Categories
ಅಪರಾಧ ಮಂಗಳೂರು

ವಿದ್ಯಾರ್ಥಿನಿ ಮೇಲೆ ರೇಪ್: ನಕಲಿ ಪೊಲೀಸ್ ಅರೆಸ್ಟ್

ಇನ್ಸ್ಟಾಗ್ರಾಮ್ ಹುಡುಗಿಯರೇ ಹುಷಾರ್..!
– ಇನ್ ಸ್ಟಾಗ್ರಾಂನಲ್ಲಿ ಪೊಲೀಸ್ ಎಂದು ಪರಿಚಯ
– ವಿದ್ಯಾರ್ಥಿನಿ ಮೇಲೆ ರೇಪ್: ನಕಲಿ ಪೊಲೀಸ್ ಅರೆಸ್ಟ್
– ಲೋನ್ ಕೇಳಲು ಬಂದ.. ಚಾಕು ತೋರಿಸಿ ಬೆದರಿಸಿದ!

NAMMUR EXPRESS NEWS
ಮಂಗಳೂರು: ತಾನು ಪೊಲೀಸ್‌ ಎಂದು ಪರಿಚಯಿಸಿಕೊಂಡ ಯುವಕನೊಬ್ಬ ವಿದ್ಯಾರ್ಥಿನಿಯನ್ನು ಲಾಡ್ಜ್ ಗೆ ಕರೆದೊಯ್ದು ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿ ಆಕೆಯೊಂದಿಗಿರುವ ಫೊಟೋಗಳನ್ನು ಇತರರಿಗೆ ಶೇರ್ ಮಾಡಿ ಆ ಫೊಟೋಗಳನ್ನು ಡಿಲೀಟ್ ಮಾಡಬೇಕಾದ್ರೆ ಹಣದ ಬೇಡಿಕೆಯನ್ನು ಮುಂದಿಟ್ಟ ಘಟನೆ ಮಂಗಳೂರಲ್ಲಿ ನಡೆದಿದೆ. ನಕಲಿ ಪೊಲೀಸ್ ನನ್ನು ಮಂಗಳೂರು ಮಹಿಳಾ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ರಾಯಚೂರು ಮೂಲದ ಯಮನೂರ (22) ಎಂದು ಗುರುತಿಸಲಾಗಿದೆ. ಆರೋಪಿಗೆ ಎರಡು ವಾರಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಮಂಗಳೂರು ನಗರದ ಇಂಜಿನಿಯರಿಂಗ್ ಕಾಲೇಜಿನ 19ರ ಹರೆಯದ ವಿದ್ಯಾರ್ಥಿನಿಯನ್ನು ಇನ್ನಾ ಗ್ರಾಮ್ ಮೂಲಕ ಗೆಳೆತನ ಮಾಡಿ ಕೊಂಡ ಆರೋಪಿಯು ತನ್ನನ್ನು ವಾಮಂಜೂರು ಠಾಣೆಯ ಎಸೈ ಎಂದು ವಿದ್ಯಾರ್ಥಿನಿಯನ್ನು ಇನ್ನಾ ಗ್ರಾಮ್ ಮೂ ಲಕ ಗೆಳೆತನ ಮಾಡಿ ಕೊಂಡ ಆರೋಪಿಯು ತನ್ನನ್ನು ವಾಮಂಜೂರು ಠಾಣೆಯ ಎ ಎಂದು ಪರಿಚಯ ಮಾಡಿಕೊಂಡ. ಅಲ್ಲದೇ 2023ರ ಮೇ ತಿಂಗಳಲ್ಲಿ ನಗರದ ಕದ್ರಿ ದೇವಸ್ಥಾನದಲ್ಲಿ ಭೇಟಿ ಮಾಡಿ ಬಳಿಕ ತಣ್ಣೀರುಬಾವಿಯ ಬೀಚ್‌ಗೆ ಕರೆದೊಯ್ದು ಫೋಟೊ ತೆಗೆದುಕೊಂಡು ಬಳಿಕ ಅದನ್ನು ವೈರಲ್ ಮಾಡುವುದಾಗಿ ಬೆದರಿಸಿದ್ದ ಎಂದು ಆರೋಪಿಸಲಾಗಿದೆ.

