-ಸಿಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ
-ಮೈಸೂರಿನ ಬೋಗಾದಿ ನಗರದಲ್ಲಿ ನಡೆದ ಘಟನೆ
ಮೈಸೂರು: ಮನೆಯಲ್ಲೇ ಮೃತಪಟ್ಟ ಸ್ಥಿತಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ದೇಹ ಪತ್ತೆಯಾಗಿರುವ ಘಟನೆ ನಗರದ ಬೋಗಾದಿಯಲ್ಲಿ ನಡೆದಿದೆ.
ವರ್ಷಿಕಾ (20) ಮೃತಪಟ್ಟಿರುವ ಯುವತಿ. ಅನುಮಾನಾಸ್ಪದ ಸಾವು ಇದು ಎನ್ನಲಾಗಿದೆ.
ವರ್ಷಿಕಾ ಸಿಟಿ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಷಯ ಅಧ್ಯಯನ ಮಾಡುತ್ತಿದ್ದರು. ಮಹೇಶ್ ಎಂಬವರು ಈಕೆ ತಂದೆ. ಪರೀಕ್ಷೆಗೆ ರಾತ್ರಿ ಓದುತ್ತಿದ್ದಳು, ನಂತರ ಊಟ ಮಾಡಿ ಮಲಗಿದ್ದಳು ಎಂದು ಹೇಳಲಾಗಿದೆ.