Categories
ರಾಜಕೀಯ

ಕಾಫಿ ನಾಡಲ್ಲಿ ಉದ್ಯಮ, ಉದ್ಯೋಗ ಸೃಷ್ಟಿಗೆ ಪ್ಲಾನ್! – ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಗೌರವಾಧ್ಯಕ್ಷರಾದ ಸುಧಾಕರ್ ಶೆಟ್ಟಿ ನೇತೃತ್ವದಲ್ಲಿ ಸಭೆ – ಸರ್ಕಾರದ ಯೋಜನೆ ಯುವ ಜನತೆಗೆ ತಲುಪುತ್ತಿಲ್ಲ…

ಕಾಫಿ ನಾಡಲ್ಲಿ ಉದ್ಯಮ, ಉದ್ಯೋಗ ಸೃಷ್ಟಿಗೆ ಪ್ಲಾನ್!
– ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಗೌರವಾಧ್ಯಕ್ಷರಾದ ಸುಧಾಕರ್ ಶೆಟ್ಟಿ ನೇತೃತ್ವದಲ್ಲಿ ಸಭೆ
– ಸರ್ಕಾರದ ಯೋಜನೆ ಯುವ ಜನತೆಗೆ ತಲುಪುತ್ತಿಲ್ಲ…

NAMMUR EXPRESS NEWS
ಚಿಕ್ಕಮಗಳೂರು: ಕಾಫಿ ನಾಡಲ್ಲಿ ಉದ್ಯಮ, ಉದ್ಯೋಗ ಸೃಷ್ಟಿಗೆ ಯೋಜನೆ ರೂಪಿಸಲು ಚಿಕ್ಕಮಗಳೂರು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಗೌರವಾಧ್ಯಕ್ಷರಾದ ಸುಧಾಕರ್ ಶೆಟ್ಟಿ ನೇತೃತ್ವದಲ್ಲಿ ಸಭೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲಾ ಚೆಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ ಸದಸ್ಯರ ಜತೆ ಚಿಕ್ಕಮಗಳೂರು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಗೌರವಾಧ್ಯಕ್ಷರಾದ ಸುಧಾಕರ್ ಶೆಟ್ಟಿ ನೇತೃತ್ವದಲ್ಲಿ ಸಭೆ ನಡೆದು ಈ ಸಭೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಉದ್ಯಮಿಗಳಿಗೆ ಸಹಕಾರವಾಗುವ ಸೇತುವೆಯಂತಿರಬೇಕು. ಈ ಭಾಗದಲ್ಲಿರುವ ಹಲವಾರು ಯೋಜನೆಗಳು, ಹಾಗು ಸಬ್ಸಿಡಿಗಳು ಸದಸ್ಯರಿಗೆ ಸಿಗುತ್ತಿಲ್ಲ. ಈ ದೆಸೆಯಲ್ಲಿ ಅಧಿಕಾರಿಗಳೊಡನೆ ವಿಚಾರ ವಿನಿಮಯ ನಡೆಸಬೇಕೆಂಬ ಅಗ್ರಹವನ್ನು ಸುಧಾಕರ್ ಶೆಟ್ಟಿ ಮಾಡಿದರು.
ರಾಜ್ಯ ಸರ್ಕಾರದ KSSIDC ಮತ್ತು KIADB ಯ ಯಾವುದೇ ಹೊಸ ಲೇಔಟ್ ಗಳು, ಗ್ರಾಮೀಣ ಪ್ರದೇಶ ದ ಕ್ಷೇತ್ರಗಳಾದ, ಶೃಂಗೇರಿ, ಕೊಪ್ಪ ಎನ್ ಆರ್ ಪುರ, ಮೂಡಿಗೆರೆ, ಕಡೂರು, ತರೀಕೆರೆ ಹಾಗು ಚಿಕ್ಕಮಗಳೂರು ನಗರಕ್ಕೂ kssidc ಮತ್ತು kiadb ಯ ಹೊಸ ಯೋಜನೆಗಳು ಬರದೇ ಇರುವುದರಿಂದ,ಯುವಕರು ಮತ್ತು ಹೊಸ ಉದ್ಯಮಿಗಳು ಉದ್ಯಮ ಸ್ಥಾಪಿಸಲು ಪರದಾಡುತ್ತಿದ್ದಾರೆ.
ಹಾಗು ಮಹಿಳಾ ಉದ್ಯಮಿಗಳ ಯೋಜನೆ, PMEGP, PMFME, CGTMSE, ಮುದ್ರಾ, ಹಾಗು ಕೇಂದ್ರ ಸರ್ಕಾರದ ಹಲವಾರು ಯೋಜನೆಗಳು ಉದ್ಯಮಿಗಳಿಗೆ ಪೂರಕವಾಗಿದೆ. ಆದರೆ ಆ ಯೋಜನೆಗಳು ಸದಸ್ಯರಿಗೆ ಮುಟ್ಟುತ್ತಿಲ್ಲ. ಈ ದೆಸೆಯಲ್ಲಿ ಕಾರ್ಯೊನ್ಮುಖರಾಗಬೇಕೆನ್ನುವ ಸಲಹೆಯನ್ನು ಸಹ ಸದಸ್ಯರಿಗೆ ಈ ವಿಚಾರ ವಿನಿಮಯದಲ್ಲಿ ತಿಳಿಸಿದರು.
ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಕರೆಯುವ ಸಿಂಗಲ್ ವಿಂಡೋ ಮೀಟಿಂಗ್ ಕೇವಲ ನಾಮಕಾವಸ್ತೆಗಿದೆ. ಸದಸ್ಯರಿಗೆ ಅನುಕೂಲವಾಗುವ ದೃಷ್ಟಿಯಲ್ಲಿ ಪ್ರತಿಯೊಂದು ಸಭೆಯಲ್ಲೂ ಸದಸ್ಯರ ಭಾವನೆಗಳನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಬೇಕಾಗಿರುವುದು ಸದಸ್ಯರ ಕರ್ತವ್ಯ ಎನ್ನುವ ಮಾತನ್ನು ಸುಧಾಕರ್ ಶೆಟ್ಟಿ ಯವರು ಒತ್ತಿ ಹೇಳಿದರು.
ಅಧ್ಯಕ್ಷರಾದ ಶಾಂತಕುಮಾರ್ ಹೆಗ್ಡೆಯವರು, ಮಾಜಿ ಅಧ್ಯಕ್ಷರಾದ ಮಹೇಶ್, ಸದಸ್ಯರಾದ ಜಿತೇಂದ್ರ, ಖಜಾಂಚಿಗಳಾದ ಕಾರ್ತಿಕ್ ಹಾಗೂ ಶಿವಣ್ಣ ಈ ಚರ್ಚೆಯಲ್ಲಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.