ಅಲ್ಲದೆ ಬೆಂಗಳೂರು ಮತ್ತು ಕಿನ್ನಿಗೋಳಿಯ ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಲ್ಲದೆ ಆ ಫೋಟೊಗಳನ್ನು ಆಕೆಯ ಮನೆಯವರಿಗೆ ಮತ್ತು ಸ್ನೇಹಿತರ ಮೊಬೈಲ್‌ಗೆ ಕಳುಹಿಸಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾನೆ. ಈ ಫೋಟೊಗಳನ್ನು ಅಳಿಸಿ ಹಾಕಬೇಕಿದ್ದರೆ 1.50 ಲಕ್ಷ ರೂಪಾಯಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ವಿದ್ಯಾರ್ಥಿನಿಯು ಪೊಲೀಸರಿಗೆ ದೂರು ನೀಡಿದ ಕಾರಣ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಸಾಲ ಕೇಳಲು ಬಂದು ಚಾಕು ತೋರಿಸಿದ!

ಸಾಲ ಕೇಳಲು ಬಂದಿದ್ದ ವ್ಯಕ್ತಿಯಿಂದ ಬ್ಯಾಂಕ್ ಮ್ಯಾನೇಜರ್‌ಗೆ ಜೀವ ಬೆದರಿಕೆ ಹಾಕಿರುವ ಆರೋಪ ಶಿವಮೊಗ್ಗ ತಾಲೂಕಿನ ಹೊಸಳ್ಳಿ ಶಾಖೆಯ ಯುನಿಯನ್ ಬ್ಯಾಂಕ್‌ನಲ್ಲಿ ನಡೆದಿದೆ. ಮ್ಯಾನೇಜರ್ ಒಬ್ಬರಿಗೆ ವ್ಯಕ್ತಿಯೋರ್ವ ಚಾಕು ತೋರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ವರದಿಯಾಗಿದೆ. ಅಲ್ಲದೇ ಸಾಲ ನೀಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ. ಆ.7ರಂದು ಮಧ್ಯಾಹ್ನ ವ್ಯಕ್ತಿಯೊಬ್ಬ ಬ್ಯಾಂಕಿಗೆ ಬಂದಿದ್ದು, ಹಸು ಸಾಲಕ್ಕೆ ಆಗ್ರಹಿಸಿದ್ದಾರೆ. ಅಲ್ಲದೆ ಬ್ಯಾಂಕ್ ಮ್ಯಾನೇಜರ್ ನಿರಂಜನ್‌ಗೆ ಚಾಕು ತೋರಿಸಿ, ಜೀವ ಬೆದರಿಕೆ ಒಡ್ಡಿದ್ದಾನೆ ಎಂದು ತಿಳಿದುಬಂದಿದೆ.
ಚಾಕು ತೋರಿಸಿದ ವ್ಯಕ್ತಿಯನ್ನು ಅದೇ ಮೊದಲು ನೋಡಿದ್ದು ಆತ ಯಾವುದೇ ಸಾಲಕ್ಕೆ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಿಲ್ಲ ಎಂದು ಮ್ಯಾನೇಜರ್ ದೂರಿನಲ್ಲಿ ಆರೋಪಿಸಿದ್ದಾರೆ. ರೇವು ನಾಯ್ಕ ಎಂಬಾತನ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : ಭೂತಾನ್ ಅಡಿಕೆ ಬಂದ್ರೂ ತೊಂದರೆ ಇಲ್ಲ- ಆರಗ ಜ್ಞಾನೇಂದ್ರ

[embedyt] https://www.youtube.com/watch?v=rTGqP21dgrM%5B/embedyt%5D

HOW TO APPLY : NEET-UG COUNSELLING 2023

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.