Categories
ಉಡುಪಿ ಮಂಗಳೂರು

ಮುಂಗಾರು ಮಳೆ: ಕರಾವಳಿ ಜಲಾವೃತ.. ಅನಾಹುತ..!

ಮುಂಗಾರು ಮಳೆ: ಕರಾವಳಿ ಜಲಾವೃತ.. ಅನಾಹುತ..!
– ಕರಾವಳಿ ಭಾಗದ ಜನರ ಜೀವನ ಅಸ್ತವ್ಯಸ್ತ
– ಅನೇಕ ಕಡೆ ನೀರು ನುಗ್ಗಿ ಜನರ ಪರದಾಟ

NAMMUR EXPRESS NEWS
ಮಂಗಳೂರು/ ಉಡುಪಿ: ಕರಾವಳಿ ಭಾಗದ ಜನರ ಜೀವನ ಮುಂಗಾರು ಮಳೆಗೆ ಕೊಚ್ಚಿ ಹೋಗುತ್ತಿದೆ. ಎಲ್ಲಾ ಕಡೆ ನೀರು ನುಗ್ಗಿ ಅನಾಹುತ ಸಂಭವಿಸುತ್ತಿದೆ. ಈ ಬಾರಿಯ ಮುಂಗಾರು ಅವಧಿಗೂ ಮೊದಲೇ ಪ್ರವೇಶಿಸಿ ಜೂನ್ ತಿಂಗಳು ಮುಗಿಯುವುದರೊಳಗೆ ಅತಿವೃಷ್ಟಿ ಸಂಭವಿಸಿ ಜನರಲ್ಲಿ ಆತಂಕ ಸೃಷ್ಟಿಸಿದೆ.
ಮಲೆನಾಡು, ಕರಾವಳಿ ಭಾಗಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಸರ್ಕಾರ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಕರಾವಳಿ ಭಾಗದ ಪರಿಸ್ಥಿತಿ ಹೇಳತೀರದಾಗಿದೆ. ಮಳೆಯಿಂದಾಗಿ ಮಂಗಳೂರು ಹೊಳೆಯಂತಾಗಿದೆ. ಸುತ್ತಲು ನೀರು, ನಡುವೆ ಕಟ್ಟಡಗಳು ಕಂಡುಬರುತ್ತಿರುವುದರಿಂದ ದ್ವೀಪದಂತಾಗಿದೆ. ಮನೆಗಳು, ಅಂಗಡಿಗಳು, ದೇವಾಲಯದೊಳಗೆ ನೀರು ಪ್ರವೇಶಿಸುತ್ತಿರುವ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಬಹುದಾಗಿದೆ. ಫಲ್ಗುಣಿ ನದಿ ನೆರೆ ಪರಿಣಾಮ ಮೂವತ್ತು ಮನೆಗಳು ಜಲಾವೃತಗೊಂಡಿವೆ ಎನ್ನಲಾಗಿದೆ.
ಮಣ್ಣಿನ ಸವಕಳಿಯಿಂದ ಭೂ ಕುಸಿತ ಸಂಭವಿಸುತ್ತಿದ್ದು, ಜನರನ್ನು ಅಂತಹ ಭಾಗಗಳಲ್ಲಿ ಪ್ರಯಾಣ ಬೆಳೆಸದಂತೆ ಎಚ್ಚರಿಕೆ ನೀಡಲಾಗಿದೆ.
ಬೈಂದೂರು ಬಡಕೆರೆಯಲ್ಲಿ ತುಂಬಿದ ಹಳ್ಳದಲ್ಲಿ ಬೈಕ್ ಸಮೇತ ಯುವಕರು ಕೊಚ್ಚಿ ಹೋಗಿದ್ದು ರಕ್ಷಣೆ ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಶಾಲಾ ಅಂಗನವಾಡಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಉಡುಪಿ, ದಕ್ಷಿಣ ಕನ್ನಡ ಎರಡೂ ಜಿಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.