರುವ ಕಾರಣ ಪ್ರವಾಸಿಗರು ಇದೀಗ ಮಲೆನಾಡ ಕಡೆ ಪ್ರಯಾಣ ಬೆಳೆಸಿದ್ದು ಶನಿವಾರ, ಭಾನುವಾರ ಪ್ರವಾಸಿಗರಿಂದ ತುಂಬಿ ಹೋಗಿತ್ತು. ಪ್ರವಾಸಿ ತಾಣಗಳು, ಹೋಟೆಲ್, ಹೋಂ ಸ್ಟೇಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುವುದು ಕಂಡು ಬಂದಿತು. ಬೆಂಗಳೂರು, ಮೈಸೂರು ಸೇರಿದಂತೆ ಹೊರ ಭಾಗದ ಪ್ರವಾಸಿಗರು ಹೆಚ್ಚಿದ್ದರು.
ವಾಹನಗಳ ಸಂಖ್ಯೆ ಹೆಚ್ಚಳ
ತೀರ್ಥಹಳ್ಳಿ, ಶೃಂಗೇರಿ, ಹೊಸನಗರ ಸಾಗರ ಭಾಗದಲ್ಲಿ ರಸ್ತೆಗಳಲ್ಲಿ ವಾಹನ ಸಂಖ್ಯೆ ಹೆಚ್ಚಾಗಿದ್ದು ಕಂಡು ಬಂದಿತು.
ಬೈಕ್ ರೈಡರ್ಗಳು ರಸ್ತೆ ಮೇಲೆ ಪ್ರವಾಸದ ಸಂತಸದಲ್ಲಿದ್ದರು. ಹೋಟೆಲ್, ಹೋಂ ಸ್ಟೇ ಫುಲ್ ಫುಲ್ ಆಗಿದ್ದವು.
ಕೊಡಚಾದ್ರಿ ಗಿರಿ ಪ್ರವಾಸಿಗರಿಗೆ ಮುಕ್ತ!
ಪ್ರವಾಸಿಗರ ಸುರಕ್ಷತೆ ಹಿತದೃಷ್ಟಿಯಿಂದ ಹೊಸನಗರ ತಾಲೂಕಿನ ಕೊಡಚಾದ್ರಿ ಗಿರಿ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಿದ್ದ ವನ್ಯಜೀವಿ ಅರಣ್ಯ ವಿಭಾಗ ಪ್ರವೇಶ ನಿರ್ಬಂಧವನ್ನು ತಾತ್ಕಾಲಿಕವಾಗಿ ತೆರವುಗೊಳಿಸಿದೆ. ಕೊಡಚಾದ್ರಿ ಗಿರಿಯತ್ತ ಜೀಪ್‌ಗಳ ಓಡಾಟ ಮತ್ತೆ ಶುರು ಆಗಿದೆ. ಪ್ರವಾಸಿಗರ ಒತ್ತಡಕ್ಕೆ ಮಣಿದ ವನ್ಯ ಜೀವಿ ಇಲಾಖೆ ಮೌಕಿಕವಾಗಿ ಕೊಡಚಾದ್ರಿ ನಿರ್ಬಂಧ ತೆರವು ಆದೇಶ ನೀಡಿದ್ದು, ಭಾನುವಾರದಿಂದಲೇ ಕೊಡಚಾದ್ರಿಗೆ ಜೀಪ್ ಮೂಲಕ ತೆರಳಲು ಅವಕಾಶ ನೀಡಿದೆ. ಕೇವಲ ವಾಹನದಲ್ಲಿ ಮಾತ್ರ ತೆರಳಲು ಅವಕಾಶ ನೀಡಲಾಗಿದೆ. ಗಿರಿ ಚಾರಣಕ್ಕೆ ಅವಕಾಶ ನಿರಾಕರಿಸಿದ್ದು, ಜೀಪ್ ಮಾಲೀಕರಿಗೆ ಹಾಗೂ ಪ್ರವಾಸಿಗರಿಗೆ ಕೆಲವು ಷರತ್ತು ವಿಧಿಸಿದೆ.
‘ಕೊಡಚಾದ್ರಿ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲದ ಕಾರಣ ನೀಡಿ ಕೊಡಚಾದ್ರಿ ತೆರಳುವ ಸಂಧರ್ಭದಲ್ಲಿ ಯಾರಿಗಾದರೂ ಪ್ರಾಣ ಹಾನಿಯಾದರೆ ಅಥವಾ ಯಾವುದೇ ತೆರನಾದ ಅಪಾಯ ಉಂಟಾದರೆ ಅದಕ್ಕೆ ನಾವೇ ಜವಾಬ್ದಾರರು’ ಎಂದು ಮುಚ್ಚಳಿಕೆ ಬರೆದು ಕಟ್ಟಿನಹೊಳೆಯ ತನಿಖಾ ಠಾಣೆಯಲ್ಲಿ ವನ್ಯ ಜೀವಿ ಇಲಾಖೆಯ ಅನುಮತಿ ಪಡೆದು ಕೊಡಚಾದ್ರಿಗೆ ಹೋಗಬಹುದಾಗಿದೆ.
ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ
[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023