Categories
ರಾಜಕೀಯ ರಾಜ್ಯ ಶಿವಮೊಗ್ಗ

ಶಿವಮೊಗ್ಗದಲ್ಲಿ ಇಂದು ಮೋದಿ ಮೋಡಿ!

ಶಿವಮೊಗ್ಗದಲ್ಲಿ ಇಂದು ಮೋದಿ ಮೋಡಿ!
– ಲೋಕಸಭೆ ಚುನಾವಣೆಗಾಗಿ ಶಿವಮೊಗ್ಗದಲ್ಲಿ ಮೋದಿ ಪ್ರಚಾರ:
– ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಶೂನ್ಯ ಸಂಚಾರ

NAMMUR EXPRESS NEWS
ಶಿವಮೊಗ್ಗ: ಲೋಕ ಸಭಾ ಚುನಾವಣೆ ಕಣ ರಂಗೇರಿದೆ. ಅದರಲ್ಲೂ ಶಿವಮೊಗ್ಗ ಲೋಕ ಸಭಾ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಲೋಕ ಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ. ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಶಿವಮೊಗ್ಗ ವಿಮಾನ ನಿಲ್ದಾಣದಿಂದ ನಗರದ ಅಲ್ಲಮಪ್ರಭು ಮೈದಾನದವರೆಗೆ ರಸ್ತೆ ಮಾರ್ಗವಾಗಿ ಪ್ರಧಾನಿ ಮೋದಿ ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸೋಮವಾರ ಮುಂಜಾನೆ 6 ರಿಂದ ಸಂಜೆ 6ರ ವರೆಗೆ ಶೂನ್ಯ ಸಂಚಾರವನ್ನು ಘೋಷಿಸಿದೆ. ಶೂನ್ಯ ಸಂಚಾರ ಮತ್ತು ಹೊರಗಿನಿಂದ ಅಧಿಕ ಸಂಖ್ಯೆಯ ವಾಹನಗಳು ಬರುತ್ತಿರುವುದರಿಂದ ಶಿವಮೊಗ್ಗದಲ್ಲಿ ಸೋಮವಾರ ಇಡೀ ದಿನ ವಾಹನಗಳ ಸಂಚಾರ ಬಂದ್ ಆಗಲಿದೆ.

ಮೂರು ಕ್ಷೇತ್ರದ ನಾಯಕರು ಹಾಜರ್!

ಶಿವಮೊಗ್ಗ, ಉತ್ತರ ಕನ್ನಡ, ಉಡುಪಿ ಚಿಕ್ಕಮಗಳೂರು ಲೋಕ ಸಭಾ ಕ್ಷೇತ್ರ ವ್ಯಾಪ್ತಿಗೆ ಅನುಗುಣವಾಗಿ ಈ ಪ್ರಚಾರ ನಡೆಯಲಿದೆ. ಯಡಿಯೂರಪ್ಪ, ರಾಘವೇಂದ್ರ, ವಿಜಯೇಂದ್ರ ಸೇರಿ ಎಲ್ಲಾ ಬಿಜೆಪಿ ನಾಯಕರು ಹಾಜರಿರಲಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.